
ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ಮತ್ತು ಬಿತ್ತಿಪತ್ರ ಬಿಡುಗಡೆ.
ಗದಗ : ಸತ್ಯಮಿಥ್ಯ (ಜ -12)
ಜನೇವರಿ 20 ಮತ್ತು 21 ರಂದು ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ 10 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರಗುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಕಾನೂನು ಸಚಿವ ಎಚ್. ಕೆ. ಪಾಟೀಲ ಸಮ್ಮೇಳನದ ಲಾಂಛನ ಮತ್ತು ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಸಚಿವ ಎಚ್. ಕೆ. ಪಾಟೀಲ.ಗದಗ ಜಿಲ್ಲೆಯು ಸಂಗೀತ, ಕಲೆ, ಇತಿಹಾಸ, ಸಂಸ್ಕೃತಿಗೆ ಹೆಸರುವಾಸಿಯಾಗಿದೆ.ಜನರು ಇತಿಹಾಸವನ್ನು ಅರಿಯುವಂತಾಗಲು ಈ ಸಮ್ಮೇಳನ ಸಹಕಾರಿಯಾಗಲಿದೆ ಎಂದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ. ಸಮ್ಮೇಳನದ ಲಾಂಛನವನ್ನು ಪುಂಡಲೀಕ ಕಲ್ಲಿಗನೂರ ರಚಿಸಿದ್ದಾರೆ. ಈ ಲಾಂಛನ ಸಮಗ್ರ ಗದಗ ಜಿಲ್ಲೆಯ ಸಂಸ್ಕೃತಿಯನ್ನು ಒಳಗೊಂಡಿದೆ. ಈಗಾಗಲೇ ಸಮ್ಮೇಳನಕ್ಕೆ ಹಲವು ಕಮೀಟಿಗಳನ್ನು ರಚನೆಮಾಡಲಾಗಿದ್ದು ಸಮ್ಮೇಳನದ ಸಿದ್ಧತೆ ಭರ್ಜರಿಯಾಗಿ ರೂಪಗೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ, ಶಾಸಕ ಜಿ. ಎಸ್. ಪಾಟೀಲ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ. ಎಸ್. ನೇಮಗೌಡರ.ಶಾಸಕ ಡಿ. ಆರ್. ಪಾಟೀಲ ಸೇರಿದಂತೆ ಅನೇಕ ಸಾಹಿತ್ಯಸಕ್ತರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.