ತಾಲೂಕು

ತುಂಗಳ ಏತ ನೀರಾವರಿ – ಇಲಾಖೆ ಸಂಪೂರ್ಣ ವಿಫಲವಾಗಿದೆ

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಲುವೆಗೆ ನೀರು ಬರುತ್ತಿಲ್ಲಾ: ಶಾಸಕ ಜಗದೀಶ ಗುಡಗುಂಟಿ.

Share News

ತುಂಗಳ ಏತ ನೀರಾವರಿ – ಇಲಾಖೆ ಸಂಪೂರ್ಣ ವಿಫಲವಾಗಿದೆ ­

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಲುವೆಗೆ ನೀರು ಬರುತ್ತಿಲ್ಲಾ: ಶಾಸಕ ಜಗದೀಶ ಗುಡಗುಂಟಿ 

ಜಮಖಂಡಿ:ಸತ್ಯಮಿಥ್ಯ ( ಜುಲೈ -14)

ಕೃಷ್ಣಾ ನದಿಯಿಂದ ಹಲ್ಯಾಳ ಪಂಪ ಸೆಟ್ಟಗೆ ನೀರು ಬಂದು, ಅಥಣಿ ತಾಲೂಕಿನ ರೈತರು ಕಾಲುವೆಗಳಿಗೆ ಪೈಪ್ ಲೈನಗಳಿಗೆ ಮೋಟಾರ್ ಗಳನ್ನು ಹಚ್ಚಿರುವುದರಿಂದ , ಈ ಭಾಗಕ್ಕೆ ನೀರು ಬರುತ್ತಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ , ಆದರಿಂದ ನಮ್ಮ  ಭಾಗದ ರೈತಾಪಿ ಜನರಿಗೆ ಈ ನೀರಾವರಿ ಯೋಜನೆಯು ಅನುಕೂಲವಾಗುತ್ತಿಲ್ಲ. ಜಾಕ್ವೆಲನಲ್ಲಿ ನೀರು ಇಲ್ಲದೆ ಹೇಗೆ ಕಾಲುವೆಗಳಿಗೆ ನೀರು ಬೀಡುತ್ತೀರಿ ಸ್ವಲ್ಪ ಎಚ್ಚರದಿಂದ ಕೆಲಸ ಮಾಡಿ ನಮ್ಮ ರೈತರಿಗೆ ಅನುಕೂಲವಾಗುವಂತೆ ನೀರು ಬರುವಂತೆ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕ  ಜಗದೀಶ್ ಗುಡಗುಂಟಿ ಖಡಕ್ಕಾಗಿ ಆದೇಶಿಸಿದರು .

ಸಾವಳಗಿ ಸಮೀಪದ ತುಂಗಳ ಜಾಕ್ವೆಲಗೆ ಶನಿವಾರ ಭೇಟಿ ನೀಡಿದ ಜಮಖಂಡಿ ಶಾಸಕ ನಾಡೋಜ ಜಗದೀಶ್ ಗುಡಗುಂಟಿ. ಸುದ್ದಿಗಾರರೊಂದಿಗೆ ಮಾತನಾಡಿ ಅಥಣಿ ಭಾಗದ ರೈತರು ಕಾಲುವೆಗಳಿಗೆ ಪೈಪ್ ಮೋಟಾರ್ ಹಚ್ಚಿ ಆ ಭಾಗಕ್ಕೆ ಹೆಚ್ಚು ನೀರು ಹರಿಸುತ್ತಿರುವುದರಿಂದ ನಮ್ಮ ಭಾಗಕ್ಕೆ ಹೆಚ್ಚಾಗಿ ನೀರು ಬರುತ್ತಿಲ್ಲ ಅಧಿಕಾರಿಗಳು ಈ ಭಾಗಕ್ಕೆ ನೀರು ಹರಿಸಲು ಮುಂದಾಗುತ್ತಿಲ್ಲ, ಸೋಮವಾರ ಅಧಿವೇಶನ ಪ್ರಾರಂಭವಾಗಲಿದೆ ಅಧಿವೇಶನದಲ್ಲಿ ಮೊದಲ ಪ್ರಶ್ನೆ ಸಾವಳಗಿ ತುಂಗಳ ಏತ ನೀರಾವರಿ ಬಗ್ಗೆ ಇದೆ ಈ ಭಾಗದ ರೈತರಿಗೆ ಅನುಕೂಲವಾಗುಂತೆ ಕೆಲಸ ಮಾಡುತ್ತೇನೆ, ತುಂಗಳ ಜಾಕ್ವೆಲನಲ್ಲಿ ಯಾವುದೇ ತೊಂದರೆ ಇಲ್ಲ, ಅಥಣಿ ಭಾಗದವರು ನೀರು ಬೀಡುತ್ತಿಲ್ಲಾ, ಆದ್ದರಿಂದ ಮೇಲಾಧಿಕಾರಿಗಳ ಜೊತೆ ಮಾತನಾಡಿ ನೀರನ್ನು ಬಿಡಿಸಲು ಪ್ರಯತ್ನ ಮಾಡುತ್ತೇನೆ, ಸದನದಲ್ಲಿ ನೀರಾವರಿ ಸಚಿವರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಜೋತೆ ಮಾತನಾಡಿ ಈ ಭಾಗಕ್ಕೆ ಶಾಶ್ವತವಾಗಿ ಏತ ನೀರಾವರಿ ಯೋಜನೆ ಮಾಡಿಸೋಣ ಎಂದು ಭರವಸೆ ನೀಡಿದರು.‌

