ಜಿಲ್ಲಾ ಸುದ್ದಿ

ಅಕ್ರಮ ಕಟ್ಟಡಗಳ ಮಾಹಿತಿ ಇದ್ದರು ಕಣ್ಣು ಮುಚ್ಚಿ ಕುಳಿತ ಪುರಸಭೆ ಆಡಳಿತ.

Share News

ಅಕ್ರಮ ಕಟ್ಟಡಗಳ ಮಾಹಿತಿ ಇದ್ದರು ಕಣ್ಣು ಮುಚ್ಚಿ ಕುಳಿತ ಪುರಸಭೆ ಆಡಳಿತ.

ಪ್ರಭಾವಿ ವ್ಯಕ್ತಿಗಳಿಂದಲೆ ಸರಕಾರಿ ಗಾಯರಾಯಣ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ

ಮುಗಳಖೋಡ :ಸತ್ಯಮಿಥ್ಯ ( ನ-27).

ರಾಯಬಾಗ ತಾಲೂಕಿನ ಹಾರೂಗೇರಿ ಮತ್ತು ಮುಗಳಖೋಡ ಪಟ್ಟಣವನ್ನು ಬೌಗೋಳಿಕವಾಗಿ ತುಲನೆ ಮಾಡಿ ನೋಡಿದರೆ ಹಾರೂಗೇರಿ ಪಟ್ಟಣದಲ್ಲಿ ಒಂದಿಷ್ಟು ಸರಕಾರಿ ಗಾಯರಾಯಣ ಜಾಗವಿಲ್ಲ.

ಆದರೆ ಮುಗಳಖೋಡ ಪಟ್ಟಣದಲ್ಲಿ ಸರಕಾರಿ ಜಾಯರಾಯಣ ಹಾಗು ಲೋಕೋಪಯೋಗಿ ಇಲಾಖೆಯ ಭೂಮಿ ಸೇರಿ ಒಟ್ಟು 150 ಎಕರೆ ಜಾಗವಿದೆ. ಆದರೂ ವ್ಯವಸ್ಥಿತ ಬಸ್ ನಿಲ್ದಾಣವಾಗಲಿ, ಗ್ರಂಥಾಲಯವಾಗಲಿ, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸಾರ್ವಜನಿಕ ಶೌಚಾಲಯ ಹೀಗೆ ಇನ್ನೂ ಹತ್ತು ಹಲವಾರು ಅವಶ್ಯಕ ಮೂಲಬೂತ ಸೌಕರ್ಯಗಳು ಮರೀಚಿಕೆಯಾಗಿವೆ.

ಸರಕಾರಿ ಗಾಯರಾಯಣ ಜಾಗಕ್ಕಿಲ್ಲ ಅಧಿಕಾರಿಗಳ ಆಸರೆ:
ಇದರ ಬಗ್ಗೆ ಸ್ಥಳೀಯ ಪುರಸಭೆ ಅಧಿಕಾರಿಗಳನ್ನು ಕೇಳಿದರೆ, ಪ್ರಗತಿಯಲ್ಲಿದೆ (ಪ್ರೊಸಸ್) ನಲ್ಲಿದೆ ಎನ್ನುತ್ತಾರೆ. ಆದರೆ ಕಟ್ಟಡದ ಪರವಾಣಿಗೆ ಇಲ್ಲದೆ ಪಟ್ಟಣದಲ್ಲಿನ ಗಾಯರಾಯಣ ಜಾಗದಲ್ಲಿ ಅಕ್ರಮ ಕಟ್ಟಡಗಳು ನಡೀತಾ ಇದ್ದರೂ ನಮಗೇನೂ ಗೊತ್ತಿಲ್ಲ ಸ್ವಾಮೀ ಎನ್ನುವಂತೆ  ಪುರಸಭೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ.ಕೇವಲ ಸಂಬಳಕ್ಕಾಗಿ ಮಾತ್ರ ಸರಕಾರಿ ಕೆಲಸ ಮಾಡುತ್ತಿದ್ದಾರೆ, ಏನೇ ಕೇಳಿದರು ಅದಕ್ಕೆ ಸಮಜಾಯಿಸಿ ಕಳುಹಿಸಿ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಇವರಿಗೆ ಸಾರ್ವಜನಿಕ ಹಿತಾಸಕ್ತಿ ಎನ್ನುವುದು ಕಿಂಚಿತ್ತೂ ಇಲ್ಲ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಅಕ್ರಮ ಕಟ್ಟಡಗಳ ಮಾಹಿತಿ ಇದ್ದರು ಕಣ್ಣು ಮುಚ್ಚಿ ಕುಳಿತ ಪುರಸಭೆ ಆಡಳಿತ:

