ರಾಜ್ಯ ಸುದ್ದಿ

ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಮುಡಾ?

ನಿರಂತರ ಹೋರಾಟಕ್ಕೆ ಸಜ್ಜಾಗಿರುವ ಬಿಜೆಪಿ.

Share News

ಸಿದ್ದರಾಮಯ್ಯಗೆ ಕಂಟಕವಾಗುತ್ತಾ ಮುಡಾ?

ಬೆಂಗಳೂರು -ಸತ್ಯಮಿಥ್ಯ 

ಇತ್ತೀಚಿಗೆ ಬಹಳಷ್ಟು ಸದ್ದು ಮಾಡುತ್ತಿರುವ ಮೂಡಾ ಪ್ರಕರಣದ ಅಸಲಿ ಗತ್ತೇನು? ಈ ಪ್ರಕರಣ ಸರ್ಕಾರವನ್ನೇ ಅಲ್ಲಾಡಿಸುತ್ತಿದೆಯೇ? ಇಲ್ಲ ಸಿದ್ದರಾಮಯ್ಯನವರ ಪವರ್ ಕಡಿಮೆ ಮಾಡುವ ತಂತ್ರವೇ? ಹೀಗೆ ಹತ್ತು ಹಲವು ಸಂಶಯಗಳು ಮೂಡಬಹುದು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರ ಹೆಸರಿನಲ್ಲಿರುವ ಈ ಆಸ್ತಿ ಮೈಸೂರಿನ ಕೆಸರೆ ಸಮೀಪವಿದೆ. 3 ಎಕರೆ 16 ಗುಂಟೆಯ ಈ ಜಾಗ 464 ಸರ್ವೆ ನಂಬರ್ ನಲ್ಲಿದ್ದು ಇದರ ಮೂಲ ಮಾಲಿಕ ನಿಂಗ ಬಿನ್ ಜವರ ಎಂಬುವರಾಗಿದ್ದಾರೆ.

2024ರಲ್ಲಿ ಬೆಳಕಿಗೆ ಬಂದ ಈ ಪ್ರಕರಣದ ಸ್ಥಳ 1996 ರಲ್ಲಿ ಅಂತಿಮ ನೋಟಿಫಿಕೇಶನ್ ಗೆ ಒಳಗಾಗಿತ್ತು. ಆ ವೇಳೆಗೆ ಮೂರು ಲಕ್ಷ ಇಪ್ಪತ್ತೈದು ಸಾವಿರ ಮೂಡದಿಂದ ಹೊಲದ ಮಾಲೀಕರು ಪಡೆದಿದ್ದಾರೆ. ಸರ್ವೇ ನಂಬರ್ 464ರ ಜಾಗ 2002ರಲ್ಲಿ ಬಡಾವಣೆಯಾಗಿ ಮತ್ತು 2003 ರಲ್ಲಿ ನಿವೇಶನವಾಗಿ ಸಾರ್ವಜನಿಕರಿಗೆ ಹಂಚಿಕೆಯಾಗಿದೆ. ಅಲ್ಲದೆ 2006ರಲ್ಲಿ ಈ ಸ್ಥಳವನ್ನು ಪ್ರಾಧಿಕಾರದ ಆಸ್ತಿ ಎಂದು ಆರ್ ಟಿ ಸಿ ಅಡಿಯಲ್ಲಿದೆ. ಇಷ್ಟೆಲ್ಲಾ ನಿವೇಶನಗಿದ್ದರೂ ಕೂಡ ಈ ಜಾಗವನ್ನು ಸಿದ್ದರಾಮಯ್ಯನವರ ಅಳಿಯ ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡುತ್ತಾರೆ. ಇಷ್ಟೇ ಆಗಿದ್ದರೆ ಈ ಪ್ರಕರಣ ಸುದ್ದಿಯಾಗುತ್ತಿರಲಿಲ್ಲ But ಮಲ್ಲಿಕಾರ್ಜುನ ಸ್ವಾಮಿ ಈ ಭೂಮಿಯನ್ನ ಸಿದ್ದರಾಮಯ್ಯನವರ ಹೆಂಡತಿ ಪಾರ್ವತಮ್ಮನವರ ಹೆಸರಿಗೆ ದಾನವಾಗಿ ನೀಡುತ್ತಾರೆ. ಇಲ್ಲಿಂದ ರಾಜಕೀಯ ತಂತ್ರಗಳು ಪ್ರಾರಂಭ. ಮೂಡದ ಭ್ರಷ್ಟ ಅಧಿಕಾರಿಗಳ ಮತ್ತು ಸಿದ್ದರಾಮಯ್ಯನವರ ಪ್ರಭಾವ? ದಿಂದಾಗಿಯೋ 50:50 ನಿಯಮ ಅಪ್ಲೈ ಮಾಡುವ ಮೂಲಕ ಹೈ ಹೋಲ್ಟೇಜ್ ಪ್ರಕಾರವಾಗಿ ತಿರುವು ಪಡೆಯಿತು.

