
ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.

ಗಜೇಂದ್ರಗಡ : ಸತ್ಯಮಿಥ್ಯ (ಜ-19.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ. ಶನಿವಾರ ರೋಣ ಮಂಡಲದ ವತಿಯಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು.
ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ. ಬಿಜೆಪಿ ರೋಣ ಮಂಡಲ ಯುವ ಮೋರ್ಚಾ ಅಧ್ಯಕ್ಷ ಉಮೇಶ್ ಚನ್ನು ಪಾಟೀಲ ಮಾತನಾಡಿ. ಇತ್ತೀಚಿಗೆ ರಾಹುಲ್ ಗಾಂಧಿಯವರು ಆರ್ ಎಸ್ ಎಸ್ ವಿರುದ್ಧ, ಬಿಜೆಪಿ ವಿರುದ್ಧ ಹೋರಾಟ ಮಾಡೋದಲ್ಲದೆ. ಭಾರತ ರಾಷ್ಟ್ರ ವಿರುದ್ಧ ನಾನು ಮತ್ತು ಕಾಂಗ್ರೇಸ್ ಹೋರಾಟ ಮಾಡುತ್ತೇವೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ರಾಹುಲ್ ಗಾಂಧಿಯವರ ಇಂತಹ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ಅಲ್ಲದೇ ಪ್ರತಿ ಭಾರಿ ರಾಹುಲ್ ವಿದೇಶಿ ಪ್ರವಾಸದಲ್ಲೂ ಬಿಜೆಪಿ ಮತ್ತು ಹಿಂದುಗಳನ್ನು ಗುರಿಯಾಗಿಸಿಕೊಂಡು ಭಾರತವನ್ನು ಅವಮಾನಿಸುವ, ಅಣುಕಿಸುವ ಮಾತುಗಳನ್ನು ಆಡುತ್ತಾರೆ. ದೇಶ ಮೊದಲು ನಂತರ ಪಕ್ಷ ಆಮೇಲೆ ವ್ಯಕ್ತಿಯನ್ನುವ ಸಿದ್ದಾಂತ ಭಾರತೀಯ ಜನತಾ ಪಕ್ಷದ್ದಾಗಿದೆ.ಆದ್ದರಿಂದ ರಾಹುಲ್ ಗಾಂಧಿ ತಮ್ಮ ಹೇಳಿಕೆ ಹಿಂಪಡೆದು ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು ಎಂದರು.
ಬಿಜೆಪಿಯ ಮುಖಂಡ ಉಮೇಶ ಮಲ್ಲಾಪುರ ಮಾತನಾಡಿ. ಭಾರತ ದೇಶದಲ್ಲಿಯೇ ಇದ್ದು, ಇಲ್ಲಿಯ ಜನತೆಯ ಸಹಕಾರದಿಂದ ದೇಶದ ಅತ್ಯುನ್ನತ ಸ್ಥಾನವನ್ನು ಅನುಭವಿಸುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಭಾರತವನ್ನು ವಿರೋಧಿಸುತ್ತೇವೆ ಎನ್ನುವ ಹೇಳಿಕೆ ಅಸಂಬದ್ಧವಾಗಿದೆ. 140 ಕೋಟಿ ಭಾರತೀಯರಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಕ್ಷಮೆಯಾಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವಾನಂದ ಮಠದ, ರಾಜೇಂದ್ರ ಘೋರ್ಪಡೆ ಮಾತನಾಡಿದರು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಪ್ರತಿ ಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಿರಿಯ ಮುಖಂಡ ಅಶೋಕ ನವಲಗುಂದ,ಸೂಗಿರೇಶ ಕಾಜಗಾರ , ವಿಶ್ವನಾಥ ಕುಷ್ಟಗಿ, ಕನಕಪ್ಪ ಅರಳಿಗಿಡದ, ರೂಪಲೇಶ ರಾಠೋಡ್,ಯಮನೂರಪ್ಪ ತೀರಕೋಜಿ, ಯು. ಆರ್. ಚನ್ನಮ್ಮನವರ, ರವಿ ಶಿಂಗ್ರಿ,ಬಾಲಾಜಿರಾವ್ ಭೋಸಲೆ, ಮುತ್ತಣ್ಣ ಚಟ್ಟೆರ, ಮಹಾಂತೇಶ ಪೂಜಾರ, ಬಸವರಾಜ ಬಂಕದ, ಶಿವು ಅರಳಿ, ಡಿ.ಜಿ.ಕಟ್ಟಿಮನಿ, ರಂಗನಾಥ ಮೇಟಿ, ವಿಜಯ ಬೂದಿಹಾಳ ಸೇರಿದಂತೆ ಅನೇಕರು ಇದ್ದರು.
ವರದಿ : ಚನ್ನು. ಎಸ್.