
ನಗರಸಭೆ: ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ ಕಮಲ ಪಡೆಗೆ ಭಾರಿ ಮುಖಭಂಗ.
ಗದಗ :ಸತ್ಯಮಿಥ್ಯ ( ಫೆ -28).
ಗದಗ ಬೆಟಗೇರಿ ಅವಳಿ ನಗರದ ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ಕಳೆದ 7 ತಿಂಗಳಿಂದ ಬಹಳಷ್ಟು ಕುತೂಹಲ ಕೆರಳಿಸಿತ್ತು.
ಬಾರಿ ಕೋಲಾಹಲದ ಮದ್ಯ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಕಾನೂನಾತ್ಮಕವಾಗಿ ಗೆದ್ದಿದ್ದರು. ಇಂದು ಚುನಾವಣೆಯಲ್ಲಿ ಗೆಲವು ಸಾಧಿಸುವಲ್ಲಿ ವಿಫಲವಾಗಿವಾಗಿ ಭಾರಿ ಮುಖಭಂಗ ಅನುಭವಿಸಿದಂತಾಗಿದೆ
ನಕಲಿ ಠರಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮೂವರು ಸದಸ್ಯರಾದ ಉಷಾ ದಾಸರ ಅನಿಲ್ ಅಬ್ಬಿಗೇರಿ ಮುತ್ತು ಮುಶಿಗೇರಿ ಅಭ್ಯರ್ಥಿಗಳು ನಗರ ಸಭೆಯ ಸದಸ್ಯತ್ವದ ಅನರ್ಹತೆಗೆ ಹಾವು ಏಣಿ ಆಟಗಳು ನಡೆದು ಕೊನೆಗೆ ಕಾನೂನಾತ್ಮಕವಾಗಿ ಹೋರಾಡಿದರೂ ಸಹ ಕಾಂಗ್ರೆಸ್ ಪಕ್ಷವು ನಗರ ಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದು ನಗೆ ಬೀರಿದೆ.
ಬೆಳಗ್ಗೆಯಿಂದಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ನಗರಸಭೆಗೆ ಬಂದು ತಮ್ಮ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆ ಹಾಗೂ ಭಿನ್ನಾಭಿಪ್ರಾಯಗಳ ಮೂಲಕ ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೋರಾಟವನ್ನು ಮಾಡಿದರು ಸಹ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನಿರಾಸೆಯನ್ನು ಉಂಟು ಮಾಡಿದೆ.
ನಗರಸಭೆ ಇಂದು ಗದ್ದಲ ಗಲಾಟೆಗಳ ಕೇಂದ್ರಬಿಂದುವಾಗಿ ಬದಲಾಗಿತ್ತು. ಬಿಜೆಪಿಯವರ ಪ್ರಕಾರ, ಕೋರ್ಟ್ ನಿಂದ ಚುನಾವಣೆ ಮುಂದೂಡಿಕೆಯಾಗಿದ್ರೂ, ಕಾನೂನುಬಾಹಿರವಾಗಿ ಚುನಾವಣೆ ನಡೆಸಲಾಗಿದೆ ಎಂದು ಸಾಕಷ್ಟು ಗದ್ದಲ ಗಲಾಟೆ ನಡೆಸಿದ ಘಟನೆಯೂ ನಡೆಯಿತು.ಇದೇ ವೇಳೆ ಅನರ್ಹಗೊಂಡ ಬಿಜೆಪಿಯ ಮೂವರು ಸದಸ್ಯರನ್ನ ನಗರಸಭೆ ಒಳಗಡೆ ಬಿಡದ ಕಾರಣ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ಏರ್ಪಟ್ಟಿತು.
ಇನ್ನೇನು ಚುನಾವಣೆ ಪ್ರಕ್ರಿಯೆ ಆರಂಭವಾಯಿತು ಅನ್ನುವಾಗಲೇ, ಚುನಾವಣೆ ಮುಂದೂಡಲಾಗಿದೆ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪರವಾಗಿ ಜೈಕಾರ ಕೂಗಿ, ಸಂಭ್ರಮಕ್ಕೆ ಮುಂದಾದರು. ಇನ್ನೇನು ಚುನಾವಣೆ ಅರ್ಧಕ್ಕೆ ನಿಲ್ಲಿಸಿ ಎಲ್ಲರೂ ಹೊರಗಡೆ ಬರುತ್ತಾರೆ ಎಂದು ನಗರಸಭೆ ಹೊರಗಡೆ ಕಾಯುತ್ತಿದ್ದ ಬಿಜೆಪಿ ಪಕ್ಷದವರಿಗೆ ಕೊನೆಗೆ ನಿರಾಸೆಯ ಫಲಿತಾಂಶ ಕಾದಿತ್ತು.