ಹೊಸ ಜಾಕ್ವೆಲ ನಿರ್ಮಾಣ: ತುಂಗಳ ಹಾಗೂ ಅಥಣಿ ಗಡಿ ಭಾಗದಲ್ಲಿ ಇರುವಂತಹ ಜಾಕ್ವೆಲನ ತುಬಚಿ ಭಾಗಕ್ಕೆ ಹೊಸ ಜಾಕ್ವೆಲನ ನಿರ್ಮಾಣ ಮಾಡೋಣ ಇಲ್ಲಿ ಇರುವಂತಹ ಉಪಕರಣಗಳು ತುಬಚಿ ಭಾಗದಲ್ಲಿ ಅವಳವಡಿಸಿ ಕೃಷ್ಣಾ ನದಿ ಇರುವುದರಿಂದ ಅಲ್ಲಿ ಜಾಕ್ ವೆಲ್ ನಿರ್ಮಿಸಿದರೆ ನದಿಯಿಂದ ಕಾಲುವೆಗಳಿಗೆ ನೀರು ಹರಿಸಬಹುದು ಇದರಿಂದ ಐದು ಹಳ್ಳಿಗಳಿಗೆ ಸಂಪೂರ್ಣ ನೀರಾವರಿ ಯೋಜನೆಯಾಗುತ್ತದೆ ಎಂದು ಶಾಸಕರು ಹೇಳಿದರು.

 

ಜಾಕ್ವೆಲನಲ್ಲಿ ನೀರು ಖಾಲಿ: ಹಲ್ಯಾಳದಿಂದ ನೀರು ಬರುವುದು, ನಡುಬಾಗದಲ್ಲಿ ರೈತರು ಅಥಣಿ ಭಾಗದ ರೈತರು ಕಾಲುವೆಗಳಿಗೆ ಪೈಪ್ ಮೋಟಾರ್ ಹಚ್ಚಿ ನೀರು ತಮ್ಮ ಜಮೀನುಗಳಿಗೆ ಹರಿಸುವುದುರಿಂದ ತುಂಗಳ ಜಾಕ್ವೆಲಗೆ ನೀರು ಖಾಲಿಯಾಗಿದೆ, ಇದರಿಂದ ತುಂಗಳ ಸಾವಳಗಿ ಏತ ನೀರಾವರಿ ಯೋಜನೆಗೆ ಜಮೀನುಗಳಿಗೆ ನೀರು ಹೋಗುತ್ತಿಲ್ಲ ಎಂದು ರೈತರು ದೂರಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಅರವಿಂದಗೌಡ ಪಾಟೀಲ, ಬಿಜೆಪಿ ನಗರ ಅಧ್ಯಕ್ಷರಾದ ಅಜಯ ಕಡಪಟ್ಟಿ, ಹಿರಿಯರಾದ ಪುಲಿಕೇಶಿ ನಾಂದ್ರೇಕರ, ಚಿದಾನಂದ ಬಿರಾದಾರ, ರಾಜು ಹಿರೇಮಠ, ಗ್ರಾಮ ಪಂಚಾಯತ ಸದಸ್ಯರಾದ ಬಸವರಾಜ ಪರಮಗೌಡ, ಗಾಮೇಶ ಬಾಪಕರ, ಸುಜೀತಗೌಡ ಪಾಟೀಲ, ಭರತೇಶ ಜಮಖಂಡಿ, ಮುಖಂಡರಾದ ಕಿರಣ ಕದಂ, ರವಿ ಹಿಪ್ಪರಗಿ, ರಾಜು ಕರಾಬೆ, ಲಕ್ಷ್ಮಣ್ ಪುಂಡೆ, ಸದಾಶಿವ ಹೋನವಾಡ, ಪರಶುರಾಮ್ ಕುಂಬಾರ, ಸುರೇಶ ಮನಗೂಳಿ, ತುಕಾರಾಮ ಹಾಜವಗೋಳ, ಅಧಿಕಾರಿಗಳು ಸೇರಿದಂತೆ ಸುತ್ತ ಮುತಲಿನ ಗ್ರಾಮದ ರೈತರು ಹಿರಿಯರು ಉಪಸ್ಥಿತರಿದ್ದರು.

ವರದಿ :ಸಚಿನ್ ಜಾದವ್ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!