ಜಿಲ್ಲಾ ಸುದ್ದಿ

ಅಸ್ತಮಾ ರೋಗಿಗಳಿಗೆ ಮಾತ್ರೆ : ಆಯುರ್ವೇದ ಔಷಧ ಸೇವಿಸಿ ಆರೋಗ್ಯವಾಗಿರಿ –

Share News

ಗಜೇಂದ್ರಗಡದ ಐತಿಹಾಸಿಕ ಟೆಕ್ಕೆದ ದರ್ಗಾದಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಮಂತ್ರೌಷಧಿ ಮಾತ್ರೆ ವಿತರಣೆ.

ಅಸ್ತಮಾ ರೋಗಿಗಳಿಗೆ ಉಚಿತ ಮಾತ್ರೆ ವಿತರಣೆ : ಆಯುರ್ವೇದ ಔಷಧ ಸೇವಿಸಿ ಆರೋಗ್ಯವಾಗಿರಿ.

ಗಜೇಂದ್ರಗಡ:ಸತ್ಯಮಿಥ್ಯ (ಜೂ-08)

ನಗರದ ಭಾವೈಕ್ಯತೆಯ ಕೇಂದ್ರ ಟಕ್ಕೇದ ದರ್ಗಾದಲ್ಲಿ ಮೃಗಶಿರ ಮಳೆ ನಕ್ಷತ್ರ ಪ್ರವೇಶದ ಹಿನ್ನೆಲೆಯಲ್ಲಿ ಅಸ್ತಮಾ ರೋಗಿಗಳಿಗೆ ಉಚಿತವಾಗಿ ಸಾಂಪ್ರದಾಯಿಕ ಔಷಧಿ ಮಾತ್ರೆಗಳನ್ನು ನಗರದ ಕಟ್ಟಿ ಬಸವೇಶ್ವರ ರಂಗ ಮಂದಿರದಲ್ಲಿ ಸೋಮವಾರ ವಿತರಿಸಲಾಯಿತು.

ಬಳಿಕ ದರ್ಗಾದ ಪ್ರಸಕ್ತ 8ನೇ ಪೀಠಾಧಿಪತಿಗಳಾದ ಹಜರತ್ ಸೈಯದ್ ನಿಜಾಮುದ್ದಿನ್ ಶಾ ಅರ್ಷಫಿ ಮಕಾನದಾರ ಆರ್ಶಿವಚನ ನೀಡಿ, ಬೆಳಗಿನಿಂದಲೇ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿವಿಧಾನಗಳು ಜರುಗಿದವು. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಪದ್ಧತಿಯಂತೆ, ಮೃಗಶಿರ ಮಳೆ ನಕ್ಷತ್ರದ 1.32 ಮುಹೂರ್ತದ ವೇಳೆಯಲ್ಲಿ ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಭಕ್ತರಿಗೆ ದರ್ಗಾದ ವತಿಯಿಂದ ಸಿದ್ಧಪಡಿಸಲಾದ ವಿಶೇಷ ಮೂಲಿಕಾ ಮಂತ್ರೌಷಧಿಯ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಟೆಕ್ಕೆದ ದರ್ಗಾವು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿದ್ದು ಇಲ್ಲಿ ಜಾತಿ, ಮತ, ಪಂಥದ ಭೇದವಿಲ್ಲದೆ ಎಲ್ಲ ವರ್ಗದ ಜನರು ಇಲ್ಲಿಗೆ ಆಗಮಿಸುತ್ತಾರೆ. ಮೃಗಶಿರ ನಕ್ಷತ್ರದ ದಿನ ಇಲ್ಲಿ ನೀಡಲಾಗುವ ಔಷಧಿಯಿಂದ ಉಸಿರಾಟದ ಕಾಯಿಲೆಗಳು ಗುಣಮುಖವಾಗುತ್ತವೆ ಎಂಬ ಗಾಢವಾದ ನಂಬಿಕೆ ಭಕ್ತರಲ್ಲಿದೆ. ನಮ್ಮ ದರ್ಗಾ ಕಮಿಟಿಯ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಆಗಮಿಸಿದ ಸಾರ್ವಜನಿಕರಿಗೆ ಕುಡಿಯುವ ನೀರು, ನೆರಳು ಮತ್ತು ಸೂಕ್ತ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದರು. ದರ್ಗಾದ ಪೀಠಾಧಿಪತಿಗಳು ಭಕ್ತರಿಗೆ ಆಶೀರ್ವದಿಸಿ, ಈ ಸಾಂಪ್ರದಾಯಿಕ ವೈದ್ಯಕೀಯ ಸೇವಾ ಪರಂಪರೆಯು ಸಮಾಜದ ಕಲ್ಯಾಣಕ್ಕಾಗಿ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.

