ಫೆ 04 ರಿಂದ 07 ರವರೆಗೆ ಅಂಬಾ ಭವಾನಿ ಜಾತ್ರಾ ಮಹೋತ್ಸವ
ಜಮಖಂಡಿ:ಸತ್ಯಮಿಥ್ಯ (ಫೆ -02).
ತಾಲೂಕಿನ ಸಾವಳಗಿ ಗ್ರಾಮದಲ್ಲಿ ಆರಾದ್ಯ ದೈವಿ ಶ್ರೀ ಅಂಬಾಭವಾನಿ ದೇವಿ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಫೆ 04 ರಿಂದ ಫೆ 07 ರವರೆಗೆ ನಡೆಯಲಿದೆ.
ಮಂಗಳವಾರ ಫೆ 04 ರಂದು ಸಾವಳಗಿ ಪೋಲಿಸ್ ಠಾಣೆ ವತಿಯಿಂದ ಹೋಮ ಹವನ ದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭಗೊಳ್ಳಲಿದೆ, ರಾತ್ರಿ 7 ಗಂಟೆಯಿಂದ 9 ರವರೆಗೆ ಹ. ಭ. ಪ. ಪುಟ್ಟು ಮಹಾರಾಜರು ಇವರಿಂದ ಪ್ರವಚನ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಗೊಂಧಳಿ ಕಾರ್ಯಕ್ರಮ ನಡೆಯಲಿವೆ.
ಬುಧವಾರ ಫೆ 05 ರಂದು ಹೋಮಹವನ ಗಳೊಂದಿಗೆ ಮಂಗಳಾರತಿ ಕಾರ್ಯಕ್ರಮ ರಾತ್ರಿ 7 ಗಂಟೆಗೆ ಪ್ರವಚನ ಹಾಗೂ ರಾತ್ರಿ ಗೋಂಧಳಿ ಕಾರ್ಯಕ್ರಮ ನಡೆಯಲಿವೆ.
ಗುರುವಾರ ಫೆ 06 ರಂದು ಬೆಳಿಗ್ಗೆ 9.00 ಗಂಟೆಗೆ ಸಕಲ ಜನಪದ ವಾದ್ಯ ಮೇಳಗಳೊಂದಿಗೆ ಕುಂಭಮೇಳ ಮಹೋತ್ಸವ ಕಾರ್ಯಕ್ರಮ ಜರುಗಲಿದೆ ಪ್ರವಚನ ಹಾಗೂ ಗೊಂಧಳಿ ಕಾರ್ಯಕ್ರಮ ನಡೆಯಲಿವೆ.
ಶುಕ್ರವಾರ ಫೆ 07 ರಂದು ಬೆಳಗ್ಗೆ 11 ಗಂಟೆಗೆ ಧರ್ಮಸಭೆ ಮತ್ತು ಮದ್ಯಾಹ್ನ 2 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬ ಕಾರ್ಯಕ್ರಮ, ಹಾಗೂ ಪ್ರತಿದಿನ ಅನ್ನ ಪ್ರಸಾದ ಸೇವೆ ಇರುತ್ತದೆ.
ಧರ್ಮಸಭೆ: ಪೆ 07 ರಂದು ಬೆಳಗ್ಗೆ 11 ಗಂಟೆಗೆ ಧರ್ಮಸಭೆ ಕಾರ್ಯಕ್ರಮ ಜರುಗುವುದು ಈ ಧರ್ಮಸಭೆಗೆ ಶ್ರೀ ಮರಾಠಾ ಸಮಾಜದ ಜಗದ್ಗುರು ಶ್ರೀ ಮಂಜುನಾಥ ಭಾರತಿ ಸ್ವಾಮಿಜೀ ಹಾಗೂ ರಾಜಕೀಯ ನಾಯಕರು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅನೇಕರು ಆಗಮಿಸಲಿದ್ದಾರೆ, ಹಾಗೂ ಜಾತ್ರಾ ಮಹೋತ್ಸವಕ್ಕೆ ಎಲ್ಲ ಭಕ್ತಾದಿಗಳು ಆಗಮಿಸಬೇಕು ಈ ನಾಲ್ಕು ದಿನಗಳ ಕಾಲ ಜಾತ್ರೆ ಅತಿ ಸರಳವಾಗಿ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಕಮಿಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಸಚಿನ್ ಜಾದವ್