ಜಿಲ್ಲಾ ಸುದ್ದಿ

ಸಾಮಾಜಿಕ ಸುಧಾರಕರಾಗಿ ಡಾ. ಬಿ.ಆರ್. ಅಂಬೇಡ್ಕರ ಅವರ ಕೊಡುಗೆ ಅಪಾರ : ಆರ,ಜಿ ಕಲ್ಲೂರು.

Share News

ಸಾಮಾಜಿಕ ಸುಧಾರಕರಾಗಿ ಡಾ. ಬಿ.ಆರ್. ಅಂಬೇಡ್ಕರ ಅವರ ಕೊಡುಗೆ ಅಪಾರ : ಆರ,ಜಿ ಕಲ್ಲೂರು.

ಗದಗ:ಸತ್ಯಮಿಥ್ಯ (ಎ -15)

ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯಾಗಿ, ಸಾಮಾಜಿಕ ಸುಧಾರಕರಾಗಿ ಮತ್ತು ಅರ್ಥಶಾಸ್ತ್ರಜ್ಞರಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅಸ್ಪೃಶ್ಯತೆ ನಿರ್ಮೂಲನೆ, ದಲಿತರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿ, ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಖಾತರಿಪಡಿಸಿದರು ಎಂದು
ಗದಗ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇಯ ಜಯಂತ್ಯೋತ್ಸವ ಆಚರಣೆಯಲ್ಲಿ
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ,ಜಿ ಕಲ್ಲೂರು ವಕೀಲರು ಹೇಳಿದರು.

ನಂತರ ಮಾತನಾಡಿದ ಅವರು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಿ, ಅಸ್ಪೃಶ್ಯತೆ ನಿವಾರಣೆಗೆ (ಅನುಚ್ಛೇದ 17) ಶ್ರಮಿಸಿದರು. ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು ಎಂದು ಹೇಳಿದರು.

ಜಯಂತೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಮೋಹನ್ ಭಜಂತ್ರಿ ಅವರ ಮಾತನಾಡಿ ಬಾಬಾಸಾಹೇಬ್ ಎಂದೇ ಜನಪ್ರಿಯರಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯ ಇತಿಹಾಸದಲ್ಲಿ ಒಂದು ಸ್ಮರಣೀಯ ವ್ಯಕ್ತಿ. ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿಯಾಗಿರುವುದರಿಂದ ಹಿಡಿದು ದೀನದಲಿತ ಜಾತಿಗಳಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರೆಗೆ, ಭಾರತೀಯ ಸಮಾಜಕ್ಕೆ ಅವರ ಅಪಾರ ಕೊಡುಗೆಗಳನ್ನು ಪ್ರತಿ ವರ್ಷ ಏಪ್ರಿಲ್ 14 ರಂದು ಭಾರತದಲ್ಲಿ ಅಂಬೇಡ್ಕರ್ ಜಯಂತಿ ಎಂದು ಆಚರಿಸುವ ಮೂಲಕ ಗೌರವಿಸಲಾಗುತ್ತದೆ ಎಂದು ಹೇಳಿದರು.

ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಆರ್, ಜಿ,ಕಲ್ಲೂರು ಉಪಾಧ್ಯಕ್ಷರಾದ ಎಂ,ಎ ಸಂಗನಾಳ ಪ್ರಧಾನ ಕಾರ್ಯದರ್ಶಿ ಎಂ,ಎ ನಾಯ್ಕರ್ ಸಹ ಕಾರ್ಯದರ್ಶಿ ಸಿ,ಬಿ ಗೂಳಾರೆಡ್ಡಿ ಸಂಘದ ಖಜಾಂಚಿ ಶೈಲಜಾ ಬಸಯ್ಯ ಹಿರೇಮಠ ವಕೀಲರಾದ ಎಂ ಎಚ್ ಭಜಂತ್ರಿ ಎಸ್ ಎ ಸಂಗನಾಳ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಮಹಿಳಾ ವಕೀಲರು ಉಪಸ್ಥಿತರಿದ್ದರು.

ವರದಿ : ಮುತ್ತು ಗೋಸಲ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!