
ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವಿಗೆ ಕಂಬನಿ ಮಿಡಿದ ಗಣ್ಯರು.

ಗಜೇಂದ್ರಗಡ:ಸತ್ಯ ಮಿಥ್ಯ (ನ-27).
ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿಯವರು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಹಿನ್ನೆಲೆಯಲ್ಲಿ ನಗರದ ಕಾಲಕಾಲೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಬುಧವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪ್ರಭು ಹಿರೇಮಠ, ಬಸವರಾಜ ಬೇಲೇರಿ, ಶರಣಪ್ಪ ಮೆಣಸಿನಕಾಯಿ, ಶರಣಪ್ಪ ರೇವಡಿ, ಕಳಕಯ್ಯ ಸಾಲಿಮಠ, ಮಲ್ಲಪ್ಪ ಹಡಪದ, ಬಿ. ಎಸ್. ಬಸನಗೌಡರ, ಸಾಗರ ವಾಲಿ, ನಾಗಣ್ಣ ಲಕ್ಕಲಕಟ್ಟಿ, ಬಸವರಾಜ ಹೂಗಾರ ಸೇರಿದಂತೆ ಇತರರು ಇದ್ದರು.




