
ಗುರುವಿನಿಂದ ದೀಕ್ಷೆ ಪಡೆದಾಗ ಮಾತ್ರ ಜೀವನ ಸ್ವಾರ್ಥಕತೆ:-ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಕೊಪ್ಪಳ :ಸತ್ಯಮಿಥ್ಯ (ಅಗಸ್ಟ್ -25).
ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಶ್ರೀ ಜಗದ್ಗುರು ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಾಡೋಜ ಅನ್ನದಾನೇಶ್ವರ ಮಹಾ ಶಿವಯೋಗಿಗಳ ಅಪ್ಪಣೆಯ ಮೇರೆಗೆ ದಿನಾಂಕ 25 .6. 2024 ರವಿವಾರ ದಿವಸ 30 ವಟುಗಳಿಗೆ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕುಂಭ ಮೆರವಣಿಗೆ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷ ಮಂತ್ರ ಬೋಧನೆ ಮಾಡಿ ಇಷ್ಟಲಿಂಗ ಪೂಜೆಯ ಮಹತ್ವದ ಬಗ್ಗೆ ಮಾತನಾಡಿದ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮೈನಳ್ಳಿ, ಜಂಗಮ ವಟುಗಳಿಗೆ ಅಯ್ಯಾಚಾರ ಶಿವ ಭಕ್ತರಿಗೆ ಶಿವ ದೀಕ್ಷೆ ನೀಡುತ್ತಾ ಸನಾತನ ಕಾಲದಿಂದಲೂ ಬಂದದ್ದು. ಪ್ರತಿಯೊಬ್ಬರು ದೀಕ್ಷೆಯನ್ನು ಪಡೆಯುವುದರೊಂದಿಗೆ ಮೋಕ್ಷ ಪ್ರಾಪ್ತಿಯಾಗುವುದು ಆಚಾರವೇ ಅಂಗವಾಗಿ , ಪಂಚಾಚಾರವೇ ಪ್ರಾಣವಾಗಿದ್ದು. ಷಟಸ್ಥಲಗಳೇ ವೀರಶೈವರಿಗೆ ಆತ್ಮವಾಗಿದೆ ಇವುಗಳ ಫಲ ಪ್ರಾಪ್ತವಾಗುವುದು ಗುರುವಿನಿಂದ ದೀಕ್ಷೆ ಪಡೆದಾಗ ಮಾತ್ರ ಆತನ ಜೀವನ ಸಾರ್ಥಕತೆ ಹೊಂದುವುದರಲ್ಲಿ ಸಂಶಯವಿಲ್ಲ ಎಂದು ಆಶೀರ್ವಚನ ನೀಡಿದರು.
ಅನ್ನದಾನೇಶ್ವರ ಶಾಖಾ ಮಠದ ಡಾ.ಮಹಾದೇವಯ್ಯ ಮಹಾಸ್ವಾಮಿಗಳು ಮಾತನಾಡುತ್ತಾ ವೀರಶೈವ ಧರ್ಮ ಪರಂಪರೆಯಲ್ಲಿ ಬರುವ 16 ಸಂಸ್ಕಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಸಂಸ್ಕಾರವೇ ದೀಕ್ಷಾ ಸಂಸ್ಕಾರ. ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವೇ ಶಿವ ದೀಕ್ಷೆಯಾಗಿದೆ. ವೀರಶೈವ ಸನಾತನ ಧರ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಲಿಂಗ ದೀಕ್ಷೆಗೆ ತನ್ನದೇ ಆದ ಮಹತ್ವ ನೀಡಿದೆ. ಲಿಂಗ ದೀಕ್ಷೆ ಪಡೆಯಲು ಯಾವುದೇ ಜಾತಿ ಲಿಂಗ, ಧರ್ಮಭೇದವಿಲ್ಲ. ಆದ್ದರಿಂದ ಎಲ್ಲಾ ಓಟುಗಳು ಆಚಾರ, ವಿಚಾರ, ಧರ್ಮ ಬೋಧನೆಗಳನ್ನು ಮಾಡುತ್ತಾ. ಉತ್ತಮ ಸಮಾಜ ಕಟ್ಟಲು ಶ್ರಮಿಸಬೇಕು. ಒಂದು ಧರ್ಮದ ಕಾರ್ಯಗಳು ನೆರವೇರಬೇಕಾದರೆ ಗ್ರಾಮದ ಮತ್ತು ಪಟ್ಟಣದ ಎಲ್ಲರ ಸಹಾಯ ಸಹಕಾರ ಅತ್ಯಧಿಕವಾಗಿದ್ದು ಇಂತಹ ಧರ್ಮಕಾರ್ಯಗಳು ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ಮಾತನಾಡಿದರು.
ಗ್ರಾಮದ ಹಿರಿಯ ವೇದಮೂರ್ತಿ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ, ರುದ್ರಯ್ಯ ಹಿರೇಮಠ, ಶರಣಯ್ಯ ಕಂಬಾಳಿ ಮಠ, ಪ್ರಶಾಂತ್ ಸ್ವಾಮಿ ಕಲ್ಮಠ, ಇತರರು ಪುರೋಹಿತ್ಯವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಧರ ಮುರುಡಿ ಹಿರೇಮಠ ಯಲಬುರ್ಗಾ, ಗುರು ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಇಟಗಿ, ಶಿವಯೋಗಿ ಮಹಾಸ್ವಾಮಿಗಳು ಸೊರಟೂರು, ಅಭಿನವ ಪ್ರಭು ಮಹಾಸ್ವಾಮಿಗಳು ಶ್ರೀ ಕಲ್ಮಠ ಕಂಪ್ಲಿ, ಮತ್ತು ಶ್ರೀ ಅನ್ನದಾನೇಶ್ವರ ಸೇವಾ ಸಮಿತಿಯ ಸರ್ವ ಪದಾಧಿಕಾರಿಗಳು ಮತ್ತು ಭಕ್ತ ಮಂಡಳಿಯವರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.