
ಎಂ ವೈ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲು ಸುಭಾಸ ಯಳಸಂಗಿ ಚೌಡಾಪೂರ ಆಗ್ರಹ.

ಅಫಜಲಪೂರ:ಸತ್ಯಮಿಥ್ಯ (ಮೇ -29).
ತಾಲೂಕಿನ ಹಿರಿಯ ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಎಂ ವೈ ಪಾಟೀಲ್ ಅವರಿಗೆ ನೂತನ ಸರಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರಾದ ಸುಭಾಸ ಯಳಸಂಗಿ ಚೌಡಾಪೂರ ಅವರು ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಫಜಲಪೂರ ಮತಕ್ಷೇತ್ರದಲ್ಲಿ 4ನೇಯ ಬಾರಿಗೆ ಶಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಂ ವೈ ಪಾಟೀಲ್ ಅವರಿಗೆ ಅನುಭವ ಇರುವುದರಿಂದ ಮತ್ತು ತಮ್ಮ ಜೀವನ ಪರ್ಯಂತ ಜನ ಸೇವೆಗಾಗಿ ಮೂಡುಪಾಗಿಟ್ಟು ಶಿಕ್ಷಣ ಮತ್ತು ಸಹಕಾರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅಫಜಲಪೂರ ಅಷ್ಟೇ ಅಲ್ಲದೆ ಕಲಬುರಗಿ ಜಿಲ್ಲೆಯಲ್ಲಿಯೂ ಅವರಿಗೆ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಇದ್ದಾರೆ. ಎಂ ವೈ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರಲಿದೆ. ಹೀಗಾಗಿ ಅವರ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡಿದರೆ ಕ್ಷೇತ್ರದ ಜನರಿಗೆ ಮತ್ತು ಅವರಿಗೆ ಕಾಂಗ್ರೆಸ್ ಪಕ್ಷ ಗೌರವ ಕೊಟ್ಟಿದಂತೆ ಆಗುತ್ತದೆ. ಮುಂಬರುವ ಎರಡು ವರ್ಷದ ಅವಧಿಗಾಗಿ ಅವರನ್ನು ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಟರಿಗೆ ಸುಭಾಸ ಯಳಸಂಗಿ ಚೌಡಾಪೂರ ಅವರು ಆಗ್ರಹಿಸಿದ್ದಾರೆ.
ವರದಿ : ಸಿದ್ದು.




