ಸ್ಥಳೀಯ ಸುದ್ದಿಗಳು

ವೀರಶೈವ ಲಿಂಗಾಯತ ಪ್ರತ್ಯೇಕಭಾವನೆಯಿಂದ ಸಮಾಜಕ್ಕೆ ಹಿನ್ನಡೆ:-ಡಾ.ಮಹಾದೇವ ಮಹಾಸ್ವಾಮಿಗಳು

Share News

ವೀರಶೈವ ಲಿಂಗಾಯತ ಪ್ರತ್ಯೇಕಭಾವನೆಯಿಂದ ಸಮಾಜಕ್ಕೆ ಹಿನ್ನಡೆ:-ಡಾ.ಮಹಾದೇವ ಮಹಾಸ್ವಾಮಿಗಳು

ಕುಕನೂರ : ಸತ್ಯಮಿಥ್ಯ (ಅ -09).

ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಮಹಾಸ್ವಾಮೀಜಿಯವರು ಸ್ಥಾಪನೆ ಮಾಡಿದಂತ ಅಖಿಲ ವೀರಶೈವ ಮಹಾಸಭಾದ ಧ್ಯೇಯೋದ್ದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಡಾ. ಮಹದೇವಯ್ಯ ಮಹಾಸ್ವಾಮಿಗಳು ತಿಳಿಸಿದರು.

ಕೊಪ್ಪಳ ಜಿಲ್ಲಾ ಕುಕನೂರು ಪಟ್ಟಣದ ಅನ್ನದಾನಿಶ್ವರ ಶಾಖಾಮದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮಹಾಸಭಾ ಕುಕನೂರು ತಾಲೂಕು ಘಟಕದ ಪದಗ್ರಹಣ ಸನ್ಮಾನ ಮತ್ತು ಪ್ರೀತಿಯ ಭೋಜನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳಕನ ಗೌಡ ಪಾಟೀಲ್ ಅಧ್ಯಕ್ಷರು ವೀರಶೈವ ಲಿಂಗಾಯತ ಮಹಾಸಭಾ ಕೊಪ್ಪಳ ಮಾತನಾಡಿ ವೀರಶೈವ ಮಹಾಸಭಾ ಶಂಕರಬಿದರೆ ಅವರ ಮಾರ್ಗದರ್ಶನದಲ್ಲಿ ಮಾಹಿತಿಗಳನ್ನ ಸಂಗ್ರಹಿಸುತ್ತಿದ್ದು ಪ್ರತಿ ಜಿಲ್ಲಾ ಮತ್ತು ತಾಲೂಕು ಹಳ್ಳಿಗಳಲ್ಲಿ ಸಂಚರಿಸಿ ಏನು ಮಾಡಬೇಕು ಎಂಬುದನ್ನು ಮಾತನಾಡುವುದಿಲ್ಲ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

ಅಂದಪ್ಪ ಜವಳಿ ಮತ್ತು ಬಸವನಗೌಡ ಮಾಲಿ ಪಾಟೀಲ್ ಮಾತನಾಡಿದರು.

ವೀರಣ್ಣ ಅಣ್ಣಿಗೇರಿ ನಿರ್ದೇಶಕರು ವೀರಶೈವ ಮಹಾಮಂಡಳಿ, ಕೊಪ್ಪಳ ರವರು ಮಾತನಾಡಿ ಪ್ರತಿಯೊಬ್ಬ ವೀರಶೈವರು ಮಹಾಸಭಾ ಸದಸ್ಯರಾಗಬೇಕಾದರೆ 250 ರೂಪಾಯಿಗಳನ್ನು ನೀಡಿ ಸದಸ್ಯತ್ವ ಪಡೆಯಬಹುದು. ಜಿಲ್ಲಾ ಸದಸ್ಯತ್ವ ಪಡೆಯಬೇಕಾದರೆ 1000 ರೂಪಾಯಿಗಳು, ರಾಜ್ಯ ಸಮಿತಿ ಸದಸ್ಯರಾಗಬೇಕಾದರೆ 2500 ರೂಪಾಯಿಗಳು, ಅಖಿಲ ಭಾರತ ಮಹಾಸಭೆ ಸದಸ್ಯರಾಗಬೇಕಾದರೆ 5000 ರೂಪಾಯಿಗಳನ್ನು ನೀಡಿ ಸದಸ್ಯತ್ವ ಪಡೆಯಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಮತ್ತು ಅಖಿಲ ಭಾರತ ವೀರಶೈವ ಗೌರವಾಧ್ಯಕ್ಷರನ್ನಾಗಿ ಡಾ. ಮಹದೇವ ಮಹಾಸ್ವಾಮಿಗಳು, ಕಳಕನಗೌಡ ಪಾಟೀಲ್ ಅಧ್ಯಕ್ಷರು ವೀರಶೈವ ಲಿಂಗಾಯತ ಮಹಾಸಭಾ ಕೊಪ್ಪಳ, ಉಮೇಶ್ ಎತ್ತಿನಮನಿ ನಿರ್ದೇಶಕರು ಕೊಪ್ಪಳ, ವೀರಣ್ಣ ಅಣ್ಣಿಗೇರಿ ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕರು ಕೊಪ್ಪಳ, ಎಂ ಎಸ್ ಹಿರೇಮಠ ನಿವೃತ್ತ ಉಪನ್ಯಾಸಕರು ನಿರ್ದೇಶಕರು ವೀರಶೈವ ಲಿಂಗಾಯತ ಮಂಡಳಿ ಕೊಪ್ಪಳ, ಬಸವನ ಗೌಡ ಪಾಟೀಲ್ ನಿಯೋಜಿತ ಅಧ್ಯಕ್ಷರು ತಾಲೂಕ ವೀರಶೈವ ಮಂಡಳಿ ಕುಕುನೂರು, ಕವಿತಾ ಶಿರೋಳ ನಿರ್ದೇಶಕರು ವೀರಶೈವ ಮಹಾಸಭಾ ಕೊಪ್ಪಳ, ರಾಮನಗೌಡ ಆರ್‌ಸಿಬಿಡಿ ತಾಲೂಕ ಪ್ರಧಾನ ಕಾರ್ಯದರ್ಶಿ ಕುಕುನೂರು ತಾಲೂಕು ಘಟಕ, ಅಂದಪ್ಪ ಜವಳಿ, ಬಸಪ್ಪ ದಿವಟರ್ ಉಪಾಧ್ಯಕ್ಷರು, ಯಲ್ಲಪ್ಪ ಗೌಡ್ರ್, ಜಿಎಸ್ ಕರಮುಡಿ, ಮಲ್ಲಿಕಾರ್ಜುನ ಕರಮುಡಿ, ಲಲಿತ ಸಿಳ್ಳಿನ, ಆರ್ ಪಿ ರಾಜೂರ, ಸಿಟಿ ಪಾಟೀಲ್, ಜೆ.ಜೆ .ಅಂಗಡಿ, ನೀಲನ್ ಗೌಡ ತಳಕಲ್, ಈರಣ್ಣ ಗೌಡ ಪೊ. ಪಾಟೀಲ್ ತಳಕಲ್, ಶರಣಪ್ಪ ಕೊಪ್ಪದ, ನಿಂಗಪ್ಪ ಕೊಪ್ಪದ, ಶಿವರುದ್ರಪ್ಪ ಜೋಳದ, ವಿಜಿ ಬಳಗೇರಿ, ಗದಿಗೆಪ್ಪ ಪವಾಡ ಶೆಟ್ಟರ್, ಇತರರು ಇದ್ದರು.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!