ಭರದಿಂದ ಸಾಗುತ್ತಿದೆ ಮಹಾಮಾಯ ಜಾತ್ರಾ ಪೂರ್ವ ಸಿದ್ಧತೆ.
ಕೊಪ್ಪಳ:ಸತ್ಯಮಿಥ್ಯ(ಅ-09).
ಜಿಲ್ಲೆಯ ಕುಕನೂರು ಪಟ್ಟಣದ ಶ್ರೀ ಮಹಾಮಾಯ ದೇವಿಯ ರಥೋತ್ಸವ ಅಕ್ಟೋಬರ್ 11 ರಂದು ಸಾಯಂಕಾಲ ನಾಲ್ಕು ಗಂಟೆಗೆ ಜರಗುವುದು.ಅದರ ಪ್ರಯುಕ್ತ ಮಹಾಮಾಯ ದೇವಸ್ಥಾನ ಮತ್ತು ಸುತ್ತಮುತ್ತಲಿನ ಸ್ವಚ್ಛತೆಯನ್ನು ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಮತ್ತು ಸಿಬ್ಬಂದಿ ವರ್ಗದವರು ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸುತ್ತಿದ್ದು. ಶ್ರೀ ಮಹಾಮಾಯ ರಥೋತ್ಸವದ ತಯಾರಿಯನ್ನು ಗುದ್ನೇಶ್ವರ ಮಠದ ಸಕಲ ಸದ್ಭಕ್ತರು ನೆರವೇರಿಸುತ್ತಿದ್ದಾರೆ.
ಬಂದಂತಹ ಭಕ್ತಾದಿಗಳಿಗೆ ಯಾವುದೇ ರೀತಿಯಿಂದ ತೊಂದರೆಯಾಗಬಾರದು ಎಂದು ಸರ್ತಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆಯನ್ನು ಮತ್ತು ನೀರಿನ ವ್ಯವಸ್ಥೆಯನ್ನು, ಸ್ವಚ್ಛತೆ ವ್ಯವಸ್ಥೆಯನ್ನು ಪಂಚಾಯಿತಿ ಕಾರ್ಯನಿರ್ವಹಿಸುತ್ತಿದ್ದು. ಜಾತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ತೊಂದರೆಗಳಾಗದ ರೀತಿಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಬಿಗಿ ಬಂದೋಬಸ್ತ್ ನೆರವೇರಿರುತ್ತವೆ.
ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮವನ್ನು ದೇವಸ್ಥಾನದ ಪುರೋಹಿತರು, ಜೋಯಿಸರು, ಆಶ್ರಿತರು, ಗಣಪತ್ಯ ಮತ್ತು ಅರ್ಚಕರ ಮಂಡಳಿಯವರು ಹಾಗೂ ದೇವಸ್ಥಾನದ ಸೇವಾಕರಿ ಮಂಡಳಿಯವರು ನಿರ್ವಹಿಸುತ್ತಾರೆ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕುಕುನೂರು ಗ್ರಾಮದ ಸಮಸ್ತ ಸದ್ಭಕ್ತಾದಿಗಳು ಹಾಗೂ ಗ್ರಾಮದ ಗುರು ಹಿರಿಯರು ಶ್ರೀದೇವಿಯ ಜಾತ್ರಾ ಮಹೋತ್ಸವವನ್ನು ವ್ಯವಸ್ಥಿತವಾಗಿ ವಿಜೃಂಭಣೆಯಿಂದ ಸಂಪನ್ನಗೊಳಿಸಲು ಕಾರ್ಯನಿರ್ವಹಿಸುವವರು.
ಪರಸ್ಥಳದಿಂದ ಬರುವ ಭಕ್ತಾದಿಗಳಿಗೆ ಎಲ್ಲಾ ತರಹದ ಅನುಕೂಲತೆಗಳಾದ ಶುದ್ಧ ಕುಡಿಯುವ ನೀರು, ನವಮಿಯಂದು ಮಹಾಪ್ರಸಾದ ವ್ಯವಸ್ಥೆಯನ್ನು ಒದಗಿಸಲಾಗುವುದು. ಸಕಲ ಸದ್ಭಕ್ತರು ಸಹಕುಟುಂಬ ಪರಿವಾರ ಸಮೇತ ಬಂದು ಈ ಜಾತ್ರ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಮಹಾಮಾಯ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ ಎಂದು ಧರ್ಮಾಧಿಕಾರಿಗಳಾದ ಶ್ರೀ ವಲ್ಲಭರಾವ ರಂಗರಾಯಗೌಡ ದೇಸಾಯಿ ಸಿದ್ನೇಕೊಪ್ಪ, ಶ್ರೀ ಬಂಡೆರಾಯಗೌಡ ಗುರುರಾಯಗೌಡ ದೇಸಾಯಿ ಮಾಳೇಕೊಪ್ಪ ತಿಳಿಸಿದ್ದಾರೆ.
ದಿನಾಂಕ 11-10- 2024 ಶುಕ್ರವಾರ ನವಮಿಯಂದು ಶ್ರೀ ದೇವಿಯ ಮಹಾ ರಥೋತ್ಸವ ಹಾಗೂ ದಿನಾಂಕ 12-10-2024 ಶನಿವಾರ ದಶಮಿ ಯಂದು ವಿಜಯದಶಮಿ (ಬನ್ನಿ ಹಬ್ಬ) ಕಾರ್ಯಕ್ರಮಗಳು ನೆರವೇರುತ್ತವೆ.
ವರದಿ :ಚೆನ್ನಯ್ಯ ಹಿರೇಮಠ.