
ಮೈತ್ರಿ ಪಕ್ಷದ ಅಭ್ಯರ್ಥಿಯಾದ ಎಸ್ ವಿ ಸಂಕನೂರ ರವರನ್ನು ಗೆಲ್ಲಿಸುವಂತೆ ಜೆಡಿಎಸ್ ಗದಗ ಜಿಲ್ಲಾಧ್ಯಕ್ಷರ ಮನವಿ

ಸತ್ಯಮಿಥ್ಯ ಸುದ್ದಿಮೂಲ : ಗಜೇಂದ್ರಗಡ
ನಾಳೆ ಅಕ್ಟೋಬರ್ 23 ಶುಕ್ರವಾರ ನಡೆಯುವ ಪಶ್ಚಿಮ ಪದವೀಧರ ಕ್ಷೇತ್ರದ ಎನ್ ಡಿ ಎ ಮೈತ್ರಿಯ ಅಭ್ಯರ್ಥಿ ಎಸ್ ವಿ ಸಂಕನೂರ ರವರನ್ನು ಪ್ರಜ್ಞಾವಂತ ಪದವೀಧರ ಮತದಾರರು ತಮ್ಮ ಪ್ರಥಮ ಪ್ರಶಾಸ್ತ್ಯ ಮತವನ್ನು ನೀಡಿ ಬಹುಮತದಿಂದ ಆರಿಸಿ ತರುವಂತೆ ಸರಕಾರಿ ನೌಕರರನ್ನು ಹಾಗೂ ನ್ಯಾಯವಾದಿಗಳನ್ನು ಮತ್ತು ಪದವೀಧರ ಚುನಾವಣೆಯ ಮತ ಹೊಂದಿದಂತಹ ಯುವ ಸಮೂಹವನ್ನು ಗಣ್ಯಾತಿ ಗಣ್ಯರನ್ನು ,ಅತ್ಯುತ್ತಮ ಸೇವೆ ನೀಡಬಲ್ಲ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಗದಗ ಜಿಲ್ಲಾಧ್ಯಕ್ಷರಾದ ಎಂ ವೈ ಮುಧೋಳ ರವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದರು




