
ಜಿಲ್ಲಾ ಸಾಹಿತ್ಯ ಸಮ್ಮೇಳನ ಒಂದು ರಾಜಕೀಯ ಸುಮಾವೇಶ ಆಗದಿರಲಿ- ಎಸ್ ಎಫ್ ಐ.
ಗಜೇಂದ್ರಗಡ:ಸತ್ಯಮಿಥ್ಯ (ಜ -19).
ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಸುತ್ತಿರುವ ೧೦ನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣಿಕೆಯಲ್ಲಿ ಸಾಹಿತಿಗಳು, ಚಿಂತಕರು, ಕಲಾವಿದರು, ಹೋರಾಟಗಾರರು, ವಿದ್ವಾಂಸರು,ತುಂಬಿರದೆ ಕೇವಲ ರಾಜಕೀಯ ನಾಯಕರುಗಳೆ ತುಂಬಿದ್ದು ಖೇದಕರ.
೧೦ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೋ ಚಂದ್ರಶೇಖರ ವಸ್ತ್ರದ ಅವರ ಅಧ್ಯಕ್ಷತೆಯಲ್ಲಿ ಒಳ್ಳೆಯ ಗೋಷ್ಠಿಗಳನ್ನು ಆಯೋಜಿಸಿ ಜನರ ಅಭಿವೃದ್ಧಿಯ , ಕನ್ನಡ ಅಭಿವೃದ್ಧಿಯ ಕುರಿತು ಚರ್ಚೆ ನಡೆಯಬೇಕಾಗಿತ್ತು ಆದರೆ ಗೋಷ್ಠಿಗಳು ಮಹಿಳೆ, ಮಕ್ಕಳ, ಯುವಜನತೆಯ,ಅಭಿವೃದ್ಧಿ, ಕನ್ನಡದ ಅಸ್ಮೀತೆ ಮತ್ತು ಸ್ಥಳೀಯ ಜನತೆಯ ಸಮಸ್ಯೆಗಳನ್ನು ಚರ್ಚಿಸದೆ. ಕೇವಲ ವಿಜೃಂಭಣೆಯಿಂದ ನಗರವನ್ನು ಅಲಂಕರಿಸಿ ರಾಜಕೀಯ ನಾಯಕರ ಪ್ಲೇಕ್ಸ್ ಗಳ ರಾರಾಜಿಸಲು ಸೀಮಿತವಾಗಿರುವುದು ಸರಿಯಲ್ಲ.
ಈಗಲೂ ಕಾಲ ಮಿಂಚಿಲ್ಲ ಜನತೆಯ ಕನ್ನಡದ ಅಸ್ಮೀತೆಯ ಪ್ರಶ್ನೆಗಳ ಕುರಿತು , ಮಕ್ಕಳ ,ಮಹಿಳೆಯರು ಕುರಿತು, ಕನ್ನಡ ಶಾಲೆಗಳ ಉಳಿವಿನ ಕುರಿತು ಗೋಷ್ಠಿಗಳನ್ನು ಆಯೋಜಿಸಿ ಮತ್ತು ಜಿಲ್ಲೆಯ ಹಿರಿಯ ಸಾಹಿತಿಗಳನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು ಹಾಗೂ ಹೋರಾಟಗಾರರನ್ನು, ಕಲಾವಿದರನ್ನು, ಚಿಂತಕರನ್ನು ,ಸಾಹಿತ್ಯಾಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಹಿತ್ಯ ಸಮ್ಮೇಳನವು ಜನರ ಪರವಾದ ನಿಲುವು ನಿರ್ಣಯಗಳನ್ನು ಜಾರಿಗೆ ಮುಂದಾಗಬೇಕು. ಸಾಹಿತ್ಯ ಸಮ್ಮೇಳನವು ಜನರ ನುಡಿಯಾಗಬೇಕೆ ವಿನಹ ರಾಜಕೀಯ ಸುಮಾವೇಶ ಆಗದಿರಲಿಯೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯು ಒತ್ತಾಯಿಸುತ್ತದೆಯೆಂದು ಚಂದ್ರು ರಾಠೋಡ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.
ವರದಿ : ಚನ್ನು. ಎಸ್.