ಪುರಾಣ ಆಲಿಸುವುದರಿಂದ ಮನಶುದ್ಧಿ, ಪುಣ್ಯ ಪ್ರಾಪ್ತಿ:ಮಂಜುನಾಥ ಶಾಸ್ತ್ರೀಜಿ.
ನರೇಗಲ್ಲ: ಸತ್ಯಮಿಥ್ಯ (ಸೆ.೨೩).
ಪುರಾಣ ಪ್ರವಚನ, ಪುಣ್ಯ ಪುರುಷರ ಮಹಿಮೆಗಳನ್ನು ಆಲಿಸುವುದರಿಂದ ಪ್ರತಿಯೊಬ್ಬರ ಮನಸ್ಸು ಪರಿಶುದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಬ್ಬಿಗೇರಿಯ ಮಂಜುನಾಥ ಶಾಸ್ತ್ರೀಗಳು ಶಿವಪೂಜಿ ನುಡಿದರು.
ಅವರು ಸಮೀಪದ ಜಕ್ಕಲಿ ಗ್ರಾಮದ ಹಾಲಕೆರೆ ಅನ್ನದಾನೇಶ್ವರ ಶ್ರೀಮಠದಲ್ಲಿ ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಅಂಗವಾಗಿ ೨೧ ದಿನಗಳವರೆಗೆ ನಡೆಯುವ ಪರಮಪೂಜ್ಯ ಒಳ ಬಳ್ಳಾರಿಯ ಚನ್ನಬಸವ ತಾತಾನವರ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪುರಾಣ ಪುಸ್ತಕಕ್ಕೆ ಪೂಜೆ ಸಲ್ಲಿಸಿ ಹೇಳಿದರು.
ಪ್ರತಿಯೊಬ್ಬ ಮನುಷ್ಯರು ಸಂಸಾರಿಕ ಜೀವನದಲ್ಲಿ ಸಿಲುಕಿ ತೊಳಲಾಡುತ್ತಾರೆ. ಸಂಸಾರ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಇಂತಹ ಬೇಸರವನ್ನು ದೂರ ಮಾಡಿ ಶಾಂತಿ, ಸಹನೆ, ತಾಳ್ಮೆಗಳು ಮೂಡಬೇಕಾದರೆ ಮಹಾತ್ಮರ, ದಾರ್ಶನಿಕರ ಕಥೆ, ಪುರಾಣ ಪ್ರವಚನ ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಚನ್ನಬಸವ ತಾತಾನವರು ಈ ನಾಡು ಕಂಡ ಅಪರೂಪದ ಮಹಾ ಮಹಿಮರಾಗಿದ್ದಾರೆ. ಇಂತಹ ಚರಿತ್ರೆಯುಳ್ಳ ಶ್ರೇಷ್ಠ ಮಹಿಮರ ಪುರಾಣವನ್ನು ಸಕಲ ಸದ್ಭಕ್ತರು ಪ್ರತಿದಿನ ಆಲಿಸುವುದರ ಮೂಲಕ ತಮ್ಮ ತನು, ಮನಗಳನ್ನು ಪರಿಶುದ್ಧಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಪುರಾಣ ಪ್ರವಚನವು ನಿತ್ಯ ಸಂಜೆ ೭-೩೦ಕ್ಕೆ ಆರಂಭವಾಗಲಿದ್ದು ತಾವೆಲ್ಲರೂ ಶ್ರೀಮಠಕ್ಕೆ ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದರು. ಪುರಾಣದ ಮೊದಲ ಅಧ್ಯಾಯವನ್ನು ಶಾಸ್ತ್ರೀಜಿಯವರು ವಾಚನ ಮಾಡುವುದರ ಮೂಲಕ ಶನಿವಾರ ಪ್ರಾರಂಭಿಸಿದರು. ಹಾಲಕೆರೆಯ ದ್ಯಾಮಣ್ಣ ಮಾಸ್ತರ ಬಡಿಗೇರ ಹಾರ್ಮೋನಿಯಂ ಸಂಗೀತದೊಂದಿಗೆ ನಿಡಗುಂದಿಯ ಈರಣ್ಣ ಕಮ್ಮಾರ ತಬಲಾ ಸಾಥ್ ನೀಡಿದರು.
ಈ ವೇಳೆ ಹಿರಿಯರಾದ ಶೇಖಣ್ಣವರ ಮೇಟಿ, ಈಶ್ವರಪ್ಪ ಇಟಗಿ, ವೀರಯ್ಯ ಹಿರೇಮಠ, ಉಮೇಶ ಕೊಪ್ಪದ, ಶಿವನಾಗಪ್ಪ ದೊಡ್ಡಮೇಟಿ, ಸುಭಾಸ ಕಡಗದ, ಸಂದೇಶ ದೊಡ್ಡಮೇಟಿ, ಶರಣಪ್ಪ ಕುರುಡಗಿ, ಪುಂಡಪ್ಪ ಮಡಿವಾಳರ, ಚನ್ನಬಸಪ್ಪ ಸೂಡಿ, ಅಂದಾನಗೌಡ ಪಾಟೀಲ, ಶಿವಪ್ಪ ತಿಪರಡ್ಡಿ, ಉಮೇಶ ಮೇಟಿ, ಆದಾಮಸಾಬ ಬಾಲೇಸಾಬನವರ, ದ್ಯಾಮಣ್ಣ ಜಂಗಣ್ಣವರ ಸೇರಿದಂತೆ ಇನ್ನಿತರ ಸದ್ಭಕ್ತರು ಪಾಲ್ಗೊಂಡಿದ್ದರು. ಪ್ರಕಾಶ ವಾಲಿ ಸ್ವಾಗತಿಸಿ-ನಿರೂಪಿಸಿದರು.
ವರದಿ: ಎಂ.ಸಂಗಮೇಶ