
*ಸಾವಳಗಿಯಲ್ಲಿ ಮಲ್ಲಯ್ಯನ ಮೆರವಣಿಗೆ.
*ಕಂಬಿ ಮಲ್ಲಯ್ಯನಿಗೆ ಬೆಲ್ಲದ ನೈವೇದ್ಯ ಅರ್ಪಣೆ.
ಸಾವಳಗಿ:ಸತ್ಯಮಿಥ್ಯ (ಎ -18)
ಶ್ರೀಶೈಲ ಮಲ್ಲಿಕಾರ್ಜುನ ಕಂಬಿಯ ಮಾಳಿ ಮಲ್ಲಯ್ಯನ ಐದೇಶಿ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಐದೇಶಿ ಉತ್ಸವ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಬ್ಯಾಂಜೋ, ಕರಡಿ ಮಜಲು ಸೇರಿದಂತೆ ಹಲವು ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಉತ್ಸವ ಸಾಗಿತು.
ಕಂಬಿ ಮಲ್ಲಯ್ಯ ದೇವರನ್ನು ಹೆಗಲ ಮೇಲೆ ಹೊತ್ತು ಸಾಗಿದ್ದು ಒಂದೆಡೆಯಾದರೆ ಅದರ ಮುಂಭಾಗದಲ್ಲಿ ಕನ್ನಡಿ, ಬಾಸಿಂಗ , ಮುತ್ತೈದೆಯರು ಆರತಿ, ದಿವಟಗಿ, ವಿವಿಧ ವಾದ್ಯ ಮೇಳದೊಂದಿಗೆ ಪ್ರತೀ ವರ್ಷದ ಪದ್ಧತಿಯಂತೆ ಕಂಬಿ ಮಲ್ಲಯ್ಯನನ್ನು ಕೂಡಿಸಿ ಮಂಗಳಾರತಿ ಮಾಡಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು.
ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿಯಿಂದ ನಮಿಸಿದರು. ಶ್ರೀಶೈಲ ಪಾದಯಾತ್ರೆ ಮುಗಿಸಿಕೊಂಡ ಬಂದವರಿಗೆ ಅವರ ಬೀಗರು, ಅಕ್ಕ ತಂಗಿಯರು (ಆಹೇರಿ) ಸಮವಸ್ತ್ರಗಳನ್ನು ನೀಡಿದರು.
ಶುಕ್ರವಾರ ಐದೇಶಿ ದಿನವಾಗಿದ್ದರಿಂದ ಇಡೀ ಊರಲ್ಲಿ ಒಂದು ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಭಕ್ತರು ಭಕ್ತಿ ಪರವಶರಾಗಿ ಐದೇಶಿ ಬ್ಯಾಂಜೋ ಮುಂಭಾಗದಲ್ಲಿ ಕುಣಿದು ಕುಪ್ಪಳಿಸಿದರು ಒಟ್ಟಾರೆಯಾಗಿ ಐದೇಶಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ವರದಿ : ಸಚೀನ ಆರ್ ಜಾಧವ