ಈ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷವು ಇಂದು ನಡೆದ ನಗರಸಭೆ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಮಾಡಿದೆ.
ಬಿಜೆಪಿಯ ಮೂರು ಸದಸ್ಯರನ್ನು ಕಾನೂನು ಬಾಹಿರವಾಗಿ ಸದಸ್ಯತ್ವವನ್ನು ಅನರ್ಹಗೊಳಿಸಿದ್ದಾರೆ ಮಾನ್ಯ ಹೈ ಕೋರ್ಟ್ ಇಂದು ಆದೇಶವನ್ನು ಕೊಟ್ಟಿದ್ದು ಅವರಿಗೆ ಸದಸ್ಯತ್ವವನ್ನು ಕೊಡಬೇಕು ಹಾಗೂ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಕೊಡಬೇಕೆಂದು ಆದೇಶ ನೀಡಿದ್ದರು ಚುನಾವಣಾ ಅಧಿಕಾರಿಯೂ ಈ ಕುರಿತಂತೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿದೆ ಸಚಿವ ಎಚ್ ಕೆ ಪಾಟೀಲ್ ಅವರು ನಿರ್ದೇಶನದಂತೆ ಚುನಾವಣೆಯನ್ನು ನಡೆಸಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಹೇಳಿದರು.
ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಚುನಾವಣಾ ಅಧಿಕಾರಿಗಳು ಚುನಾವಣೆಯನ್ನು ನಡೆಸಿದ್ದಾರೆ ಇದು ನ್ಯಾಯಾಂಗದ ಉಲ್ಲಂಘನೆಯಾಗಿದೆ ಬಿಜೆಪಿಯ ಮೂರು ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ನಾವು ಮೇಲ್ಮನೆಮಿಯನ್ನು ಸಲ್ಲಿಸುತ್ತೇವೆ ಇಂದಿನ ಜಯ ತಾತ್ಕಾಲಿಕವಾಗಿದ್ದು ಇದು ಕಾನೂನು ಬಹಿರವಾಗಿದೆ ಇದಕ್ಕೆ ನಾವು ಧಿಕ್ಕಾರವನ್ನು ಹಾಕುತ್ತೇವೆ ಎಂದು ಹೇಳಿದರು.
ನಂತರ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್.ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕಾನೂನಾತ್ಮಕವಾಗಿ ಹಾಗೂ ಚುನಾವಣೆಯಲ್ಲಿ ಯಾವುದೇ ದೋಷವಿಲ್ಲ : ಸಚಿವ ಎಚ್ ಕೆ ಪಾಟೀಲ್. ನಗರ ಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕಾನೂನಾತ್ಮಕವಾಗಿ ನಡೆದಿದ್ದು ಚುನಾವಣೆಯಲ್ಲಿ ಯಾವುದೇ ದೋಷವಿಲ್ಲ.
ನೂತನವಾಗಿ ಆಯ್ಕೆಯಾದ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ನಗರ ಸಭೆಗೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ನಗರಸಭೆಯಲ್ಲಿ ಹಲವಾರು ಕೆಲಸಗಳು ಮಾಡಬೇಕಾಗಿತ್ತು ನಗರಸಭೆ ಆಡಳಿತದಲ್ಲಿ ಬಹುದೊಡ್ಡ ಬದಲಾವಣೆಯನ್ನು ತರಬೇಕಾಗಿದ್ದು ಅದರ ಗುರುತ್ತರವಾದ ಜವಾಬ್ದಾರಿ ನೂತನ ಅಧ್ಯಕ್ಷ ಕೃಷ್ಣಾಪರಾಪುರ್ ಹಾಗೂ ನೂತನ ಉಪಾಧ್ಯಕ್ಷ ಶಕುಂತಲಾ ಅಕ್ಕಿ ಅವರ ಮೇಲೆ ಇದೆ.
ನಗರಸಭೆಯ ಬಿಜೆಪಿಯ ಮೂರು ಸದಸ್ಯರ ಅಮಾನತ್ತು ಮಾಡುವಲ್ಲಿ ತಮ್ಮ ಪಾತ್ರ ಏನೂ ಇಲ್ಲವೆಂದು ಹಾಗೂ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸದಸ್ಯತ್ವದಿಂದ ಅಮಾನತ್ತು ಗೊಂಡಿದ್ದಾರೆ ಎಂದು ಹೇಳಿದರು.
ವರದಿ : ಮುತ್ತು ಗೋಸಲ್.