ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ.
ಗಜೇಂದ್ರಗಡ:ಸತ್ಯಮಿಥ್ಯ (ಸೆ-23).
ದೇಶದ ಆರ್ಥಿಕತೆಯನ್ನು ಸದೃಢಗೊಳಿಸಲು ಮತ್ತು ದೇಶವನ್ನು ಅಭಿವೃದ್ಧಿ ಪತದತ್ತ ಸಾಗಲು ಅಧಿಕ ಪ್ರಮಾಣದಲ್ಲಿ ಯುವಕರು ಬಿಜೆಪಿ ಪಕ್ಷದ ಸದಸ್ಯತ್ವ ಪಡೆದು ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಬೇಕು ಎಂದು ಮಾಜಿ ಸಚಿವರಾದ ಶ್ರೀ ಕಳಕಪ್ಪ ಬಂಡಿ ತಿಳಿಸಿದರು.
ತಾಲ್ಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಕೊಪ್ಪ,ರಾಮಾಪುರ,ಚಿಲಝರಿ, ವೀರಾಪುರ ಗ್ರಾಮಗಳಲ್ಲಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲ ಘಟಕದ ವತಿಯಿಂದ ಸೋಮವಾರ ನಡೆಸಿದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುತ್ತಣ್ಣ ಕಡಗದ, ಉಮೇಶ ಮಲ್ಲಾಪುರ, ಬಾಲಾಜಿರಾವ್ ಬೊಸ್ಲೆ, ಪವಾಡೆಪ್ಪ ಗುಡದೂರ,ಪರಸಪ್ಪ ಪೂಜಾರ, ನಿಂಗಪ್ಪ ಹಡಪದ,ಮೈಲ್ಲಾರಪ್ಪ ಮಂಗಳೂರು,ಬಸುವರಾಜ ಮಾದರ,ಪರಶು ಗುಡದೂರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ಚನ್ನು. ಎಸ್.