ಜಿಲ್ಲಾ ಸುದ್ದಿ

ಸಂವಿಧಾನದ ರಕ್ಷಣೆ ಪ್ರತಿ ನಾಗರಿಕನ ಹೊಣೆ – ಡಿ. ಪ್ರಕಾಶ.

Share News

ಸಂವಿಧಾನದ ರಕ್ಷಣೆ ಪ್ರತಿ ನಾಗರಿಕನ ಹೊಣೆ – ಡಿ. ಪ್ರಕಾಶ.

ಗಜೇಂದ್ರಗಡ:ಸತ್ಯಮಿಥ್ಯ (ನ-27).

ಸಂವಿಧಾನದ ರಕ್ಷಣೆ ಪ್ರತಿ ನಾಗರಿಕನ ಹೊಣೆ. ದೇಶದ ಪ್ರತಿ ಪ್ರಜೆಯು ಸಂವಿಧಾನಕ್ಕೆ ಗೌರವ ಕೊಡಬೇಕು. ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ.ಅದು ದೇಶದ ಆತ್ಮವಾಗಿದೆ ಎಂದು ಪಿಎಸ್ಐ ಡಿ.ಪ್ರಕಾಶ್ ಹೇಳಿದರು.

ಪಟ್ಟಣದ ಕಟ್ಟಿ ಬಸವೇಶ್ವರ ರಂಗಮಂದಿರದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಏರ್ಪಡಿಸಿದ್ದ 76ನೇ ಸಂವಿಧಾನದ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸಂವಿಧಾನವು ಮೂಲಭೂತ ಕಾನೂನು ಆಗಿದ್ದು ಇದು ಸರ್ಕಾರದ ಅಧಿಕಾರಿಗಳ ಮತ್ತು ನಾಗರಿಕ ಹಕ್ಕುಗಳು ಹಾಗೂ ಕರ್ತವ್ಯ ನಿರ್ಧರಿಸುತ್ತದೆ.ಈ ದೇಶದ ಆಡಳಿತದ ಚೌಕಟ್ಟನ್ನು ಒದಗಿಸುತ್ತದೆ ಪ್ರಜಾಪ್ರಭುತ್ವ ಜಾತ್ಯತೀತತೆ ಮತ್ತು ಸಮಾನತೆ ತತ್ವವನ್ನು ಎತ್ತಿ ಹಿಡಿಯುತ್ತದೆ ಯಾವುದೇ ಅನ್ಯಾಯ ಅಥವಾ ಅಧಿಕಾರದ ದುರುಪಯೋಗವಾಗದಂತೆ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಮಹೇಶ ನೀಡಶೇಸಿ,ಶರಣಪ್ಪ ಬೆಟಗೇರಿ,ಸಿದ್ದು ಗೊಂಗಡಶೆಟ್ಟಿಮಠ,ಡಾ. ಜಯಶ್ರೀ ಪಾಟೀಲ್,ಬಸವರಾಜ ಬಡಿಗೇರ,ಸಂಗಮೇಶ ಅಡಗತ್ತಿ,ಅಂದಪ್ಪ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!