 

ಬದಲಿ ನಿವೇಶನ ಹಾಗೂ 50:50 ಅನುಪಾತ ಅಂದರೇನು : ಮೂಡ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು.ರೈತರ ಜಮೀನನ್ನು ಒಪ್ಪಿಗೆ ಮೂಲಕ ಅಥವಾ ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿತ್ತು. ಈ ಬಗ್ಗೆ 2002 ರಲ್ಲಿ ಅಂದಿನ ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿತ್ತು. ಈ ಕಾನೂನಿನ ಪ್ರಕಾರ ಬಡಾವಣೆ ಅಭಿವೃದ್ಧಿಗೆ ರೈತರ ಜಮೀನನ್ನು ಬಲವಂತವಾಗಿ ತೆಗೆದುಕೊಳ್ಳಬಾರದು. ರೈತರ ಜಮೀನನ್ನು ಅಭಿವೃದ್ಧಿ ಪಡಿಸಿ ಪ್ರಾಧಿಕಾರ 60:40ರಷ್ಟು ಅನುಪಾತದಲ್ಲಿ ಭೂಮಿಯನ್ನು ಹಂಚಿಕೆ ಮಾಡಬಹುದಾಗಿತ್ತು. ಅದಾದ ನಂತರ 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 50:50 ಅನುಪಾತ ಜಾರಿಗೆ ತಂದಿತ್ತು. ಇದರ ಮೂಲಕ ವಶಪಡಿಸಿಕೊಂಡ ಜಮೀನನ್ನು ಪ್ರಾಧಿಕಾರ ಅಭಿವೃದ್ಧಿಪಡಿಸಿ 50ರಷ್ಟು ಭೂಮಿಯನ್ನು ಪ್ರಾಧಿಕಾರ ಮತ್ತು 50ರಷ್ಟು ಭೂಮಿಯನ್ನು ರೈತರಿಗೆ ನೀಡಬೇಕಾಗಿತ್ತು. ಸಿದ್ದರಾಮಯ್ಯ ಅನುಕೂಲ ಸಿಂಧೂ ವಾತಾವರಣ ನಿರ್ಮಿಸುವಲ್ಲಿ ಪ್ರಭಾವ ಬೀರಿದ್ದಾರೆ ಎಂಬ ಸಂಶಯ ಇಲ್ಲಿಂದ ಪ್ರಾರಂಭವಾಗುತ್ತದೆ.

