ತಾಲೂಕು

ಗಜೇಂದ್ರಗಡ – ರಾಜ್ಯಮಟ್ಟದ ವ್ಯಕ್ತಿತ್ವ ವಿಕಾಸನ ಪರೀಕ್ಷೆಯಲ್ಲಿ ಬಿಎಸ್ಎಸ್ ಕಾಲೇಜಿಗೆ ಪ್ರಥಮ ಸ್ಥಾನ.

ರಾಜ್ಯಮಟ್ಟದ ಯುವಚೇತನ ವ್ಯಕ್ತಿತ್ವ ವಿಕಸನ ಪರೀಕ್ಷೆಯಲ್ಲಿ ಗಜೇಂದ್ರಗಡದ BSS ಕಾಲೇಜಿನ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ

Share News

ಗಜೇಂದ್ರಗಡ – ರಾಜ್ಯಮಟ್ಟದ ವ್ಯಕ್ತಿತ್ವ  ವಿಕಾಸನ ಪರೀಕ್ಷೆಯಲ್ಲಿ ಬಿಎಸ್ಎಸ್ ಕಾಲೇಜಿಗೆ ಪ್ರಥಮ ಸ್ಥಾನ.

ರಾಜ್ಯಮಟ್ಟದ ಯುವಚೇತನ ವ್ಯಕ್ತಿತ್ವ ವಿಕಸನ ಪರೀಕ್ಷೆಯಲ್ಲಿ ಗಜೇಂದ್ರಗಡದ BSS ಕಾಲೇಜಿನ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ

ಗಜೇಂದ್ರಗಡ : ಸತ್ಯಮಿಥ್ಯ (ಜೂಲೈ -06)

ನಗರದ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ವ್ಯಕ್ತಿತ್ವ ವಿಕಾಸನಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದ ಯುವಚೇತನ ಪರೀಕ್ಷೆ ನಡೆಯಿತು.

ಕಾರ್ಯಕ್ರಮವನ್ನು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಕೇಂದ್ರದವರು ನಡೆಸಿಕೊಟ್ಟರು.ರಾಜ್ಯಮಟ್ಟದ ಯುವಚೇತನ ಪರೀಕ್ಷೆಯಲ್ಲಿ  ಬಿ ಎಸ್ ಎಸ್ ಕಾಲೇಜಿನ  ವಿದ್ಯಾರ್ಥಿನಿ ಕುಮಾರಿ ಭಾಗ್ಯ ಗೌಡ್ರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

*ಭಾಗ್ಯ ಗೌಡ್ರ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ *

ವಿವೇಕಾನಂದ ಕೇಂದ್ರದ ಕಾರ್ಯಕರ್ತರಾದ ಶ್ರೀ ಅರವಿಂದ ಅವರು ಪ್ರಶಸ್ತಿ ಪತ್ರ ಮತ್ತು ರೂ. 5000 ಗಳ ಬಹುಮಾನವನ್ನು ಚೆಕ್‌ ರೂಪದಲ್ಲಿ ವಿತರಿಸಿದರು.

ರಾಜ್ಯದ ಒಟ್ಟು 38 ಕಾಲೇಜುಗಳ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ IQAC ಸಂಚಾಲಕರಾದ ಶ್ರೀಮತಿ ಸರಸ್ವತಿ, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಶ್ರೀ ಸಿದ್ದೇಶ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜೀವಿತ ಹಾಗೂ ಉಪನ್ಯಾಸಕರಾದ ಡಾ. ಮಂಜುನಾಥ ಸುಣಗಾರ್‌ ಮತ್ತು ಯಮನಪ್ಪ ಮೇಗೂರು ಹಾಗೂ ಆಂಗ್ಲ ವಿಭಾಗದ ಉಪನ್ಯಾಸಕರಾದ ಶ್ರೀ ಶರಣಪ್ಪ ರೋಣದ ಹಾಜರಿದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!