ಕೊಪ್ಪಳ : ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಫೋಟೋ ಮತ್ತು ವಿಡಿಯೋಗ್ರಾಫರ್ ಅಧ್ಯಕ್ಷ ಮೊಹಮ್ಮದ್ ರಫಿ ಹಿರಿಯಾಳ ಗೆ ಸನ್ಮಾನ.

ಕೊಪ್ಪಳ : ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಫೋಟೋ ಮತ್ತು ವಿಡಿಯೋಗ್ರಾಫರ್ ಅಧ್ಯಕ್ಷ ಮೊಹಮ್ಮದ್ ರಫಿ ಹಿರಿಯಾಳ ಗೆ ಸನ್ಮಾನ.
ಕುಕನೂರು: ಸತ್ಯಮಿಥ್ಯ (ಅಗಸ್ಟ್ -25)
ತಾಲೂಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಕ್ಷೇಮಭಿವೃದ್ಧಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ರಫಿ ಹಿರಿಯಾಳ ಇವರಿಗೆ ದಾವಣಗೆರೆ ಜಿಲ್ಲೆ ಫೋಟೋ ಮತ್ತು ವಿಡಿಯೋ ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಸನ್ಮಾನಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಫೋಟೋ ಮತ್ತು ವಿಡಿಯೋ ಗ್ರಾಫರ್ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ಜಾಧವ,ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ವಸ್ತ್ರದ, ಕುಕುನೂರು ತಾಲೂಕ ಕಾರ್ಯದರ್ಶಿ ಮಂಜುನಾಥ ತೋಟದ, ಕುಕನೂರು ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸದಸ್ಯರಾದ ಮರ್ತುಜಾ ಕಾತ್ರಾಳ, ಚಂದ್ರು ಬಂಗಿ, ಹನುಮಂತ ಅಕ್ಕಿ, ಜಾಕಿರ್ ನೂರ್ ಭಾಷಾ, ಇಸ್ಮಾಯಿಲ ನದಾಫ್, ಸಿದ್ದಪ್ಪ ಉಂಕಿ, ಸಿದ್ಧಾರೂಢ ಬಣ್ಣದ ಬಾವಿ, ಸುರೇಶ್ ಬಂಗಿ, ವಿರುಪಾಕ್ಷಿ ತಿಪ್ಪರಸನಾಳ, ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಕ್ಷೇಮಾಭಿವೃದ್ಧಿ ಸಂಘದ ಸರ್ವ ಪದಾಧಿಕಾರಿಗಳು ಇತರರು ಇದ್ದರು .
ವರದಿ : ಚನ್ನಯ್ಯ ಹಿರೇಮಠ,