ನರೇಗಾ ಯೋಜನೆಯ ಕಾಮಗಾರಿಗಳ
ಪರಿಶೀಲಿಸಿದ ರಾಜ್ಯ ತಂಡ.
ರೋಣ ತಾಲೂಕಿನ ಅಬ್ಬಿಗೇರಿ ಹಾಗೂ ಸವಡಿ ಗ್ರಾಪಂ ಗಳಿಗೆ ಭೇಟಿ
ಗದಗ: ಸತ್ಯಮಿಥ್ಯ (ನ-26).
ರೋಣ ತಾಲೂಕಿನ ಅಬ್ಬಿಗೇರಿ ಹಾಗೂ ಸವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳ ಸಾಮಗ್ರಿ ಬಿಲ್ಲುಗಳ FTO ಗಳ ಪರಿಶೀಲನೆ ಕುರಿತು ಅಯುಕ್ತಾಲಯದಿಂದ ಆಗಮಿಸಿದ ರಾಜ್ಯ ತಂಡ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿತು..
ಜಂಟಿ ನಿರ್ದೇಶಕರಾದ ಶ್ರೀಮತಿ ಲಲಿತಾ ರೆಡ್ಡಿ (ಕೃಷಿ) ನೇತೃತ್ವದಲ್ಲಿ ಸದಸ್ಯರಾದ ಶ್ರೀಮತಿ ತನುಜಾ, ಯಶವಂತ ಜಿ.ಎಲ್ ಅವರು ಜಂಟಿಯಾಗಿ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ಕಾಮಗಾರಿಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದರು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಂಡು ಸಾಮಗ್ರಿ ಪಾವತಿಗೆ ಸೃಜನೆ ಮಾಡಲಾದ FTO ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಅನುಷ್ಠಾನಗೊಂಡಿರುವ ವೈಯಕ್ತಿಕ ಕಾಮಗಾರಿಗಳ ಕುರಿತು ಪರಿಶೀಲಿಸಿನೆ ನಡೆಸಿದ ಅವರು ಯೋಜನೆಯಡಿ ಫಲಾನುಭವಿಗಳು ಪಡೆದುಕೊಂಡ ಸವಲತ್ತುಗಳನ್ನು ಪರಿಶೀಲಿಸಿ ಯೋಜನೆಯಡಿ ಫಲಾನುಭವಿಗಳು ಆರ್ಥಿಕವಾಗಿ ಸಾಮಾಜಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆಯೇ ಎಂಬುದರ ಕುರಿತು
ಫಲಾನುಭವಿಗಳ ಜೊತೆಗೆ ಸಮಾಲೋಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ, ಜಿಲ್ಲಾ ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ ಕಿರಣಕುಮಾರ ಎಸ್.ಎಚ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಂ, ಬಸವರಾಜ ಶೃಂಗೇರಿ ನರೇಗಾ ವಿಭಾಗದ ತಾಲೂಕು ಐಇಸಿ ಸಂಯೋಜಕ ಮಂಜುನಾಥ, ತಾಂತ್ರಿಕ ಸಹಾಯಕ ಪ್ರವೀಣ ಸೂಡಿ, ಗ್ರಾಮ ಪಂಚಾಯತಗಳ ಸಿಬ್ಬಂದಿ ವರ್ಗ ಹಾಗೂ ತಾಲೂಕ ಪಂಚಾಯತಿ ನರೇಗಾ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಚನ್ನು. ಎಸ್.