ಜಿಲ್ಲಾ ಸುದ್ದಿ

ಕಾಡಸಿದ್ದೇಶ್ವರ ಸ್ವಾಮೀಜಿ ಗದಗ ನಗರಕ್ಕೆ ಪ್ರವೇಶ ವಿರೋಧಿಸಿ 23ರಂದು ಸಿಪಿಎಂ ಪ್ರತಿಭಟನೆ.

Share News

ಕಾಡಸಿದ್ದೇಶ್ವರ ಸ್ವಾಮೀಜಿ ಗದಗ ನಗರಕ್ಕೆ ಪ್ರವೇಶ ವಿರೋಧಿಸಿ 23ರಂದು ಸಿಪಿಎಂ ಪ್ರತಿಭಟನೆ.

Oplus_131072

ಗದಗ : ಸತ್ಯಮಿಥ್ಯ (ಮೇ – 22)

ಕೋಮುದ್ವೇಷ ಬಿತ್ತುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಗದಗ ನಗರಕ್ಕೆ ಪ್ರವೇಶ ವಿರೋಧಿಸಿ 23ರಂದು ಸಿಪಿಎಂ ಪ್ರತಿಭಟನೆ

ಮೇ 23 ರಂದು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಸಿಪಿಐಎಂ ಜಿಲ್ಲಾ ಸಂಘಟನ ಸಮಿತಿಯಿಂದ ನಾಳೆ ಗದಗ ನಗರದಲ್ಲಿ “ಆರ್ ಎಸ್ ಎಸ್ ಚಿಂತಕ ವಲಯದಲ್ಲಿರುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನಿರಂತರವಾಗಿ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಕನ್ಹೆರಿ ಸ್ವಾಮೀಜಿ ಹೋದೆಡೆಯೆಲ್ಲಾ ಕೋಮುದ್ವೇಷದ ಮಾತುಗಳು ಹರಡುತ್ತಿವೆ. ಈಗ ಸೌಹಾರ್ದ ನೆಲೆಯಾದ ಗದಗನಲ್ಲಿಯೂ ಹಿಂದೂ ಸಮಾವೇಶದ ಹೆಸರಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ . ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಕನ್ಹೇರಿ ಪ್ರವೇಶ ನಿರಾಕರಿಸಿದ್ದರು, ಬಸವಣ್ಣನವರ ವಚನಗಳನ್ನು ಒಪ್ಪಿಕೊಳ್ಳುವರು ಇದನ್ನು ಪ್ರತಿರೋಧಿಸಬೇಕು. ಜಿಲ್ಲೆಗೆ ಬರದಂತೆ ನೋಡಿಕೊಳ್ಳಬೇಕು. ಗದಗದಲ್ಲಿ ನಾವು ಇಂತಹ ಕೋಮುದ್ವೇಷ ಬಿತ್ತುವವರ ವಿರುದ್ದ ಪ್ರತಿಭಟನೆ ಕೈಗೊಳ್ಳಬೇಕು. ಇಂತಹ ಕೋಮುವಾದಿಗಳಿಗೆ ಜಿಲ್ಲೆಯ ಪ್ರವೇಶ ನಿರಾಕರಿಸಬೇಕು” ಎಂದು ಒತ್ತಾಯಿಸಿ ನಾಳೆ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಸಿಪಿಐಎಂ ಪಕ್ಷದಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಆದ್ದರಿಂದ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಮಾಡಲು  ಸಿಪಿಐಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲು ರಾಠೋಡ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!