ರೋಣ : ಸಿದ್ದರಾಮಯ್ಯ ಭೇಟಿ ಹಿನ್ನೆಲೆ – ಪಂಚಮಸಾಲಿ ಯುವ ಮುಖಂಡರ ಬಂಧನ.
ಮಾತೆತ್ತಿದರೆ ಸಂವಿಧಾನ ರಕ್ಷಣೆಯ ಮಾತನಾಡುವ ಕಾಂಗ್ರೇಸ್. ಪಂಚಮಸಾಲಿ ಹೋರಾಟಗಾರರನ್ನು ಬಂದಿಸುತ್ತಿದೆ – ಉಮೇಶ ಚನ್ನು ಪಾಟೀಲ್.
ರೋಣ : ಸತ್ಯಮಿಥ್ಯ. ( ಡಿ -15).
ಮಾತೆತ್ತಿದರೆ ಸಂವಿಧಾನ ಅಪಾಯದಲ್ಲಿದೆ. ಅದನ್ನು ನಾವೂ ರಕ್ಷಣೆ ಮಾಡುತ್ತೇವೆ ಎಂದು ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೇಸ್ ನಾಯಕರು ಇಂದು ಮಾಡುತ್ತಿರುವುದೇನು? ಎಂದು ತಾಲೂಕಾ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಉಮೇಶ ಚನ್ನು ಪಾಟೀಲ ಹರಿಹಾಯ್ದರು.
ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನಿಮಿತ್ತ ಗದಗ ಜಿಲ್ಲೆಯ ರೋಣ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಉದ್ದೇಶವನ್ನು ಪಂಚಮಸಾಲಿ ಸಮಾಜದ ಯುವಕರು ಹೊಂದಿದ್ದರು. ಇದನ್ನು ತಿಳಿದ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಉಮೇಶ ಚನ್ನು ಪಾಟೀಲ್ ಸೇರಿದಂತೆ ಅನೇಕರನ್ನು ಭೇಟಿಯಾಗಿ ಪ್ರತಿಭಟನೆ ಮಾಡದಂತೆ ಹೇಳಿದ್ದಾರೆ. ಅದಕ್ಕೆ ಅನುಗುಣವಾಗಿ ಪಂಚಮಸಾಲಿ ಯುವಕರು ಪ್ರತಿಭಟನೆ ವಿಚಾರ ಕೈಬಿಟ್ಟರು ಸಹಿತ ಒತ್ತಾಯ ಪೂರ್ವಕವಾಗಿ ನರೇಗಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.ಎಂದು ಆರೋಪಿಸಲಾಗುತ್ತಿದೆ
ಈ ಕುರಿತು ದೂರವಾಣಿ ಮೂಲಕ ಮಾತನಾಡಿದ ಉಮೇಶ ಚನ್ನು ಪಾಟೀಲ್. ಸಂವಿಧಾನ ರಕ್ಷಣೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಬೆಳಗಾವಿಯಲ್ಲಿ ನಮ್ಮ ಸಮುದಾಯದ ಮೇಲೆ ಲಾಠಿಚಾರ್ಜ್, ಇಂದು ರೋಣ ನಗರದಲ್ಲಿ ಸುಮ್ಮನೆ ಕುಳಿತ ಮುಖಂಡರನ್ನು ಒತ್ತಾಯ ಪೂರ್ವಕ ಬಂದನ. ಹೇಳುವದು ವೇದಾಂತ ತಿನ್ನೋದು ಬದನೇಕಾಯಿ ಎಂಬ ಗಾದೆ ನೆನಪಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಿವಕುಮಾರ ದಡ್ಡುರ, ಮಲ್ಲು ಸಂತೋಜಿ, ಕಿರಣ ಕಟ್ಟಿ, ಸಂತೋಷ ಅಕ್ಕಿ ಸೇರಿದಂತೆ ಅನೇಕರು ಇದ್ದರು.
ವರದಿ : ಚನ್ನು. ಎಸ್.