ಟ್ರೆಂಡಿಂಗ್ ಸುದ್ದಿಗಳು

ಪಿಂಕ್ ಹಿಟ್ಟರ್ಸ್ ತಂಡ ಜಿ.ಪಿ.ಎಲ್‌. (GPL) ಸೀಸನ 8 ರ ಚಾಂಪಿಯನ್.‌

Share News

ಪಿಂಕ್ ಹಿಟ್ಟರ್ಸ್ ತಂಡ ಜಿ.ಪಿ.ಎಲ್‌. (GPL) ಸೀಸನ 8 ರ ಚಾಂಪಿಯನ್.‌

ಗಜೇಂದ್ರಗಡ:ಸತ್ಯಮಿಥ್ಯ (ಮೇ -24).

ದಿ.ಈಶ್ವರಪ್ಪ ರೇವಡಿ ಸ್ಮರಣಾರ್ಥ ನಗರ ಎಸ್.ಎಮ್.ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಒಂದು ವಾರದಿಂದ ಗಜೇಂದ್ರಗಡ ಪ್ರೀಮಿಯರ್‌ ಲೀಗ್‌ ಸೀಸನ ಜಿಪಿಎಲ್ – 8 ಕ್ರೀಕೆಟ್‌ ಪಂದ್ಯಾವಳಿಗಳು ನಡೆಯಿತು.

ಇಂದು ನಡೆದ ಪಿಂಕ್‌ ಹಿಟರ್ಸ ಹಾಗೂ ಇಂಡಿಯನ್‌ ವಾರಿಯರ್ಸ ನಡುವೆ ನಡೆದ ಪೈನಲ್‌ ಪಂದ್ಯದ  ಹಣಾಹಣಿಯಲ್ಲಿ ಪಿಂಕ್‌ ಹಿಟರ್ಸ ತಂಡವು ಈ ಬಾರಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಬಳಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಪುರಸಭೆಯ ನಿಕಟಪೂರ್ವ ಸದಸ್ಯರಾದ ಮುರ್ತುಜಾ ಡಾಲಾಯತ ಮಾತನಾಡಿ. ಸೋಲು-ಗೆಲುವು ಕ್ರೀಡೆಯ ಅವಿಭಾಜ್ಯ ಅಂಗ. ಗೆದ್ದವರು ಬೀಗದೆ, ಸೋತವರು ಕುಗ್ಗದೆ ಕ್ರೀಡಾ ಮನೋಭಾವದಿಂದ ಮುನ್ನಡೆಯಬೇಕು.ಇಂತಹ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳು ಸ್ಥಳೀಯ ಯುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಅವರಿಗೆ ವೇದಿಕೆ ಕಲ್ಪಿಸಲು ಸಹಕಾರಿ ಯಾಗುತ್ತವೆ ಎಂದು ಶ್ಲಾಘಿಸಿದರು.

ಬಳಿಕ ಖ್ಯಾತ ನ್ಯಾಯವಾದಿ ಆರ್.ಎಮ್.ರಾಯಬಾಗಿ, ಮಾತನಾಡಿ ಕ್ರಿಕೆಟ್ ಕೇವಲ ಆಟವಲ್ಲ, ಅದು ಯುವಕರಲ್ಲಿ ಶಿಸ್ತು, ಸಂಘಟನೆ ಮತ್ತು ಭ್ರಾತೃತ್ವದ ಭಾವನೆಯನ್ನು ಬೆಳೆಸುತ್ತದೆ.ಜಿಪಿಎಲ್ (GPL) ಸೀಸನ್ 8 ಅನ್ನು ಯಶಸ್ವಿಯಾಗಿ ಆಯೋಜಿಸಿದ ಸಮಿತಿಗೆ ಧನ್ಯವಾದ ಅರ್ಪಿಸಿ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕ್ರೀಡಾ ಚಟುವಟಿಕೆಗಳು ನಡೆಯಲಿ ಎಂದು ಆಶಿಸಿದರು.

ಬಳಿಕ ಹಿರಿಯ ಬಿಜೆಪಿ ಮುಖಂಡ ರವಿ ಶಿಂಗ್ರಿ ಮಾತನಾಡಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಕ್ರೀಡೆ ಅತಿ ಮುಖ್ಯ. ದಿನನಿತ್ಯದ ಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿ ಎಂದು ತಿಳಿಸಿದರು.

ಬಳಿಕ ಆಯೋಜಕರಾದ ವಿನಾಯಕ ಜರತಾರಿ, ಮಂಜುಳಾ ರೇವಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಆನಂದ ನಂದಿಹಾಳ, ರೋಹನ್ ಮಾಳಗಿಮನಿ , ಹೂವಾಜಿ ಚಂದುಕರ, ರಾಘು ಕೊಣ್ಣೂರ್ ಕರ್, ರವಿ ಭಜಂತ್ರಿ, ಬಸವರಾಜ್ ನಿಡಗುಂದಿ, ರಾಕೇಶ್ ಮಾರನಬಸರಿ, ರಾಘು ಚೌಹಾಣ್, ಅಮರೇಶ್ ಬಂಡಿ ವಡ್ದರ್, ಸೇರಿದಂತೆ ಅನೇಕ ಕ್ರೀಡಾಪಟುಗಳು ಇದ್ದರು.

ವರದಿ : ಪವನ್. ಆರ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!