ಜಕ್ಕಲಿಯ ಅನ್ನದಾನ ಶ್ರೀಮಠದಲ್ಲಿ ವೈಭವದ ತೊಟ್ಟಿಲು ಕಾರ್ಯಕ್ರಮ ಪುರಾಣದ ಸನ್ನಿವೇಶ
ಚಿತ್ರ : ಸುಮಂಗಲಿಯರಿಂದ ತೊಟ್ಟಿಲು ಕಾರ್ಯಕ್ರಮವು ವೈಭವದಿಂದ ಜರುಗಿತು.
ನರೇಗಲ್ಲ-ಸತ್ಯಮಿಥ್ಯ (ಸೆ.೨7).
ಸಮೀಪದ ಜಕ್ಕಲಿ ಗ್ರಾಮದ ಹಾಲಕೆರೆ ಅನ್ನದಾನೇಶ್ವರ ಶ್ರೀಮಠದಲ್ಲಿ ಬುಧವಾರ ಸಂಜೆ ನಡೆದ ಪುರಾಣ ಪ್ರವಚನದಲ್ಲಿ ಸುಮಂಗಲಿಯರಿಂದ ತೊಟ್ಟಿಲು ಕಾರ್ಯಕ್ರಮವು ವೈಭವದಿಂದ ಜರುಗಿತು.
ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಟಪಲ್ಲಕ್ಕಿ ಉತ್ಸವದ ಅಂಗವಾಗಿ ೨೧ ದಿನಗಳವರೆಗೆ ನಡೆದಿರುವ ಒಳ ಬಳ್ಳಾರಿಯ ಚೆನ್ನಬಸವ ತಾತಾನವರ ಪುರಾಣ ಪ್ರವಚನ ಹೇಳುವ ಸನ್ನಿವೇಶದಲ್ಲಿ ಬರುವ ಮಗುವಿಗೆ ನಾಮಕರಣ ಮಾಡುವ ತೊಟ್ಟಿಲು ಮತ್ತು ಉಡಿ ತುಂಬುವ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ವಿಶೇಷವಾಗಿ ನೆರವೇರಿತು.
ಈ ಕಾರ್ಯಕ್ರಮದ ಮೊದಲು ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಸಹ ಮೆಣಸಗಿಯವರ ಓಣಿಯ ಸಕಲ ಸದ್ಭಕ್ತರು ವಿವಿಧ ಬಗೆಯ ಹೂವುಗಳಿಂದ ಶೃಂಗಾರಗೊಳಿಸಿದ್ದ ತೊಟ್ಟಿಲುನ್ನು ಶ್ರೀ ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆ ಮೆರವಣಿಗೆ ಮಾಡುವುದರ ಮೂಲಕ ಶ್ರೀಮಠಕ್ಕೆ ತೆರಳಿ ಸಮರ್ಪಣೆ ಮಾಡಿದರು.
ಈ ವೇಳೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮುತ್ತೈದೆಯರು ತೊಟ್ಟಿಲುಗೆ ಬೇಕಾದ ಅಲಂಕಾರಿಕ ವಸ್ತುಗಳಾದ ಕುಂಚಗೆ, ಕೂಲಾಯಿ, ಬಟ್ಟೆಯನ್ನು ತಂದು ಹೊದಿಸಿದ್ದರು. ನಾಮಕರಣಕ್ಕೆ ಭಕ್ತರು ಬೆಳ್ಳಿಯ ಗಿಂಡಿ, ಬಟ್ಟಲು, ಹಾಲ್ಗಡಗ, ಲಿಂಗದಕಾಯಿ ಹಾಗೂ ಉಡುದಾರ ಕಾಣಿಕೆಯನ್ನು ನೀಡಿದರು. ನಂತರ ತೊಟ್ಟಿಲೊಳಗೆ ಒಂದು ಪುಟ್ಟ ಸುಂದರ ಗೊಂಬೆಯನ್ನು ಮಲಗಿಸಿ ಶ್ರದ್ದಾಭಕ್ತಿಯಿಂದ ಪೂಜೆಯನ್ನು ಸಲ್ಲಿಸಿದರು. ಇದಾದ ಬಳಿಕ ಶರಣಯ್ಯ ಹಿರೇಮಠ ಇವರ ನೇತೃತ್ವದಲ್ಲಿ ಮಂತ್ರ ಪಠಣದೊಂದಿಗೆ ಚನ್ನಯ್ಯ ಎಂಬ ನಾಮವನ್ನು ಹೆಸರಿಸಿ ನಾಮಕರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಶ್ಯಾಶೆಟ್ಟಿ, ಶರಣಮ್ಮ ಅಂಗಡಿ ಇವರು ಬಸವಣ್ಣನವರ ವಚನ, ಜೋಗುಳ ಪದ, ಸೋಬಾನೆ ಪದಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇವರ ಹಾಡಿಗೆ ಮಹಿಳೆಯರು ಹಿನ್ನೆಲೆ ಧ್ವನಿಗೂಡಿಸಿ ಹಾಡಿದರು. ತೊಟ್ಟಿಲು ಕಾರ್ಯದ ಸಂಪ್ರದಾಯದಂತೆ ಮನೆಯಿಂದಲೇ ಅಕ್ಕಡಿಕಾಳುಗಳಿಂದ ತಯಾರಿಸಿದ್ದ ಗುಗ್ಗರಿಯನ್ನು ಪ್ರಸಾದ ರೂಪದಲ್ಲಿ ಹಂಚಲಾಯಿತು. ಈ ವೇಳೆ ಮದುವೆ ಆಗದವರಿಗೆ ಕಂಕಣ ಕಟ್ಟುವುದು, ಸಂತಾನ ಭಾಗ್ಯ ಇಲ್ಲದರಿಗೆ ಉಡಿ ತುಂಬುವ ಕಾರ್ಯವು ಜೋರಾಗಿ ನಡೆಯಿತು.
