
ರಾಜ್ಯದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ ಸಿದ್ದರಾಮಯ್ಯ ಬಜೆಟ್ – ಉಮೇಶ ಪಾಟೀಲ್.
ಗಜೇಂದ್ರಗಡ – ಸತ್ಯಮಿಥ್ಯ (ಮಾ -07)
ಬಹುನಿರೀಕ್ಷೆ ಇಟ್ಟುಕೊಂಡು ಕಾತುರದಿಂದ ಕಾಯುತ್ತಿದ್ದ ಕರ್ನಾಟಕದ ಜನತೆಯ ಆಶೆಗೆ ಸಿಎಂ ಸಿದ್ದರಾಮಯ್ಯ ತಣ್ಣೀರೇರಚಿದ್ದಾರೆ ಎಂದು ರೋಣ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಚನ್ನು ಪಾಟೀಲ್ ಕಿಡಿಕಾರಿದ್ದಾರೆ.
ಅವರು ಬಜೆಟ್ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ.ರಾಜ್ಯದ ಅಭಿವೃದ್ದಿಯ ದೂರದೃಷ್ಟಿಯಿಲ್ಲದೇ ಸಿದ್ದರಾಮಯ್ಯನವರು ಬಜೆಟ್ ಮಂಡಿಸಿದ್ದಾರೆ. ರಾಜ್ಯದ ರೈತರಿಗೆ ಯಾವುದೇ ವಿಶೇಷ ಯೋಜನೆಗಳಿಲ್ಲ, ಹೊಸ ಉದ್ಯಮ ಸ್ಥಾಪಿಸಲು ಯುವಕರಿಗೆ ಯಾವುದೇ ಯೋಜನೆಗಳಿಲ್ಲ,ಸರಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಹಾಗೂ ರಾಜ್ಯದ ಪ್ರವಾಸೋದ್ಯಮಕ್ಕೆ ಯಾವುದೇ ಪೂರಕ ಯೋಜನೆಗಳು ಈ ಬಜೆಟನಲ್ಲಿ ಇಲ್ಲವಾಗಿವೆ,ಅನ್ಯ ರಾಜ್ಯಗಳತ್ತ ದುಡಿಯಲು ಗುಳೆ ಹೋಗುವ ಜನರನ್ನು ತಡೆಯಲು ಯಾವುದೇ ಕಾರ್ಯಕ್ರಮಗಳಿಲ್ಲ ಈಗಾಗಿ ಸಿದ್ದರಾಮಯ್ಯ ನವರ ಬಜೆಟ್ ಜನವಿರೋಧಿ ಬಜೆಟ್ ಆಗಿದೆ ಎಂದಿದ್ದಾರೆ.
ವರದಿ : ಸುರೇಶ ಬಂಡಾರಿ.