
“ಆಸ್ಮಾಕಂ ಸಂಸ್ಕೃತಂ” ಸರಣಿ ಸಂಸ್ಕೃತೋತ್ಸವ ಕಾರ್ಯಕ್ರಮ.
ಮುಶಿಗೇರಿ :ಸತ್ಯಮಿಥ್ಯ (ಅಗಸ್ಟ್ -30).
ಸ್ಥಳೀಯ ಕೆ ಪಿ ಎಸ್ ಜಿ ಎಚ್ ಪಿ ಎಸ್ ಶಾಲೆಯಲ್ಲಿ.ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಜಗದ್ಗುರು ಶ್ರೀ ಶಂಕರ ಶಿವಾಚಾರ್ಯ ಎಜುಕೇಶನ್ ಮತ್ತು ಕಲ್ಚರಲ್ ಸೊಸೈಟಿ ಬೇಲೂರು ಹಾಗೂ ಶ್ರೀ ಶರಣಬಸವೇಶ್ವರ ಸಂಸ್ಕೃತ ಪಾಠಶಾಲೆ ಮುಶಿಗೇರಿ ಇವರ ಸಹಯೋಗದಲ್ಲಿ.”ಆಸ್ಮಾಕಂ ಸಂಸ್ಕೃತಂ” ಸರಣಿ ಸಂಸ್ಕೃತೋತ್ಸವ ಕಾರ್ಯಕ್ರಮ.
ಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡ ವಲಯ ಸಂಸ್ಕೃತ ಪಾಠಶಾಲೆಗಳ ವಿಷಯ ಪರಿವೀಕ್ಷಕರಾದ ವಿದ್ವಾನ್ ಜಿ. ಎಸ್ ಗಾಂವ್ಕರರವರು ಕಾರ್ಯಕ್ರಮವನ್ನು ಉದ್ಘಾಟನೆ ಗೈದರು.ಅಧ್ಯಕ್ಷರಾಗಿ ಬಿ. ಕೆ. ಮರಿಗೌಡ್ರ, ದೈಹಿಕ ಶಿಕ್ಷಕರಾದ ಮ್ಯಾಗೇರಿ, ಶಿಕ್ಷಕಿಯರಾದ ಎನ್ ಎಚ್ ವೈದ್ಯ, ಜಿ. ಬಿ. ಬಿಳೇಯಲಿ, ಶಿಕ್ಷಕರಾದ ಎನ್. ಸಿ. ತಿಮ್ಮಾಪುರ, ನಿವೃತ್ತ ಶಿಕ್ಷಕ ಡೊಳ್ಳಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಎಸ್ ಎಂ ಪ್ಯಾಟಿಗೌಡ್ರ,ಸ್ವಾಗತ ಎಂ ಎಸ್ ಡೊಳ್ಳಿನ, ವಂದನಾರ್ಪಣೆಯನ್ನು ಜಯಶ್ರೀ ಸಜ್ಜನರ ನೆರವೇರಿಸಿದರು.
ವರದಿ : ವಿರೂಪಾಕ್ಷ.