ಜಿಲ್ಲಾ ಸುದ್ದಿ

ಗೋವುಗಳ ಅಕ್ರಮ ಸಾಗಾಟ ಮತ್ತು ಹತ್ಯೆಯನ್ನು ನಿಲ್ಲಿಸಿ – ಹಿಂದೂಪರ ಸಂಘಟನೆಗಳ ಆಗ್ರಹ.

Share News

ಗೋವುಗಳ ಅಕ್ರಮ ಸಾಗಾಟ ಮತ್ತು ಹತ್ಯೆಯನ್ನು ನಿಲ್ಲಿಸಿ – ಹಿಂದೂಪರ ಸಂಘಟನೆಗಳ ಆಗ್ರಹ.

ಗಜೇಂದ್ರಗಡ : ಸತ್ಯಮಿಥ್ಯ (ಮೇ 23)

ಗೋವುಗಳ ಅಕ್ರಮ ಸಾಗಾಟ ಮತ್ತು ಹತ್ಯೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ವಿಶ್ವ ಹಿಂದೂ ಪರಿಷದ್ – ಭಜರಂಗದಳ ಗೋ ರಕ್ಷಾ ವಿಭಾಗ ಕರ್ನಾಟಕ ಉತ್ತರ ಪ್ರಾಂತದ ಗಜೇಂದ್ರಗಡ ತಾಲೂಕಾ ಘಟಕದವತಿಯಿಂದ ಅನೇಕ ಹಿಂದೂ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಪರ ಸಂಘಟನೆ ಮುಖಂಡ ಬಾಲಾಜಿರಾವ್ ಬೋಸ್ಲೆ. ಗೋವುಗಳು ರೈತರ ಜೀವನಾಡಿ. ಹಿಂದೂಗಳು ಗೋವುಗಳ ಸೆಗಣಿಯನ್ನು ಹಣೆಗೆ ವಿಭೂತಿ ರೂಪದಲ್ಲಿ ಧರಿಸಿದರೆ ಗೋಮೂತ್ರವನ್ನು ಔಷಧಿ ರೂಪದಲ್ಲಿ ಉಪಯೋಗಿಸುತ್ತಾರೆ . ಗೋವುಗಳನ್ನು ಹಿಂದೂಗಳು ತಾಯಿ ಸ್ವರೂಪದಲ್ಲಿ ಕಾಣುತ್ತೇವೆ. ಅಂತಹ ಪೂಜ್ಯನಿಯ ಗೋವುಗಳನ್ನು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡಿ ಹತ್ಯೆ ಗೈದು ಆಹಾರ ರೂಪದಲ್ಲಿ ಸೇವನೆ ಮಾಡಲಾಗುತ್ತಿದೆ .ಅಂತಹ ಸಂದರ್ಭದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆಯಲು ಪ್ರಯತ್ನಿಸಿದರೆ ನಮ್ಮ ಹಿಂದೂ ಕಾರ್ಯಕರ್ತರ ಮೇಲೆಯೇ ಉಲ್ಟಾ ಕೇಸ್ ಗಳನ್ನು ದಾಖಲಿಸಲಾಗುತ್ತಿದೆ. ಎಲ್ಲೆಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸುತ್ತಿದೆಯೋ ಅಲ್ಲೆಲ್ಲ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೃತ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಕೂಡಲೇ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಹಿಂದೂ ಪರ ಸಂಘಟನೆ ಮುಖಂಡ ಸಂಜೀವ ಕುಮಾರ ಜೋಷಿ ಮಾತನಾಡಿ. ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕು ಹಾಗೂ ಗೋವುಗಳ ಅಕ್ರಮ ಸಾಗಾಣಿಕೆ, ಹತ್ಯೆಗಳನ್ನು ಗ್ರಾಮ ಪಂಚಾಯತ್ ಪಿಡಿಓ ಸೇರಿದಂತೆ ತಾಲೂಕಿನ ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಆಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಶ್ವನಾಥ ಕುಷ್ಟಗಿ ಮಾತನಾಡಿ.ಗೊಹತ್ಯೆ ನಿಷೇದ ಕಾಯಿದೆ ಇದ್ದರು ಸಹ ನಿರಂತರವಾಗಿ ಗೋವುಗಳ ಮಾರಣ ಹೋಮ ನಡೆಯುತ್ತಿರುವದು ಹಿಂದೂಗಳ ಭಾವನೆಗಳಿಗೆ ಧಕ್ಕೆ ಯಾಗುತ್ತಿದೆ. ಕರ್ನಾಟಕ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಲ್ಲಿ ನಿರಂತರ ಹಿಂದೂ ವಿರೋಧಿ ದೋರಣೆ ನಿರಂತರವಾಗಿ ಜಾರಿಯಲ್ಲಿಟ್ಟಿದ್ದಾರೆ. ಸರ್ಕಾರಿ ಅಧಿಕಾರಿಗಳು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಕ್ರಮ ಗೋ ಸಾಗಾಣಿಕೆ ಮತ್ತು ಹತ್ಯೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗಜೇಂದ್ರಗಡ ಠಾಣೆ ಪಿಎಸ್ಐ ಪ್ರಕಾಶ್. ಡಿ. ಯವರಿಗೂ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಸಾದ ಬಡಿಗೇರ, ಮಹಾಂತೇಶ ಗಂಧದ, ಕಿರಣಕುಮಾರ, ರುದ್ರಮುನಿ ಹಿರೇಮಠ, ಆಕಾಶ ಆಂಬೊರೆ, ರಾಮು ಪವಾರ,ಪ್ರಶಾಂತ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!