
ನಾಳೆ ಮೂರ್ತಿ ಪ್ರತಿಷ್ಠಾಪನೆ
ಕೊಪ್ಪಳ: ಸತ್ಯಮಿಥ್ಯ (ಜುಲೈ -03)
ಜಿಲ್ಲೆಯ ಕುಕನೂರು ನಗರದ ಮಹಾಮಾಯ ನಗರದ ನಿವಾಸಿಗಳು ನೂತನವಾಗಿ ನಿರ್ಮಿಸಿದ ಬನ್ನಿಕಟ್ಟೆ ಹಾಗೂ ನಾಗದೇವತೆ ಮೂರ್ತಿಯ ಪ್ರತಿಷ್ಠಾಪನೆಯ ನಾಳೆ ಬೆಳಗ್ಗೆ ನಾಲ್ಕರಿಂದ ಆರು ಗಂಟೆಯವರೆಗಿನ ಬ್ರಾಹ್ಮಿ ಮುಹೂರ್ತದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಯಲಬುರ್ಗಾದ ಧರಮುರುಡಿ ಹಿರೇಮಠದ ಷ. ಬ್ರ. 108 ಪರಮ ಪೂಜ್ಯ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದಾರೆ. ಕುಕುನೂರಿನ ಅನ್ನದಾನೀಶ್ವರ ಮಠದ ಪರಮ ಪೂಜ್ಯ ಶ್ರೀ. ಮ. ನಿ. ಪ್ರ. ಸ್ವ. ಮಹಾದೇವ ಮಹಾಸ್ವಾಮಿಗಳು ಉಪಸ್ಥಿತರಿರುವರು.
ಇಂದು ದ್ಯಾಂಪುರ ಕ್ರಾಸ್ ನಲ್ಲಿರುವ ಮಂಜುನಾಥ ದೇವಾಲಯದಿಂದ ಮಹಾಮಾಯ ನಗರದ ಬನ್ನಿ ಕಟ್ಟಿಯವರೆಗೆ ಡೊಳ್ಳು, ಭಜನೆ, ಸುಮಂಗಲೆಯರ ಕುಂಭದ ಮೆರವಣಿಗೆಯೊಂದಿಗೆ ನಾಗದೇವತೆ ಮೂರ್ತಿಯು ಸಾಗಿ ಬರಲಿದೆ. ಅಂದೇ ಪ್ರತಿಮೆಯ ವಸ್ತ್ರವಾಸ ಕೂಡ ನಡೆಯುವುದು. ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ ಅನ್ನ ಸಂತರ್ಪಣೆ ಕೂಡ ನಡೆಯುವುದು ಕುಕನೂರಿನ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಹಾಮಾಯಾನಗರದ ನಿವಾಸಿಗಳ ಪರವಾಗಿ ಬಸವರಾಜ ಉಪ್ಪಾರ ಕೋರಿಕೊಂಡಿದ್ದಾರೆ.
ವರದಿ :ಚೆನ್ನಯ್ಯ ಹಿರೇಮಠ.