ಮೈಸೂರಿನ ಕೆಸರೆಯ ನಿಂಗ ಬಿನ್ ಜವರಾ ಎಂಬ ಹೆಸರಿನಲ್ಲಿರುವ ಈ ಜಮೀನನ್ನು 1997 ರಲ್ಲಿ ಮುಡಾ ಪ್ರಾಧಿಕಾರ ಬಡಾವಣೆಗಳ ಅಭಿವೃದ್ಧಿ ಉದ್ದೇಶದಿಂದ ಜಮೀನನ್ನು ವಶಕ್ಕೆ ತೆಗೆದುಕೊಳ್ಳುತ್ತದೆ. ಇದಾದ ಒಂದೇ ವರ್ಷದಲ್ಲಿ ಮುಡಾ ಭೂಸ್ವಾಧೀನ ಪ್ರಕ್ರಿಯೇಯಿಂದ ಹಿಂದೇಸರಿಯುತ್ತದೆ.ಐದುವರ್ಷ ವರ್ಷಗಳ ನಂತರ 2003ರಲ್ಲಿ ಮೂಲ ಖಾತೆ ದಾರನ ಹೆಸರಿಗೆ ಮರಳಿ ಜಮೀನು ಬರುತ್ತದೆ.ನಂತರ ಆ ಜಮೀನು ಸಾರ್ವಜನಿಕರಿಗೆ ಹಂಚಿಕೆಯಾಯಿತು ಇಷ್ಟೆಲ್ಲಾ ಆಗಿರುವ ಜಮೀನನ್ನು ಸಿದ್ದರಾಮಯ್ಯ ಅಳಿಯ ಮಲ್ಲಿಕಾರ್ಜುನ ಯಾಕೆ ತೆಗೆದುಕೊಂಡರು ಅದು ತನಿಖೆಯಿಂದ ಹೊರಬರಬೇಕು.

ಆರೋಪ ಪ್ರತ್ಯಾರೋಪದ ನಡುವೆ ಸಚಿವ ಎಚ್. ಸಿ. ಮಹಾದೇವಪ್ಪ. ಮುಡಾದಲ್ಲಿ ಸೈಟು ತೆಗೆದುಕೊಂಡವರ ಪಟ್ಟಿ ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇನೆ ಎಂಬ ಹೇಳಿಕೆ ನೀಡಿರುವದು ಮತ್ತು ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ. ಮುಡಾದ ಪ್ರತಿ ಮೀಟಿಂಗ್ ನಿಲ್ಲಿಯೂ ಶಾಸಕರ ಪೈಲುಗಳು ಇರುತ್ತಿದ್ದವು ಎಂಬ ಹೇಳಿಕೆಗೆ ತಾಳೆಯಾಗುತ್ತದೆ.ಈ ಮೂಲಕ ಬೇನಾಮಿಯಾಗಿ ಮುಡಾದಲ್ಲಿ ಸೈಟ್ ಪಡೆದ ಶಾಸಕರಲ್ಲಿ ಭಯ ಮೂಡಿಸುವ ಪ್ರಯತ್ನ ಮತ್ತು ಆಯಾ ಪಕ್ಷದ ಶಾಸಕರು ಅವರ ಪಕ್ಷದ ಮುಖಂಡರಿಗೆ ಹೇಳಿ ಹೋರಾಟದ ದಿಕ್ಕನ್ನು ಬದಲಿಸು ತಂತ್ರಗಾರಿಕೆ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

 

ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯೇಂದ್ರ ಪತ್ರಿಕಾಗೋಷ್ಠಿ ಮಾಡಿ ಸಿದ್ದರಾಮಯ್ಯ 2023 ರ ವಿಧಾನಸಭೆ ಚುನಾವಣೆ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಜಮೀನಿನ ಉಲ್ಲೇಖವಿಲ್ಲ. ಎಂದು ಗಮನ ಸೆಳೆದಿದ್ದಾರೆ. ಅಲ್ಲದೇ ಈ ಪ್ರಕರಣ ವಿರುದ್ಧ ಸದನದ ಒಳಗೂ ಮತ್ತು ಹೊರಗೂ ನಿರಂತರ ಹೋರಾಟಗಳು ನಡೆಯುತ್ತವೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ದ ರಣಕಹಳೆ ಹುಡಿದ್ದಾರೆ.

