
ಮೋದಿ ನಮ್ಮ ಖಾತೆಗೆ 3000 ರೂಪಾಯಿ ಹಾಕ್ತಾರಾ! ಸುಳ್ಳು ಸುದ್ದಿಗೆ ಅಕೌಂಟ್ ತೆರೆಯಲು ಮುಂದಾದ ಮಹಿಳೆಯರು
ಅಂಚೆ ಕಚೇರಿಗೆ ಅಕೌಂಟ್ ತೆರೆಯಲು ಮುಂದಾದ ಮಹಿಳೆಯರು
ಕೊಪ್ಪಳ : ಸತ್ಯಮಿಥ್ಯ ( ಜುಲೈ -29).
ಪೋಸ್ಟ್ ಆಫೀಸಿನಲ್ಲಿ ಅಕೌಂಟ್ ಮಾಡಿಸಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರ ಅಕೌಂಟಿಗೆ ಮೂರು ಸಾವಿರ ಹಾಕುತ್ತಾರೆ ಎಂದು ಸುಳ್ಳು ವದಂತಿ ಮಹಿಳೆಯರ ದಂಡೆ ಅಕೌಂಟ್ ಮಾಡಿಸಲು ಪೋಸ್ಟ್ ಆಫೀಸ್ಗೆ ಆಗಮನ.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಅಂಚೆ ಕಚೇರಿಯಲ್ಲಿ ಮಹಿಳೆಯರು ಅಕೌಂಟ್ ಮಾಡಿಸಿದರೆ 3000 ಹಾಕುತ್ತಾರೆ ಎಂಬ ವದಂತಿ ಮಹಿಳೆಯರಿಂದ ಮಹಿಳೆಯರಿಗೆ ಹಬ್ಬುತ್ತಿದ್ದು ಎಲ್ಲರೂ ಅಂಚೆ ಕಚೇರಿಗೆ ಆಗಮಿಸಿ ಅಕೌಂಟ್ ಮಾಡಿಸುತ್ತಿದ್ದಾರೆ.
ಇದನ್ನು ಅಲ್ಲಿಯ ಅಂಚೆ ಕಚೇರಿಯ ಮುಖ್ಯ ಅಧಿಕಾರಿಗಳಾದ ವಿಷ್ಣು ಅಜ್ಜಿ ಅವರನ್ನು ನಮ್ಮ ವರದಿಗಾರ ಮುಖಾಂತರ ವಿಚಾರಿಸಿದಾಗ ಈಗ ಎರಡು ಮೂರು ದಿನಗಳಿಂದ ಅತ್ಯಧಿಕ ಮಹಿಳೆಯರು ತಮ್ಮ ಅಕೌಂಟನ್ನು ಮಾಡಿಸಲು ಮುಗಿ ಬೀಳುತ್ತಿರುವುದನ್ನು ನೋಡಿ ವಿಚಾರಿಸಿದಾಗ ನರೇಂದ್ರ ಮೋದಿಯವರು ನಮ್ಮ ಅಕೌಂಟಿಗೆ 3000 ರೂಪಾಯಿ ಜಮಾ ಮಾಡುತ್ತಾರೆ ಅದಕ್ಕಾಗಿ ನಾವು ಅಕೌಂಟ್ ಮಾಡಿಸುತ್ತೇವೆ ಎಂದು ಮಹಿಳೆಯರು ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಸರ್ಕಾರದಿಂದ ಅಥವಾ ಮೇಲಾಧಿಕಾರಿಗಳಿಂದ ನಮ್ಮ ಇಲಾಖೆಗೆ ಯಾವುದೇ ತರನಾದ 3000 ಜಮಾ ಮಾಡುವಂತಹ ಯೋಜನೆಯ ಮಾಹಿತಿಯನ್ನು ನೀಡಿರುವುದಿಲ್ಲ ಆದರೆ ನಾವು ಯಾರಾದರೂ ಅಕೌಂಟ್ ಮಾಡಿಸಿದ್ದಲ್ಲಿ ಅಂತವರ ಅಕೌಂಟ್ ಮಾಡಿಕೊಳ್ಳಲು ಎರಡುನೂರುಪಾಯಿ ತೆಗೆದುಕೊಂಡು ಅಕೌಂಟ್ ಮಾಡಿಕೊಳ್ಳುತ್ತಿದ್ದೇವೆ ಅಷ್ಟೇ ಹೊರತು ಯಾವುದೇ ತರನಾದ ಸರ್ಕಾರದಿಂದ ನಮಗೆ ಮಾಹಿತಿ ಇರುವುದಿಲ್ಲ ಎಂದು ತಿಳಿಸಿದರು.
ಅಂಚೆ ಕಚೇರಿಗೆ ಆಗಮಿಸಿದ ಮಹಿಳೆಯರನ್ನ ವಿಚಾರಿಸಿದಾಗ ಗ್ರಾಮದ ಎಲ್ಲಾ ಮಹಿಳೆಯರು ನರೇಂದ್ರ ಮೋದಿಜಿ ಅವರು ಮೂರು ಸಾವಿರ ರೂಪಾಯಿಗಳನ್ನು ಪೋಸ್ಟ್ ಆಫೀಸಿನಲ್ಲಿ ಅಕೌಂಟ್ ಮಾಡಿಸಿದರೆ ಹಾಕುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ನಾವು ಪೋಸ್ಟ್ ಆಫೀಸಿಗೆ ಬಂದು ಅಕೌಂಟ್ ಮಾಡಿಸಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದರು.
ವರದಿ : ಚೆನ್ನಯ್ಯ ಹಿರೇಮಠ.