ಬಾಳಿಹಣ್ಣಿನ ಶಿಖರಣಿಯ ಮಹಾ ಪ್ರಸಾದದ ಭಕ್ತಿಸೇವೆಯನ್ನು ಶ್ರೀಮಠದ ಸದ್ಬಕ್ತರಾದ ಶೇಖಣ್ಣವರ ಮೇಟಿ ವಹಿಸಿಕೊಂಡಿದ್ದರು.
ಶ್ರೀಮಠದ ಸಮಿತಿಯ ಹಿರಿಯರಾದ ವೀರಯ್ಯ ಹಿರೇಮಠ, ಶಿವನಾಗಪ್ಪ ದೊಡ್ಡಮೇಟಿ, ಈಶ್ವರಪ್ಪ ಇಟಗಿ, ಸುಭಾಸ ಕಡಗದ, ಪ್ರಕಾಶಪ್ಪ ಹೊಸಮನಿ, ಶರಣಪ್ಪ ಕುರಡಗಿ, ಉಮೇಶ್ ಕೊಪ್ಪದ, ಮಲ್ಲಿಕಾರ್ಜುನ ಕುರಡಗಿ, ವೀರೇಶ ಹಿರೇಮಠ, ಸಣ್ಣ ದ್ಯಾಮಣ್ಣ ಮಡಿವಾಳರ, ಚನ್ನಬಸಪ್ಪ ಸೂಡಿ, ವೀರಪ್ಪ ತಳವಾರ, ಅಂದಾನಗೌಡ್ರ ಪಾಟೀಲ, ಹರ್ಷವರ್ಧನ್ ದೊಡ್ಡಮೇಟಿ. ನಿಂಗಪ್ಪ ರೋಣದ, ಶಾಂತಮ್ಮ ಮೇಟಿ, ಸುಶೀಲಮ್ಮ ಮಸಲವಾಡ, ನೀಲಾಂಬಿಕೆ ಮೇಟಿ, ಲಕ್ಷ್ಮಮ್ ನಾಲ್ವಾಡದ, ಶರಣಮ್ಮ ವಾಲಿ, ಚನ್ನಬಸವ್ವ ಮಡಿವಾಳರ, ನಿರ್ಮಲಾ ಯಾಳಗಿ, ಈರಮ್ಮ ಯಾವಗಲ್ಲ, ಭೀಮವ್ವ ಕರೇಕುಲದ, ನಂದಾ ಮೆಣಸಗಿ, ಈರವ್ವ ನರೇಗಲ್ಲ, ಪೂರ್ಣಿಮಾ ಆದಿ, ಶಿವಲೀಲಾ ಜೋಗಿ, ಗೀತಾ ಮಂಗಳಗುಡ್ಡ, ಸರೋಜವ್ವ ಜೋಗಿ, ರತ್ನಾ ಹೂಗಾರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ಪ್ರಕಾಶ ವಾಲಿ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಶಾಸ್ತ್ರೀಗಳು ಶಿವಪೂಜಿ ಪುರಾಣ ಪ್ರವಚನ ಗೈದರು. ದ್ಯಾಮಣ್ಣ ಬಡಿಗೇರ ಹಾರ್ಮೋನಿಯಂಗೆ ಸಂಗೀತಕ್ಕೆ ಈರಣ್ಣ ಕಮ್ಮಾರ ತಬಲಾ ಸಾಥ್ ನೀಡಿದರು. ನಂತರ ಅನ್ನಸಂತರ್ಪಣೆ ನಡೆಯಿತು.
ವರದಿ : ಸಂಗಮೇಶ ಮೆಣಸಗಿ.