ಟ್ರೆಂಡಿಂಗ್ ಸುದ್ದಿಗಳು

ಸೆ-28 : ಕೋಟೆನಾಡಿಗೆ ಬಸನಗೌಡ ಪಾಟೀಲ್ ಯತ್ನಾಳ್ ಆಗಮನ!

Share News

ಸೆ-28 : ಕೋಟೆನಾಡಿಗೆ ಬಸನಗೌಡ ಪಾಟೀಲ್ ಯತ್ನಾಳ್ ಆಗಮನ!

‘ಕೋಟೆನಾಡು’ ಗಜೇಂದ್ರಗಡದಲ್ಲಿ ಹಿಂದೂ ಮಹಾಗಣಪತಿ ಬಹಿರಂಗ ಸಭೆ: ‘ಹಿಂದೂ ಹುಲಿ’ ಬಸನಗೌಡ ಪಾಟೀಲ್ ಯತ್ನಾಳ್ ಆಗಮನ!

ಸತ್ಯಮಿಥ್ಯ ಸುದ್ದಿಮೂಲ ​ಗಜೇಂದ್ರಗಡ:

ಇಲ್ಲಿನ ‘ವಂದೇ ಮಾತರಂ ವೇದಿಕೆ’ ಹಾಗೂ ‘ಶ್ರೀ ಗಜೇಂದ್ರ ಯುವಕ ಮಂಡಳ’ದ ಸಂಯುಕ್ತಾಶ್ರಯದಲ್ಲಿ ಹಿಂದೂ ಗಣೇಶೋತ್ಸವದ ನಿಮಿತ್ತ ಬೃಹತ್ “ಹಿಂದೂ ಮಹಾಗಣಪತಿ ಬಹಿರಂಗ ಸಭೆ”ಯನ್ನು ಆಯೋಜಿಸಲಾಗಿದೆ.

​ಈ ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಪ್ರಖರ ಹಿಂದುತ್ವವಾದಿ ಹಾಗೂ ‘ಹಿಂದೂ ಹುಲಿ’ ಎಂದೇ ಖ್ಯಾತರಾದ ಬಸನಗೌಡ ಪಾಟೀಲ ಯತ್ನಾಳ್ ಅವರು ಆಗಮಿಸುತ್ತಿದ್ದು, ಕಾರ್ಯಕ್ರಮದ ಕಳೆ ಹೆಚ್ಚಿಸಲಿದ್ದಾರೆ.

​ಕಾರ್ಯಕ್ರಮದ ವಿವರ:

​ದಿನಾಂಕ ಹಾಗೂ ಸಮಯ: ಸೆಪ್ಟೆಂಬರ್ 28, ಸೋಮವಾರ – ಸಾಯಂಕಾಲ 5:00 ಗಂಟೆಗೆ ಭಜರಂಗದಳ ಸರ್ಕಲ್, ಗಜೇಂದ್ರಗಡ

​ತಾಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಯತ್ನಾಳ್ ಅವರ ಅಭಿಮಾನಿಗಳು, ಹಿಂದೂ ಬಂಧುಗಳು ಹಾಗೂ ಕಾರ್ಯಕರ್ತರು ಈ ಬಹಿರಂಗ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಕೋಟೆನಾಡು ಗಜೇಂದ್ರಗಡದ ಭಜರಂಗದಳ ಸರ್ಕಲ್‌ನಲ್ಲಿ ನಡೆಯುವ ಈ ಬೃಹತ್ ಸಮಾವೇಶಕ್ಕೆ ಸಾರ್ವಜನಿಕರು ಹಾಗೂ ಸರ್ವ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಭಾಷಣವನ್ನು ಆಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಕೋರಿದ್ದಾರೆ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!