ಬಳಿಕ ನಿಕಟಪೂರ್ವ ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ ಮಾತನಾಡಿ ಯಾವುದೇ ಫಲಾಪೇಕ್ಷೆ ಇಲ್ಲದೆ ಟೆಕ್ಕೇದ ದರ್ಗಾದ ಪೀಠಾಧಿಪತಿಗಳು ನಾಲ್ಕೈದು ದಶಕಗಳಿಂದ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಿಸುತ್ತಿರುವುದು ಸಮಾಜದ ಮೇಲಿನ ಕಾಳಜಿ ತೋರಿಸುತ್ತದೆ.ಯುವ ಸಮೂಹವೂ ಧೂಮಪಾನ, ಮದ್ಯಪಾನದಿಂದ ದೂರವಿರದಿದ್ದರೆ ಅಸ್ತಮಾದಂತ ರೋಗಗಳು ಬರುತ್ತವೆ. ಹೀಗಾಗಿ, ಯುವಕರು ದುಶ್ಚಟಗಳಿಂದ ದೂರವಿರಬೇಕು. ಮಾತ್ರೆ ಪಡೆದವರು ದುಶ್ಚಟಗಳನ್ನು ತ್ಯಜಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಅಂಜುಮನ ಇಸ್ಲಾಂ ಕಮಿಟಿ ನಿರ್ದೇಶಕ ದಾವಲಸಾಬ ತಾಳಿಕೋಟಿ, ಎಸ್.ಎಸ್.ನರೇಗಲ್‌, ಸುರೇಶ ಪತ್ತಾರ ಮಾತನಾಡಿದರು. ಇನ್ನೂ ಮೃಗಶಿರ ನಕ್ಷತ್ರದ ಆರಂಭದ ದಿನದಂದು ದರ್ಗಾದಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮಕ್ಕೆ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿ ಔಷಧಿಯನ್ನು ಪಡೆದುಕೊಂಡರು.

ಇನ್ನೂ ಇದೇ ಸಂದರ್ಭದಲ್ಲಿ ಉಡಚಪ್ಪ ಚನ್ನಮ್ಮನವರ, ಶ್ರೀಧರ ಬಿದರಳ್ಳಿ, ಹಸನಸಾಬ್ ತಟಗಾರ , ರಫಿಕ ತೋರಗಲ್ಲ,ಎಸ.ಎಸ್.ನರೇಗಲ್.‌ ಸುರೇಶ ಪತ್ತಾರ, ಮಾಸುಮಅಲಿ ಮದಗಾರ, ಖಾಜಾಮೈಜುದ್ದಿನ ಮಕಾನದಾರ,ಸಾಜೀದ ವಾಲಿಕಾರ, ಮಕ್ತುಂಸಾಬ ಗೋಡೆಕಾರ, ಶ್ರೀಧರ ಗಂಜಿಗೌಡ್ರ, ರಾಜಪ್ಪ ಹೊಸಮನಿ, ಪರಸಪ್ಪ ಹೊಸಮನಿ,ಬಾಷಾ ಹವಾಲ್ದಾರ, ಎಂ.ಎಸ್. ಮಕನದಾರ,ಅಬ್ಬು ಮದಗಾರ,ಚಾಂದಸಾಬ ಹವಾಲ್ದಾರ ಸೇರಿದಂತೆ ಅನೇಕರು ಇದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!