ಜಿಲ್ಲಾ ಸುದ್ದಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ – ಪತ್ರಿಕಾಗೋಷ್ಠಿ.

Share News

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ – ಪತ್ರಿಕಾಗೋಷ್ಠಿ.

ಗಜೇಂದ್ರಗಡ: ಸತ್ಯಮಿತ್ಯ (ಎ -28).

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ಪದಾಧಿಕಾರಿಗಳ ಚುನಾವಣೆಯ ಪ್ರಯುಕ್ತ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಗದಗ ಜಿಲ್ಲೆಯ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶರಣಬಸಪ್ಪ ಗುಡಿಮನಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೇ 24ರಂದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ಘಟಕಕ್ಕೆ ಚುನಾವಣೆ ನಡೆಸಲಾಗುತ್ತದೆ. ಏಪ್ರಿಲ್ 23ರಂದು ಪ್ರಕಟಿಸಲಾದ ಮತದಾರರ ಅಂತಿಮ ಪಟ್ಟಿಯ ಪ್ರಕಾರ ಒಟ್ಟು 745 ಮತದಾರರನ್ನು ಒಳಗೊಂಡಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಹಾಗೂ ತಾಲೂಕಿನ ಸಮಾಜ ಬಾಂದವರು ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣಾ ಅಧಿಕಾರಿಗಳಿಗೆ ನೀಡಿದರೆ ಅದಕ್ಕೂ ಮನ್ನಣೆ ನೀಡಲಾಗುತ್ತದೆ ಎಂದರು.

ಚುನಾವಣೆ ಪ್ರಕ್ರಿಯೇಗಾಗಿ ಗಜೇಂದ್ರಗಡದ ವಾಣಿಪೇಟೆಯಲ್ಲಿರುವ ಗವಿಮಠದಲ್ಲಿ ಕಚೇರಿಯನ್ನು ತೆರೆಯಲಾಗಿದೆ ಎಂದರು.

ಗಜೇಂದ್ರಗಡ ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಪ್ರಕ್ರಿಯೇ ಈ ಕೆಳಗಿನಂತೆ ನಡೆಸಲಾಗುವದು.

1 ಸ್ಥಾನ ಅಧ್ಯಕ್ಷರು

3 ಸ್ಥಾನ ಉಪಾಧ್ಯಕ್ಷರು

3 ಸ್ಥಾನ ಪ್ರಧಾನ ಕಾರ್ಯದರ್ಶಿಗಳು

1 ಕೋಶಾಧ್ಯಕ್ಷರು

13 ಪದಾಧಿಕಾರಿಗಳು

ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಒಟ್ಟು ಮತದಾರರು : 745 ಜನ.

ಚುನಾವಣೆಯಲ್ಲಿ ಸ್ಪರ್ಧೆಸಲು ಮಾನದಂಡ : ಮಹಾಸಭಾದ ಸಾಮಾನ್ಯ ಸದಸ್ಯರಾಗಿರಬೇಕು.

ಒಟ್ಟು ಸ್ಥಾನಗಳು : 21 ಸ್ಥಾನ ಅದರಲ್ಲಿ 14 ಪುರುಷ 7 ಮಹಿಳೆಯರಿಗೆ ಮೀಸಲು.

ನಾಮಪತ್ರ ಸಲ್ಲಿಸಲು : ಏಪ್ರಿಲ್ 29 ಬುಧವಾರ ಬೆಳಿಗ್ಗೆ ಯಿಂದ ಪ್ರಾರಂಭವಾಗಿ ಮೇ 6 ಬುಧವಾರದ ವರೆಗೆ ನಾಮಪತ್ರ ಸಲ್ಲಿಸಬಹುದು.

ನಾಮಪತ್ರ ಪರಿಶೀಲನೆ : ಮೇ 7 ಗುರುವಾರ.

ನಾಮಪತ್ರ ಹಿಂಪಡೆಯಲು : ಮೇ 10 ರವಿವಾರ ಮದ್ಯಾಹ್ನ 3 ಗಂಟೆಯವರೆಗೆ.

ಚುನಾವಣೆ ನಡೆಯುವ ದಿನ :ಮೇ 24 ರವಿವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆಯುವದು.

ಚುನಾವಣೆ ಫಲಿತಾಂಶ : ಮೇ 24 ರ ಸಾಯಂಕಾಲ ಮತ ಎಣಿಕೆ ಕಾರ್ಯಕ್ರಮ ನಡೆಯುತ್ತದೆ.

ನಾಮಪತ್ರ ಸಲ್ಲಿಕೆಗೆ : ಗವಿಮಠದಲ್ಲಿನ ಕಛೇರಿಗೆ ತೆರಳಬೇಕು.

ಚುನಾವಣೆ ನಡೆಯುವ ಸ್ಥಳ : ಮೈಸೂರು ಮಠದ ಆವರಣದಲ್ಲಿರುವ ಶಾಲಾ ಕೊಠಡಿಯಲ್ಲಿ ಜರುಗುವದು.

ಚುನಾವಣೆ ಅಧಿಕಾರಿಗಳು : ಬಸವರಾಜ ವೀರಭದ್ರಪ್ಪ ಮುನವಳ್ಳಿಯವರು ಕೆಲಸ ನಿರ್ವಹಿಸಲಿದ್ದಾರೆ.

ಚುನಾವಣಾ ಸಿಬ್ಬಂದಿಗಳಾಗಿ : ಸಂಗನಬಸಪ್ಪ. ಎಸ್. ವಾಲಿ,ಮಹಾಂತಪ್ಪ ವೀರಪ್ಪ ಅರಳಿ, ಕಳಕಪ್ಪ ಸಂಗಟಿ, ಭೀಮಪ್ಪ ಗುರಿಕಾರ ಕೆಲಸ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಗರಾಜೇಂದ್ರ ಬಡ್ನಿ, ಖಜಾಂಚಿ ಚನ್ನವೀರಪ್ಪ ಹುಣಸಿಕಟ್ಟಿ, ಉಮೇಶ ಹೂಗಾರ, ಬಿ ವಿ ಮುನವಳ್ಳಿ,ಎಸ್ ಎಸ್ ವಾಲಿ,ಮಹಾಂತಪ್ಪ ಅರಳಿ, ಕಳಕಪ್ಪ ಸಂಗಟಿ, ಭೀಮಪ್ಪ ಗುರಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!