ಜಿಲ್ಲಾ ಸುದ್ದಿರಾಜ್ಯ ಸುದ್ದಿ

ಜೂನ್ 3 ಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ – ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ. 

Share News

ಜೂನ್ 3 ಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ – ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ. 

ಗಜೇಂದ್ರಗಡ : ಸತ್ಯಮಿಥ್ಯ (ಮೇ – 29)

ಇಂದು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಬಗರ್ ಹುಕ್ಕುಂ ಸಾಗುವಳಿದಾರರು ಸಾಗುವಳಿ ಚೀಟಿ ಕಲ್ಪಿಸುವ ಕುರಿತು ಧರಣಿ ಸತ್ಯಾಗ್ರಹ ನಡೆಸಿದರು.

ಹೋರಾಟದ ಸ್ಥಳಕ್ಕೆ ಆಗಮಿಸಿದ ಅಪಾರ ಜಿಲ್ಲಾ ಅಧಿಕಾರಿ ಡಾ.ದುರಗೇಶ್ ಕೆ.ಆರ್. ರವರು ಆಗಮಿಸಿ ಜೂನ್ 6 ಕ್ಕೆ ಜಿಲ್ಲಾ ಆಡಳಿತ ಭವನದಲ್ಲಿ ಸಭೆ ನೋಟಿನ್ನು ಜಾರಿ ಮಾಡಲಾಗಿದೆ.ಈ ಸಭೆಗೆ ರೈತರು ಹಾಗೂ ರೈತ ಮುಖಂಡರನ್ನು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಬಗರ್ ಹುಕ್ಕುಂ ಸಾಗುವಳಿದಾರರ ಸಾಗುವಳಿ ಚೀಟಿ ಕಲ್ಪಿಸಲು, ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ರೈತರ ಫಾರ್ಮ್ ನಂಬರ್ 50,53, 57 ರಲ್ಲಿ ಇರುವ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡುವ ಬಗ್ಗೆ ಚರ್ಚಿಸಿ ಜಾರಿ ಮಾಡಲು ರೈತರು ಹಾಗೂ ಜಿಲ್ಲಾ ಅಧಿಕಾರಿಗಳು ಒಳಗೊಂಡ ಸಭೆ ಹಾಗೂ ಮಾನ್ಯ ಶಾಸಕರು ಸಭೆಯಲ್ಲಿ ಹಾಜರು ಇರು ವರೆಂದು ಲಿಖಿತ ಭರವಸೆ ನೀಡಿದರು.

ಪೀರು ರಾಠೋಡ ಮಾತನಾಡಿ ಗಜೇಂದ್ರಗಡ ತಾಲೂಕಿನಲ್ಲಿ ನೂರು ವರ್ಷಗಳಿಂದ ಬಗರ್ ಹುಕ್ಕುಂ ಸಾಗುವಳಿದಾರ ರೈತರು ಭೂಮಿ ಉಳೀಮೆ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಸರಿಯಾದ ದಾಖಲಾತಿಗಳನ್ನು ಕಲ್ಪಿಸುತ್ತಿಲ್ಲಾ , 2017 ರಲ್ಲಿ ಭೂ ಮಾಪನ ಇಲಾಖೆಗೆ ಆದೇಶ ಮಾಡಲಾಗಿದೆ. ಸರ್ವೆ ಮಾಡಿ ಸರಿಯಾದ ದಾಖಲಾತಿಗಳನ್ನು ಪರಿಶೀಲಿಸಿ ರೈತರಿಗೆ ಹಕ್ಕು ಪತ್ರ ಹಾಗೂ ಅವರಿಗೆ ಭೂಮಿ ಸಂಬಂಧಿಸಿದಂತೆ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಲು ಸರ್ಕಾರದ ಆದೇಶವಿದ್ದರೂ ಕೂಡ ಅದನ್ನು ಗಾಳಿಗೆ ತೂರಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಈ ಹಿಂದೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸಾಕಷ್ಟು ಬಾರಿ ಅನಿರ್ಧಿಷ್ಟಾವಧಿ ಹೋರಾಟ ಮಾಡಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಹುಸಿ ಭರವಸೆಗಳನ್ನು ನೀಡಿ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಗಾಯದ ಮೇಲೆ ಬರಿ ಹಾಕಿದಂತಾಗಿದೆ ಎಂದು ಹೇಳಿದರು.

ನ್ಯಾಯವಾದಿ ಎಂ. ಎಸ್. ಹಡಪದ ಮಾತನಾಡಿ.ರಾಜಕಾರಣಿಗಳ ಇಚ್ಛಾಸಕ್ತಿ ಕೊರತೆಯಿಂದ ಬಗರ್ ಹುಕ್ಕುಂ ಸಾಗುವಳಿದಾರರ ಸಮಸ್ಯೆ ಬಗೆಹರಿಯುತ್ತಿಲ್ಲ. ಗಜೇಂದ್ರಗಡದ ಗುಡ್ಡವನ್ನು ಕಾನೂನು ಬಾಹಿರವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಅದನ್ನು ಯಾವುದೇ ಅಧಿಕಾರಿಯಾಗಲಿ ರಾಜಕೀಯ ನಾಯಕರಾಗಲಿ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ನ್ಯಾಯಸಮ್ಮತವಾಗಿ ರೈತರು ಭೂಮಿಯನ್ನು ಕೇಳುತ್ತಿದ್ದಾರೆ ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಶಾಸಕರು ಗಮನ ಹರಿಸಬೇಕು ಎಂದರು.

ಈ ಹೋರಾಟ ದಲ್ಲಿ ಕಿರಣ್ ಕುಮಾರ್ ಕುಲಕರ್ಣಿ ತಹಸಿಲ್ದಾರ್ , ಡಿ ಎಸ್ ಪಿ ಫ್ರಭುಗೌಡ ಕಿರೇದಲ್ಲಿ, ಸಿಪಿಐ ವಿಜಯ್ ಕುಮಾರ್ ,ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷರಾದ ರೂಪೇಶ್ ಮಾಳೋತ್ತರ, ಮುಖಂಡರಾದ ಪೀರು ರಾಠೋಡ, ಬಾಲು ರಾಠೋಡ, ಚನ್ನಪ್ಪ ಗುಗಳೋತ್ತರ, ಎಸ್ ಎಫ್ ಐ ನ ತಾಲೂಕು ಅಧ್ಯಕ್ಷರಾದ ಅನಿಲ ಆರ್ , ಮೆಹಬೂಬ್ ಹವಾಲ್ದಾರ್, ವೀರೇಶ ಮಾಳೋತ್ತರ,ಶಂಕ್ರವ್ವ ಮಾಳೋತ್ತರ, ದೇವಕ್ಕ ಗೂಗಲೋತ್ತರ ,ಶೀವವ್ವ,, ಪೀರವ್ವ ರಾಠೋಡ, ಸಂಕ್ರವ್ವ , ವೀರೇಶ ರಾಠೋಡ, ದೀಪಲೇಪ್ಪ, ಗೋವಿಂದಪ್ಪ, ಮಂಜುನಾಥ್, ಕೃಷ್ಣಪ್ಪ ರಾಠೋಡ, ಮಾರುತಿ, ಮಂಜುನಾಥ್,ಹನಮಂತಪ್ಪ, ಶಿವಪ್ಪ ರಾಠೋಡ ಮುಂತಾದವರು ಇದ್ದರು.

ವರದಿ : ಸುರೇಶ ಬಂಡಾರಿ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!