ಸರ್ವೇ ಸಂಖ್ಯೆ 760 ರಲ್ಲಿ ನಡೆಯುತ್ತಿರುವ ಕೆಲವು ಅಕ್ರಮ ಕಟ್ಟಡಗಳು ಸಾಂಗವಾಗಿಯೇ ಸಾಗುತ್ತಿವೆ. ಈ ಕುರಿತು ಮುಖ್ಯಾಧಿಕಾರಿಗಳನ್ನು ಕೇಳಿದರೆ ನಾವು ಪರವಾಣಿಗೆ ಕೊಟ್ಟಿಲ್ಲ. ಗ್ರಾಮ ಪಂಚಾಯತ್ ಇದ್ದಾಗ ಅದೇನೇನೋ ಆಗಿವೆ ಎನ್ನುವ ಉಡಾಫೇ ಉತ್ತರ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇನ್ನೂ ಇದೇ ವಿಷಯವಾಗಿ ಬೆಳಗಾವಿಯ ನಗರಾ ಭಿವೃದ್ಧಿ ಕೋಶಧಿಕಾರಿಗಳನ್ನು ಕೇಳಿದರೆ ಮುಖ್ಯಾಧಿಕಾರಿಗಳಿಗೆ ಹೇಳಿದ್ದೀನಲ್ಲ ಎಂದು ಹೇಳಿ ಫೋನ್ ಕಟ್ ಮಾಡ್ತಾರೆ. ಇದನ್ನೆಲ್ಲಾ ನೋಡಿದರೆ ಜಿಲ್ಲಾಡಳಿತವು ಪ್ರಭಾವಿ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಭವಿಷ್ಯದಲ್ಲಿ ಪಟ್ಟಣದ ಅಭಿವೃದ್ಧಿಗೆ ಸರಕಾರಿ ಜಾಗ ಎಷ್ಟು ಮುಖ್ಯ ಅನ್ನೋದನ್ನು ಅಧಿಕಾರಿಗಳು ಯಾಕೆ ಅರಿತುಕೊಳ್ಳುತ್ತಿಲ್ಲ ಎನ್ನುವುದು ಸಾರ್ವಜನಿಕರ ಮೂಖ ಪ್ರಶ್ನೆಯಾಗಿದೆ. ಇನ್ನಾದರೂ ಆಡಳಿತ ಜಾಗ್ರತ ಆಗುತ್ತಾ? ಅಕ್ರಮಗಳಿಗೆ ಕಡಿವಾಣ ಹಾಕುತ್ತಾ? ಅನ್ನೋದನ್ನ ಕಾಯ್ದು ನೋಡಬೇಕಿದೆ.

” ನಾನು ಕೆಲದಿನಗಳ ಹಿಂದೆ ಸೈಕಲ್ ಮೇಲೆ ಹೊರಗಡೆ ಕೆಲಸಕ್ಕೆ ಹೋಗಿ . ವಾಪಸ್ ಬರುವಾಗ ನಮ್ಮ 6ನೇ ವಾರ್ಡಿನ ಪುರಸಭೆ ಹಿಂಬದಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಮಾಲಿಕರು ರಸ್ತೆ ಮದ್ಯದಲ್ಲಿ ಉಸುಕು, ಕಬ್ಬಿಣ ಹಾಗೂ ಕಟ್ಟಡ ಸಾಮಗ್ರಿಗಳನ್ನು ಹಾಕಿದ್ದಾರೆ, ಸೈಕಲ್ ಗಾಲಿ ಸ್ಲಿಪ್ ಆಗಿ ಬಿದ್ದು. ಮೊದಲೇ ರಾಡ್ ಹಾಕಿದ ಕಾಲಿಗೆ ಗಾಯ ಆಗಿ ಒಂದುವಾರ ಆಸ್ಪತ್ರೆಗೆ ಅಲೆದಾಡಿದ್ದಿನಿ.

ಶ್ರೀಶೈಲ ಐಹೊಳೆ,
6ನೇ ವಾರ್ಡ್ ನಿವಾಸಿ ಮುಗಳಖೋಡ

ಮುಗಳಖೋಡ ಪಟ್ಟಣದಲ್ಲಿನ ಸರಕಾರಿ ಗಾಯರಾಣ ಜಾಗದಲ್ಲಿ ನಡೆಯತ್ತಿರುವ ಅಕ್ರಮ ಕಟ್ಟಡಗಳ ಬಗ್ಗೆ ಪರಿಶೀಲನೆ ಮಾಡಿ ಬಂದ ಮಾಡಲು ರಾಯಬಾಗದ ತಹಶಿಲ್ದಾರರಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಹೇಳುತ್ತೇನೆ
– ಮಲ್ಲಿಕಾರ್ಜುನ ಕಲಾದಗಿ(ಪಿಡಿ)
ನಗರಾಭಿವೃದ್ಧಿ ಕೋಶಾಧಿಕಾರಿಗಳು ಬೆಳಗಾವಿ

ಲೇಖನ : ಸಂತೋಷ ಮುಗಳಿ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!