ತಾಲೂಕು

ಜಯ ಕರ್ನಾಟಕ ಜನಪರ ವೇದಿಕೆ ತಾಲೂಕಾ ಅಧ್ಯಕ್ಷರಾಗಿ ಕಳಕಪ್ಪ ಪೋತಾ ಆಯ್ಕೆ.

Share News

ಜಯ ಕರ್ನಾಟಕ ಜನಪರ ವೇದಿಕೆ ತಾಲೂಕಾ ಅಧ್ಯಕ್ಷರಾಗಿ ಕಳಕಪ್ಪ ಪೋತಾ ಆಯ್ಕೆ.
Oplus_131072

 

ಗಜೇಂದ್ರಗಡ : ಸತ್ಯಮಿಥ್ಯ (ಮೇ -24)

ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ಇಂದು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕಳಕಪ್ಪ ಪೋತಾ ಅವರನ್ನು ತಾಲೂಕಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ  ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಹಾಲಪ್ಪ ವರವಿ ಮಾತನಾಡಿದ. ನಮ್ಮ ಸಂಘಟನೆ ಜನರಿಂದ ಜನರ ಸಮಸ್ಯೆಯನ್ನು ಬಗೆಹರಿಸಲು ಸಂಘಟಿತವಾಗಿ ರಾಜ್ಯಾದ್ಯಾಂತ ಹೋರಾಟಗಳನ್ನು ರೂಪಿಸುತ್ತಾ ಬಂದಿದೆ. ಜನಪರ ಯೋಜನೆಗಳ ಜಾರಿಗೆ ಒತ್ತಾಯ, ಬಡವರ, ದೀನರ, ದಲಿತರ ಪರವಾದ ನಿಲುವುಗಳನ್ನು ಪ್ರಸ್ತುತ ಪಡಿಸುತ್ತಾ ಬಂದಿದೆ ಎಂದರು.

ಸಂಘಟನೆ ಜಿಲ್ಲಾಧ್ಯಕ್ಷರಾದ ಸಣ್ಣಯಲ್ಲಪ್ಪ ವಳಗೇರಿ ಮಾತನಾಡಿ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಆಳುವ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ನಮ್ಮ ಸಂಘಟನೆ ಸದಾ ಮಾಡುತ್ತಾ ಬಂದಿದೆ. ಇಂದು ಗಜೇಂದ್ರಗಡ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆಯಿಂದ ಸಂಘಟನೆಗೆ ಬಲ ಬಂದಂತಾಗಿದೆ ಎಂದರು.

ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಗುಣರಂಜನಶೆಟ್ಟಿ ಮತ್ತು ರಾಜ್ಯಾಧ್ಯಕ್ಷರಾದ .ಜೆ. ಶ್ರೀನಿವಾಸ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.

ತಾಲೂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಳಕಪ್ಪ ಪೋತಾರವರು ಮಾತನಾಡಿ. ನನ್ನ ಜೀವನವೇ ನಿರಂತರ ಹೋರಾಟಗಳಿಂದ ಕೂಡಿದೆ. ಸದಾ ಜನಪರ ಕಾಳಜಿಯೊಂದಿಗೆ ಅನೇಕ ಸಂಘಟನೆಯಲ್ಲಿ ಹೋರಾಟಗಳನ್ನು ರೂಪಿಸುತ್ತಾ ಬಂದಿದ್ದೇನೆ. ನನ್ನೊಂದಿಗೆ ಅನೇಕ ಮಿತ್ರರು ಜನಪರ ಹೋರಾಟದಲ್ಲಿ ಬೆಂಬಲವಾಗಿ ನಿಂತಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತ ಮುಂದಿನ ಹೋರಾಟದ ಬದುಕನ್ನು ಜಯ ಕರ್ನಾಟಕ ಜನಪರ ವೇದಿಕೆ ಮೂಲಕ ಮುನ್ನಡೆಸುತ್ತ ಬಡವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೆ. ಎಂ. ನಂದನಜವಳಕರ ಅವರನ್ನು ಕಾನೂನು ಘಟಕದ ಅಧ್ಯಕ್ಷರನ್ನಾಗಿ ಮತ್ತು ಎಂ. ಡಿ. ಪೂಜಾರ, ರಾಜು ವನ್ನಾಲ,ಕಾಸಿಂಸಾಬ್ ಮುಚ್ಚಾಲಿ,ಮಾರುತಿ ಜಾನಾಯಿ, ಚಂದ್ರಪ್ಪ ಚಿನ್ನೂರ,ಕಳಕಪ್ಪ ಹಾಳಕೇರಿ, ಸುರೇಶ ಕಮಿತ್ಕರ, ಉಮೇಶ ಕಲಮಶಟ್ಟಿ,ನಾಗಪ್ಪ ಪೂಜಾರ,ಬ್ರಹ್ಮಾನಂದ ಪತ್ತಾರ,ಶ್ರೀಕಾಂತ ಪಾತರೊಟ್,ಶರಣಪ್ಪ ಗುಳಗುಳಿ,ಶಿವರಾಜ ಪೂಜಾರ  ಸೇರಿದಂತೆ ಅನೇಕರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ವರದಿ : ಸುರೇಶ ಬಂಡಾರಿ.

 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!