ಲಕ್ಷ್ಮೇಶ್ವರ : ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಕೊಳಚೆ ಅಭಿವೃದ್ಧಿ ಮಂಡಳಿಯ ಪ್ಲಾಂಟೇಶನ್ ಗೆ ಭೇಟಿ.
ಲಕ್ಷ್ಮೇಶ್ವರ : ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಕೊಳಚೆ ಅಭಿವೃದ್ಧಿ ಮಂಡಳಿಯ ಪ್ಲಾಂಟೇಶನ್ ಗೆ ಭೇಟಿ.
ಲಕ್ಷ್ಮೇಶ್ವರ:ಸತ್ಯಮಿಥ್ಯ (ಆಗಸ್ಟ್ -17)
ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮಹೇಶ್ ಹಡಪದರವರು ಕೊಳಚೆ ಅಭಿವೃದ್ಧಿ ಮಂಡಳಿಯ ಪ್ಲಾಂಟೇಶನ್ ಗೆ ಭೇಟಿ ನೀಡಿ ಇಂದು ವೀಕ್ಷಣೆ ಮಾಡಿದರು.
ಒಳ ಚರಂಡಿ ನಿರ್ವಹಣೆಗಾಗಿ ಸುಮಾರು 67 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಒಳಚರಂಡಿಯ ನಿರ್ವಹಣೆಯ ಕಾಮಗಾರಿಯ ಕುರಿತಂತೆ ಇಂದು ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ವೀಕ್ಷಣೆ ಮಾಡಿ ಮಾತನಾಡಿದ ಮಹೇಶ್ ಹಡಪದ ಅವರು ಕಳೆದ ಹಲವಾರು ವರ್ಷಗಳಿಂದ ಒಳ ಚರಂಡಿಯ ಕಾಮಗಾರಿ ಆಗದೆ ಇರುವ ಸ್ಥಳಗಳನ್ನು ಪರಿಶೀಲನೆ ಮಾಡಿ ಅಲ್ಲಿ ಒಳಚರಂಡಿ ವ್ಯವಸ್ಥೆಗಳ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಲಕ್ಷ್ಮೇಶ್ವರ ಪಟ್ಟಣದ ಜನತೆಯು ಒಳಚರಂಡಿ ವ್ಯವಸ್ಥೆಯನ್ನು ಪೈಪ್ ಲೈನ್ ಗಳನ್ನು ಜೋಡಿಸಿಕೊಂಡು ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಮಾಡದೇ ಇರುವ ಸಾರ್ವಜನಿಕರು ಆದಷ್ಟು ಬೇಗ ಪೈಪ್ ಲೈನ್ ಗಳನ್ನು ಜೋಡಿಸಬೇಕೆಂದು ಪತ್ರಿಕೆಯ ಪ್ರಕಟಣೆ ಮೂಲಕ ಹೇಳುತ್ತಿದ್ದೇನೆ.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಿಕ ಮಂಜುನಾಥ್ ಮುದಗಲ್ ಪುರಸಭೆಯ ಕಿರಿಯ ಅಭಿಯಂತರರು ವಿನೋದ ಬದಿ , ಶಿವಾನಂದ ಅಜ್ಜಣ್ಣವರ, ಸಂತೋಷ್ ಕಡೆಮನಿ ಉಪಸ್ಥಿತರಿದ್ದರು
ವರದಿ – ಮುತ್ತು.