ತಾಲೂಕು

Gajendragad : ಮಾತಿಗೆ ತಪ್ಪಿದ ಶಾಸಕರು – 29 ರಂದು ಶಾಸಕರ ಮನೆ ಚಲೋ.

Share News

Gajendragad : ಮಾತಿಗೆ ತಪ್ಪಿದ ಶಾಸಕರು, ತಾಲೂಕಾ, ಜಿಲ್ಲಾ ಆಡಳಿತದಿಂದ ರೈತರಿಗೆ ವಂಚನೆ; 29 ರಂದು ಶಾಸಕರ ಮನೆ ಚಲೋ.

ಗಜೇಂದ್ರಗಡ : ಸತ್ಯಮಿಥ್ಯ (ಮೇ -26).

ಇಂದು ತಾಲೂಕಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬಗರ್ ಹುಕ್ಕುಂ ಸಾಗುವಳಿದಾರರ ಸಾಗುವಳಿ ಚೀಟಿ ಕಲ್ಪಿಸಲು, ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ರೈತರ ಫಾರ್ಮ್ ನಂಬರ್ 50,53, 57 ರಲ್ಲಿ ಇರುವ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲು ಇಂದು ತಾಲೂಕು ಸಮಿತಿ ನೇತೃತ್ವದಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಇದೆ ತಿಂಗಳ ದಿನಾಂಕ:29/05/2026 ರಂದು ನಗರದ ತಹಶೀಲ್ದಾರ್ ಕಚೇರಿಯಲ್ಲಿ ಧರಣಿ ಪ್ರಾರಂಭಿಸಿ ನಂತರ ಪಾದಯಾತ್ರೆ ಮೂಲಕ ಮಾನ್ಯ ಶಾಸಕರು ರೋಣ ಇವರ ಮನೆ ಚಲೋ ಮಾಡಲಾಗುವುದು ಎಂದು ತಿರ್ಮಾನಿಸಲಾಯಿತು.

ಪೀರು ರಾಠೋಡ ಮಾತನಾಡಿ ಗಜೇಂದ್ರಗಡ ತಾಲೂಕಿನಲ್ಲಿ ನೂರು ವರ್ಷಗಳಿಂದ ಬಗರ್ ಹುಕ್ಕುಂ ಸಾಗುವಳಿದಾರ ರೈತರು ಭೂಮಿ ಉಳಿಮೆ ಮಾಡುತ್ತಿದ್ದಾರೆ ಅವರಿಗೆ ಸರ್ಕಾರ ಸರಿಯಾದ ದಾಖಲಾತಿಗಳನ್ನು ಕಲ್ಪಿಸುತ್ತಿಲ್ಲಾ , 2017 ರಲ್ಲಿ ರಾಜ್ಯ ಸರ್ಕಾರ ಭೂ ಮಾಪನ ಇಲಾಖೆಗೆ ಆದೇಶ ಮಾಡಲಾಗಿದೆ ಸರ್ವೆ ಮಾಡಿ ಸರಿಯಾದ ದಾಖಲಾತಿಗಳನ್ನು ಪರಿಶೀಲಿಸಿ ರೈತರಿಗೆ ಹಕ್ಕು ಪತ್ರ ಹಾಗೂ ಅವರಿಗೆ ಭೂಮಿ ಸಂಬಂಧಿಸಿದಂತೆ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಲು ಸರ್ಕಾರದ ಆದೇಶವಿದ್ದರೂ ಕೂಡ ಅದನ್ನು ಗಾಳಿಗೆ ತೂರಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಈ ಹಿಂದೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸಾಕಷ್ಟು ಬಾರಿ ಅನಿರ್ಧಿಷ್ಟಾವಧಿ ಹೋರಾಟ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಮನವಿ ಸಲ್ಲಿಸಲಾಗಿದೆ ರೈತರಿಗೆ ಹುಸಿ ಭರವಸೆಗಳನ್ನು ನೀಡಿ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಆದ್ದರಿಂದ ಇದೆ ಮೇ 29 ರಂದು ಗಜೇಂದ್ರಗಡ ತಹಶೀಲ್ದಾರ್ ಕಚೇರಿಯಲ್ಲಿ ಧರಣಿ ಪ್ರಾರಂಭಿಸಿ ನಂತರ ಸಾಯಂಕಾಲ ಪಾದಯಾತ್ರೆ ಮೂಲಕ ಮಾನ್ಯ ಶಾಸಕರು ರೋಣ ಇವರ ಮನೆ ಚಲೋ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ರೈತ ಮುಖಂಡರಾದ ಬಾಲು ರಾಠೋಡ‌, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷರಾದ ರೂಪೇಶ್ ಮಾಳೋತ್ತರ, ಪೀರು ರಾಠೋಡ, ಚನ್ನಪ್ಪ ಗುಗಳೋತ್ತರ, ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ, ಮೆಹಬೂಬ್ ಹವಾಲ್ದಾರ್, ವೀರೇಶ ಮಾಳೋತ್ತರ,ಶಂಕ್ರವ್ವ ಮಾಳೋತ್ತರ, ದೇವಕ್ಕ ಗುಗ್ಲೊತ್ತರ್ ,ಶೀವವ್ವ,, ಪೀರವ್ವ ರಾಠೋಡ, ಸಂಕ್ರವ್ವ , ವೀರೇಶ ರಾಠೋಡ, ದೀಪಲೇಪ್ಪ, ಗೋವಿಂದಪ್ಪ, ಮಂಜುನಾಥ್, ಕೃಷ್ಣಪ್ಪ ರಾಠೋಡ, ಮಾರುತಿ, ಮಂಜುನಾಥ್,ಹನಮಂತಪ್ಪ, ಶಿವಪ್ಪ ರಾಠೋಡ ಮುಂತಾದವರು ಇದ್ದರು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!