ಟ್ರೆಂಡಿಂಗ್ ಸುದ್ದಿಗಳು

ಅ ಭಾ ವೀ ಲಿಂಗಾಯತ ಮಹಾಸಭಾ ಯುವ ಘಟಕದ ಅಧ್ಯಕ್ಷರಾಗಿ ಶಿವು ಶಶಿಮಠ ಮಹಿಳಾ ಘಟಕಕ್ಕೆ ಗೀತಾ ವಾಲಿ ಆಯ್ಕೆ.

Share News

ಅ ಭಾ ವೀ ಲಿಂಗಾಯತ ಮಹಾಸಭಾ ಯುವ ಘಟಕದ ಅಧ್ಯಕ್ಷರಾಗಿ ಶಿವು ಶಶಿಮಠ ಮಹಿಳಾ ಘಟಕಕ್ಕೆ ಗೀತಾ ವಾಲಿ ಆಯ್ಕೆ.

ಗಜೇಂದ್ರಗಡ:ಸತ್ಯಮಿಥ್ಯ (ಜೂ-23).

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗಜೇಂದ್ರಗಡ ತಾಲೂಕು ಯುವ ಘಟಕಕ್ಕೆ ಶಿವಕುಮಾರ ಶಶಿಮಠ ಹಾಗೂ ಮಹಿಳಾ ಘಟಕಕ್ಕೆ ಗೀತಾ ಶಶಿಧರ ವಾಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಮೈಸೂರುಮಠದಲ್ಲಿ ಸೋಮವಾರ ಜರುಗಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗಜೇಂದ್ರಗಡ ತಾಲೂಕು ಘಟಕದಿಂದ ಜರುಗಿದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಯುವ ಘಟಕದ ನೂತನ ಅಧ್ಯಕ್ಷ ಶಿವಕುಮಾರ ಶಶಿಮಠ ಮಾತನಾಡಿ, ತಾಲೂಕಿನಲ್ಲಿ ಯುವಕರನ್ನು ಒಗ್ಗೂಡಿಸಿ ಸಮಾಜ ಕಟ್ಟುವ ಕೆಲಸ ಮಾಡುತ್ತೇನೆ ಹಿರಿಯರ ಸಹಕಾರದಿಂದ ಮುಂದಿನ ದಿನದಲ್ಲಿ ಸದಸ್ಯತ್ವ ನೋಮದಣಿ ಅಭಿಯಾನ ಮಾಡುತ್ತೇವೆ.

ಸಮುದಾಯದ ಯುವಕರು ಹೆಚಿನ ಸಹಕಾರ ನೀಡಬೇಕು. ಸಮಾಜವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು ಎಂದರು.

ನೂತನ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ವಾಲಿ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಜಾಲಿಹಾಳ, ತಾಲೂಕು ಘಟಕದ ಅಧ್ಯಕ್ಷ ಪ್ರಭು ಚವಡಿ, ಪ್ರ.ಕಾರ್ಯದರ್ಶೀ ಬಸವರಾಜ ಶೀಲವಂತರ ಮಾತನಾಡಿದರು.

ಈ ವೇಳೆ ಸಲಹಾ ಸಮಿತಿ ಸದಸ್ಯರಾದ ಡಾ.ಬಿ.ವಿ.ಕಂಬಳ್ಯಾಳ, ಟಿ.ಎಸ್.ರಾಜೂರ, ಬಿ.ಎಂ.ಸಜ್ಜನರ, ಗುರುಸಿದ್ದಯ್ಯ ಸೂಗಿರಯ್ಯನಮಠ, ಮಂಜುಳಾ ರೇವಡಿ, ಯುವ ಘಟಕದ ನಿರ್ದೇಶಕ ಸಿದ್ದು ಗೊಂಗಡಶೆಟ್ಟಿಮಠ, ಬಸವರಾಜ ಪುರ್ತಗೇರಿ, ಶರಣಪ್ಪ ರೇವಡಿ, ಬಸವರಾಜ ಚನ್ನಿ, ಗುರುಲಿಂಗಯ್ಯ ಹಿರೇಮಠ, ಅವಿನಾಶ ಕೊಟಗಿ, ರಾಜೇಂದ್ರ ಹಿರೇಮಠ, ಮುತ್ತಣ್ಣ ಮ್ಯಾಗೇರಿ, ಅಮರೇಶ ಮಾರನಬಸರಿ, ಶಿವಕುಮಾರ ಅರಳಿ, ಜಗದೀಶ ಹಿರೇಮಠ, ಪ್ರಭುಲಿಂಗಯಯ್ ಹಿರೇಮಠ, ರುದ್ರೇಶ ಕೆರಿ, ದರ್ಶನ ಡುಮ್ಮನವರ, ಭುವನೇಶ್ವರಿ ಅಂಗಡಿ, ಸುಕನ್ಯಾ ಹೊಗರಿ, ಅಕ್ಕಮ್ಮ ನೀರಲಗಿ, ಸುಮಾ ಲಕ್ಕುಂಡಿಮಠ, ರೇಖಾ ರಾಜೂರ, ನಿರ್ಮಲಾ ತಾಳಿಕೋಟಿ, ಜ್ಯೋತಿ ಸಕ್ರಿ, ಸುಮಂಗಲಾ ರೇವಡಿ, ಶಿವಲೀಲಾ ನಿಡಶೇಶಿ ಸೇರಿದಂತೆ ಇತರರು ಇದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!