ಮಕ್ಕಳು, ಗರ್ಭಿಣಿಯರು, ಬಾಣಂತಿಯರನ್ನು ಅಪೌಷ್ಟಿಕತೆಯಿಂದ ಹೊರತರಲು “ಪೋಷಣ್ ಮಾಸ”ಆಚರಣೆ – ಸಿಡಿಪಿಓ ಬೆಟ್ಟದಪ್ಪ
ಕೊಪ್ಪಳ:ಸತ್ಯಮಿಥ್ಯ (ಅ -02).
ಅಪೌಷ್ಟಿಕತೆಯಿಂದ ಬಳಲುವವರು ವಿವಿಧ ರೋಗಗಳಿಗೆ ಈಡಾಗುತ್ತಿದ್ದಾರೆ. ಮೊದಲು ಅವರಲ್ಲಿರುವ ಅನಾರೋಗ್ಯವನ್ನು ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ನೀಡಬೇಕು ಎಂದು ಸಿಡಿಪಿಓ ಬೆಟ್ಟದಪ್ಪ ಮಾಳೇಕೊಪ್ಪ ತಿಳಿಸಿದರು.
ಜಿಲ್ಲೆಯ ಕುಕುನೂರು ತಾಲೂಕಿನ ಕೋಮಲಾಪುರದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನು ಹಿರಿಯ ಮೇಲ್ವಿಚಾರಕಿ ಜಯಲಕ್ಷ್ಮಿ ಮಾತನಾಡಿ, ‘ಕಿಶೋರಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷ ಕರಿಯಪ್ಪ ವಹಿಸಿಕೊಂಡಿದ್ದರು.ಕಾರ್ಯಕ್ರಮ ಚಾಲನೆಯನ್ನು ಡೊಳ್ಳು ಬಾರಿಸುವುದರ ಮೂಲಕ ಎಲ್ಲಾ ಗಣ್ಯರು ಚಾಲನೆ ನೀಡಿದರು. ಶಾಲಾ ಮಕ್ಕಳಿಂದ ಕೋಲಾಟ, ಅಂಗನವಾಡಿ ಕಾರ್ಯಕರ್ತೆಯರಿಂದ ಕೈ ತೊಳೆಯುವ ವಿಧಾನದ ನೃತ್ಯ, ಘೋಷ ವ್ಯಾಕ್ಯಗಳ ಮೂಲಕ ಬುತ್ತಿಯ ಜೊತೆಗೆ ಮೆರವಣಿಗೆ ಮಾಡಿಕೊಂಡು ವೇದಿಕೆಗೆ ಬರಲಾಯಿತು.
ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ, ಹಿರಿಯ ನಾಗರಿಕ ಸನ್ಮಾನ ನೆರವೇರಿಸಲಾಯಿತು.
ಬಸಮ್ಮ ಅಂಗನವಾಡಿ ಕಾರ್ಯಕರ್ತೆಯರು ಪ್ರಾರ್ಥಿಸಿದರು. ರೇಣುಕಾ ಸ್ವಾಗತಿಸಿದರು, ನೇತ್ರಾವತಿ ನಿರೂಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿಗ್ರಾ. ಪಂ. ಸದಸ್ಯರಾದ ಮುತ್ತವ್ವ, ಯಂಕಮ್ಮ, ಶಿಕ್ಷಕರಾದ ಶಂಕ್ರಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿ ಮಹೇಶ, ಬನ್ನಿಕೊಪ್ಪ ವಲಯದ ಕಾರ್ಯಕರ್ತರು, ಇಲಾಖೆ ಎಲ್ಲಾ ಹಿರಿಯ /ಕಿರಿಯ ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಮದ ಗುರುಹಿರಿಯರು ಮಹಿಳೆಯರು ಮತ್ತು ಮಕ್ಕಳು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.