ವಿದ್ಯುತ್ ಟಿಸಿ ದುರಸ್ಥಿ ಕೇಂದ್ರ ಸ್ಥಾಪನೆಗೆ ರೈತ ಸಂಘಟನೆ ಆಗ್ರಹ.
ಆರ್ ಆರ್ ನಂಬರ ಒದಗಿಸಲು ಹಳೆ ಮಾನದಂಡ ಪರಿಗಣಿಸಲು ರೈತರ ಮನವಿ.
ವಿದ್ಯುತ್ ಟಿಸಿ ದುರಸ್ಥಿ ಕೇಂದ್ರ ಸ್ಥಾಪನೆಗೆ ರೈತ ಸಂಘಟನೆ ಆಗ್ರಹ.

ಆರ್ ಆರ್ ನಂಬರ ಒದಗಿಸಲು ಹಳೆ ಮಾನದಂಡ ಪರಿಗಣಿಸಲು ರೈತರ ಮನವಿ.

ಗಜೇಂದ್ರಗಡ : ಸತ್ಯಮಿಥ್ಯ (ಎ -22).
ನಗರದಲ್ಲಿ ವಿದ್ಯುತ್ ಟಿಸಿ ದುರಸ್ಥಿ ಕೇಂದ್ರ ಸ್ಥಾಪನೆ ಹಾಗೂ ರೈತರಿಗೆ ಅನುಕೂಲವಾಗುವಂತ ಹಳೆಯ ಮಾನದಂಡಗಳ ನಿಯಮಾನುಸಾರ ಆರ್ ಆರ್ ನಂಬರ ಒದಗಿಸಬೇಕು ಎಂದು ಇಂದು ಗದಗ ಜಿಲ್ಲಾಧಿಕಾರಿಗಳಿಗೆ ಗಜೇಂದ್ರಗಡ ತಹಶೀಲ್ದಾರ ಮುಖಾಂತರ, ಹಾಗೂ ಗಜೇಂದ್ರಗಡ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಗೌರವಧ್ಯಕ್ಷರಾದ ಮಹಾದೇವ ವೆರ್ಣೇಕರ, ತಾಲೂಕು ಅಧ್ಯಕ್ಷರಾದ ಅನೀಲ್ ಕರ್ಣೆ, ಅಂದಪ್ಪ ಅಂಗಡಿ,ಉದಯಸಿಂಗ ರಜಪೂತ, ಹುಚ್ಚುಸಾಬ ಬಡಿಗೇರ, ಬಸುರಾಜ ಹೂಗಾರ, ಶಿವಕುಮಾರ ಕಲ್ಮಠ, ಶಿವಯ್ಯ ಸಾಲಿಮಠ, ವಿನಾಯಕ ಅಚ್ಚಲಕರ, ಕಾಶಪ್ಪ ಆರೇರ, ಶರಣಪ್ಪ ಭಗವತಿ, ಎನ್. ಬಿ. ಶಿವಳ್ಳಿ,ವಿರೇಶ ಮಳೋತ್ತರ, ಸಂತೋಷ ಉಪ್ಪಾರ, ರೇಣುಕರಾಜ ಹರಪನಹಳ್ಳಿ, ಶರಣಪ್ಪ ಗಡಾದ, ಯಮನೂರ ಅಬ್ಬಿಗೇರಿ, ಯಮನಪ್ಪ ಮಾದರ,ಶರಣಪ್ಪ ಕಂಬಳಿ, ಕಳಕುಸಾ ಶಿಂಗ್ರಿ, ಯಮನೂರಪ್ಪ ವಾರಿಕಲ್ಲ, ಧರ್ಮಣ್ಣ ವದೆಗೋಳ, ಯಮನೂರಸಾಬ್ ನದಾಫ ಸೇರಿದಂತೆ ಅನೇಕ ರೈತಭಾಂದವರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.




