ಕ್ರೀಡೆ ಪ್ರತಿಯೊಬ್ಬರ ಬಾಳಿನಲ್ಲಿ ನಂದಾದೀಪವಿದ್ದಂತೆ ಪ್ರತಿಯೊಬ್ಬರು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು:-ಅಶೋಕ್ ಗೌಡ್ರು
ಕ್ರೀಡೆ ಪ್ರತಿಯೊಬ್ಬರ ಬಾಳಿನಲ್ಲಿ ನಂದಾದೀಪವಿದ್ದಂತೆ ಪ್ರತಿಯೊಬ್ಬರು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು:-ಅಶೋಕ್ ಗೌಡ್ರು
ಕುಕನೂರು: ಸತ್ಯಮಿಥ್ಯ (ಆಗಸ್ಟ್ -02)
ಕ್ರೀಡೆ ಪ್ರತಿಯೊಬ್ಬರ ಬಾಳಿನಲ್ಲಿ ನಂದಾದೀಪವಿದ್ದಂತೆ ಪ್ರತಿಯೊಬ್ಬರು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಸದೃಢ ದೇಹವನ್ನು ಬೆಳೆಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಗೌಡ್ರು ಹೇಳಿದರು.
ಅವರು ಶುಕ್ರವಾರ ತಾಲೂಕಿನ ಲಕ್ಮಾಪುರ್ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಲಯಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದವರು ಇಂದಿನ ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವನೆ ಹೊಂದುವದು ಅವಶ್ಯಕವಾಗಿದೆ ಆದರೆ ಆಹಾರ ಪದ್ಧತಿ ವ್ಯತ್ಯಾಸಗಳಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಕ್ಷೀಣಿಸುತ್ತಿದೆ ಈ ಕಾರಣದಿಂದ ಇಂದಿನ ಯುವ ಜನತೆಯಲ್ಲಿ ಮನೋರೋಗಗಳು ಹೆಚ್ಚಾಗುತ್ತಿವೆ ಇವುಗಳನ್ನು ಹೋಗಲಾಡಿಸಬೇಕಾದರೆ ಪ್ರತಿಯೊಬ್ಬರು ತಮ್ಮ ಚೌಕಟ್ಟಿನಿಂದ ಹೊರಗೆ ಬಂದು ಕ್ರೀಡಾಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕ ಕ್ರೀಡಾಧಿಕಾರಿ ವೀರಭದ್ರಪ್ಪ ಬಿ ಆರ್ ಸಿ ಅಧಿಕಾರಿ ವೀರಣ್ಣ ಶರಣಪ್ಪ ರೇವಣಕಿ ಸುರೇಶ್ ಮಾದ್ನೂರ್ ಬಸವರಾಜ್ ಅಂಗಡಿ ತಾಲೂಕ ನೌಕರ ಸಂಘದ ಅಧ್ಯಕ್ಷ ಮಹೇಶ್ ಸಾಬರದ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್ ತಳವಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಪಿಡಿಒ ರಮೇಶ್ ತಿಮ್ಮ ರೆಡ್ಡಿ, ಶಾಲಾ ಮುಖ್ಯ ಶಿಕ್ಷಕ ಅಶೋಕ್ ಮಾದ್ನೂರ್, ನಿವೃತ ಯೋಧ ಏನ್ ಎಂ ಬಸವರಾಜ್, ದೈಹಿಕ ಶಿಕ್ಷಕ ಉಮೇಶ್ ಕಂಬಳಿ, ಶಿಕ್ಷಕ ಶಂಕ್ರಪ್ಪ ಗುಡಿಗೇರಿ, ನಿರೂಪಿಸಿದರು, ಶಿಕ್ಷಕ ವಿಜಯ್ ಕುಮಾರ್ ವಂದಿಸಿದರು
ವರದಿ :ಚೆನ್ನಯ್ಯ ಹಿರೇಮಠ.