ಟ್ರೆಂಡಿಂಗ್ ಸುದ್ದಿಗಳು

ಪಶ್ಚಿಮ ಪದವೀಧರ ಚುನಾವಣೆ: ಗಜೇಂದ್ರಗಡ ಮತದಾನ ಕೇಂದ್ರದಲ್ಲಿ ಭಾರೀ ಅವ್ಯವಸ್ಥೆ – ತಹಸೀಲ್ದಾರ್ ಹಾಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ!

Share News

ಪಶ್ಚಿಮ ಪದವೀಧರ ಚುನಾವಣೆ: ಗಜೇಂದ್ರಗಡ ಮತದಾನ ಕೇಂದ್ರದಲ್ಲಿ ಭಾರೀ ಅವ್ಯವಸ್ಥೆ – ತಹಸೀಲ್ದಾರ್ ಹಾಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ!

ಸತ್ಯಮಿಥ್ಯ ಸುದ್ದಿಮೂಲ ​ಗಜೇಂದ್ರಗಡ:

ಇಲ್ಲಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಕೇಂದ್ರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತೀವ್ರ ಅವ್ಯವಸ್ಥೆ ಉಂಟಾಗಿದ್ದು, ಮತದಾರರು ಹಾಗೂ ಸಾರ್ವಜನಿಕರು ತಹಸೀಲ್ದಾರ್ ಮತ್ತು ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

 

​ಅಂಗವಿಕಲರಿಗೆ ಇಲ್ಲ ವ್ಹಿಲ್ ಚೇರ್ ವ್ಯವಸ್ಥೆ:

​ಮತದಾನ ಕೇಂದ್ರದಲ್ಲಿ ವಿಕಲಚೇತನ ಮತದಾರರಿಗೆ ಕನಿಷ್ಠ ವ್ಹಿಲ್ ಚೇರ್ (Wheelchair) ವ್ಯವಸ್ಥೆಯನ್ನು ಸಹ ಕಲ್ಪಿಸಿರಲಿಲ್ಲ. ಇದರಿಂದಾಗಿ ವೃದ್ಧರು ಹಾಗೂ ಅಂಗವಿಕಲ ಮತದಾರರು ಮತದಾನ ಮಾಡಲು ಹರಸಾಹಸ ಪಡುವಂತಾಯಿತು.

​ಒಂದೇ ಟೇಬಲ್‌ನಿಂದ ವಿಳಂಬ – ಬೆಳಿಗ್ಗೆಯಿಂದಲೇ ಮನವಿ:

ಸುಮಾರು 13 ನೂರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಗಜೇಂದ್ರಗಡದಲ್ಲಿ ​ಇಡೀ ಕೇಂದ್ರಕ್ಕೆ ಒಂದೇ ಮತದಾನದ ಸೆಂಟರ್ (ಟೇಬಲ್) ವ್ಯವಸ್ಥೆ ಮಾಡಿದ್ದರಿಂದ ಬೆಳಿಗ್ಗೆಯಿಂದಲೇ ಸಾಲು ಸಾಲಾಗಿ ನಿಂತ ಮತದಾರರು ಪರದಾಡುತ್ತಿದ್ದಾರೆ. “ಮತದಾನ ಸುಗಮವಾಗಿ ನಡೆಯಲು ಕನಿಷ್ಠ ಎರಡು ಟೇಬಲ್‌ಗಳ ವ್ಯವಸ್ಥೆ ಮಾಡಿ” ಎಂದು ಬೆಳಿಗ್ಗೆಯಿಂದಲೇ ಮತದಾರರು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿಕೊಂಡರೂ, ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು.

​ಮಧ್ಯಾಹ್ನದ ನಂತರ ಎಚ್ಚೆತ್ತ ಆಡಳಿತ:

​ಸಾರ್ವಜನಿಕರ ಸಾಲು ಬೆಳೆಯುತ್ತಿದ್ದಂತೆ ಹಾಗೂ ಮತದಾರರ ಅಸಮಾಧಾನ ಹೆಚ್ಚಾದಾಗ, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಹಸೀಲ್ದಾರ್ ಹಾಗೂ ಸಿಬ್ಬಂದಿ ಎರಡನೇ ಟೇಬಲ್ ವ್ಯವಸ್ಥೆ ಮಾಡಲು ಮುಂದಾದರು. ಬೆಳಿಗ್ಗೆಯಿಂದ ನಿರ್ಲಕ್ಷ್ಯ ವಹಿಸಿ, ಮಧ್ಯಾಹ್ನ 3 ಗಂಟೆಗೆ ಜಾಗೃತರಾದ ಅಧಿಕಾರಿಗಳ ನಡೆಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಮತದಾರರು ತೀವ್ರ ತರಾಟೆಗೆ ತೆಗೆದುಕೊಂಡರು.

​ಚುನಾವಣೆಯಂತಹ ಪ್ರಮುಖ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಇಂತಹ ಬೇಜವಾಬ್ದಾರಿ ನಡೆ ಮತದಾರರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.

ಸದ್ಯ ಸಾಯಂಕಾಲ 4:30 ಗಂಟೆಯಾದರು ನೂರಾರು ಮತದಾರರು ಮತ ಹಾಕಲು ಹಿಡಿಶಾಪ ಹಾಕುತ್ತಾ ಕಾಯುತ್ತಿದ್ದಾರೆ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!