ಸಿದ್ದರಾಮಯ್ಯ ಬೇರೆ ಬೇರೆ ಪ್ರಕರಣಗಳಲ್ಲಿ ರೋಷವೇಶದ ಮಾತುಗಳಿಂದ ಎದುರಾಳಿಯ ಎದೆ ನಡುಗುವ ಹಾಗೆ ಮಾಡುತ್ತಿದ್ದರು. ಯಾಕೋ ಈ ಪ್ರಕರಣ ಹೊರಗೆ ಬಂದಾಗಿನಿಂದ ಪತ್ರಕರ್ತರ ಯಾವುದೇ ಪ್ರಶ್ನೆಗೆ ” ಬಿಜೆಪಿ ಯವರೇ ಪರಿಹಾರ ನೀಡುವ ಪ್ರಕ್ರಿಯೆ ಕೈಗೊಂಡು ನಿವೇಶನ ನೀಡಿದ್ದಾರೆ ಈ ಪ್ರಕರಣದಲ್ಲಿ ನನ್ನದೇನು ಇಲ್ಲ ” ಎನ್ನುವ ಮಾತನ್ನು ಬಿಟ್ಟರೆ ಬೇರೆ ಏನನ್ನು ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಪ್ರೆಸ್ ಮೀಟ್ ಸಂದರ್ಭದಲ್ಲಿ ಭೈರತಿ ಸುರೇಶ, ಮಹಾದೇವಪ್ಪ ಹೀಗೆ ಬೇರೆಬೇರೆಯ ಸಚಿವರು ಸಿದ್ದರಾಮಯ್ಯ ಮಾತನಾಡುವ ಮುಂಚೆ ಮುಖ್ಯಮಂತ್ರಿಗಳಿಗೆ ಮಾತನಾಡಲು ಹೇಳಿಕೊಡುವ ರೀತಿಯಲ್ಲಿ ವರ್ತನೆ ಕಂಡುಬರುತ್ತದೆ.ಪ್ರಭುದ್ದ ಸಿದ್ದರಾಮಯ್ಯ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸಾರ್ವಜನಿಕವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ.

ಈ ನಡುವೆ ಎಚ್. ವಿಶ್ವನಾಥ ಕೂಡಾ ಸಿಬಿಐ ಗೆ ಈ ಪ್ರಕರಣವನ್ನು ಒಪ್ಪಿಸಬೇಕು. ಮುಖ್ಯಮಂತ್ರಿ ಕುಟುಂಬ ಈ ಪ್ರಕರಣದಲ್ಲಿ ಭಾಗಿಯಾಗಿದ್ದು. ಸಾಮಾಜಿಕ ಪರಿಕಲ್ಪನೆ ಸಮಾಜವಾದಿ ನೀತಿಯನ್ನು ಹೊಂದಿರುವ ಸಿದ್ದರಾಮಯ್ಯ ಬದಲಾಗಿದ್ದಾರೆ ಎನ್ನುತ್ತಿದ್ದಾರೆ.

 

ದೇವೇಗೌಡರ ಕುಡಿಗಳು ಜೈಲು ಸೇರಿದ್ದು, ಡಿ.ಕೆ.ಶಿವಕುಮಾರ ಸಹೋದರ ಸುರೇಶ ಲೋಕಸಭೆಯ ಚುನಾವಣೆಯಲ್ಲಿ ಸೋತಿದ್ದು, ಯಡಿಯೂರಪ್ಪ ಪೋಸ್ಕೊ ಕೇಸ್ ನಲ್ಲಿ ತಗಲಾಕಿಸಿದ್ದು ಈಗ ಸಿದ್ದರಾಮಯ್ಯ ಸರದಿ ಎನ್ನುವ ಲೆಕ್ಕಾಚಾರದಲ್ಲಿ ಇಂದಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.

ಲೇಖನ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!