ಜಿಲ್ಲಾ ಸುದ್ದಿ

ಬಿಜೆಪಿ ಪರ ಜನಸಾಮಾನ್ಯರ ಬೆಂಬಲ ವ್ಯಾಪಕವಾಗಿ ವಿಸ್ತರಿಸುತ್ತಿದೆ-ಹಾಲಪ್ಪ ಆಚಾರ

Share News

ಬಿಜೆಪಿ ಪರ ಜನಸಾಮಾನ್ಯರ ಬೆಂಬಲ ವ್ಯಾಪಕವಾಗಿ ವಿಸ್ತರಿಸುತ್ತಿದೆ-ಹಾಲಪ್ಪ ಆಚಾರ

ಕೊಪ್ಪಳ: ಸತ್ಯಮಿಥ್ಯ ( ಅಗಸ್ಟ್ -30).

ವಿಕಸಿತ ಭಾರತಕ್ಕಾಗಿ ಬಿಜೆಪಿ ಸದಸ್ಯತಾ ಅಭಿಯಾನ ಇದಾಗಿದ್ದು ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಜಗತ್ತಿನ ಐದನೇ ಆರ್ಥಿಕ ಸದೃಢ ರಾಷ್ಟ್ರವಾಗಿರುವ ಭಾರತವು ಮತ್ತೊಂದು ಹೆಜ್ಜೆ ಮುಂದಿಟ್ಟು ಮೂರನೇ ಸ್ಥಾನ ಅಲಂಕರಿಸುವತ್ತ ಸಾಗಿದೆ..ಈ ನಿಟ್ಟಿನಲ್ಲಿ ಬಿಜೆಪಿ ಪರ ಜನಸಾಮಾನ್ಯರ ಬೆಂಬಲ ವ್ಯಾಪಕವಾಗಿ ವಿಸ್ತರಿಸುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ನುಡಿದರು.

ಕೊಪ್ಪಳ ಜಿಲ್ಲೆಯ ಕುಕುನೂರು ಪಟ್ಟಣದ ಭಾರತೀಯ ಜನತಾ ಪಾರ್ಟಿ ಪಕ್ಷದ ಕಾರ್ಯಾಲಯದಲ್ಲಿ ಮಂಡಲ ಕಾರ್ಯಕಾರಿಣಿ ಸಭೆ ಮತ್ತು ಸದಸ್ಯತ್ವ ಅಭಿಯಾನದ ಕಾರ್ಯಗಾರ ಉಧ್ಘಾಟಿಸಿ ಮಾತನಾಡಿದರು ಸೆಪ್ಟೆಂಬರ್ 2 ರಿಂದ ಆರಂಭವಾಗಲಿರುವ ಸದಸ್ಯತಾ ಅಭಿಯಾನವನ್ನು ದಾಖಲೆಯ ಪ್ರಮಾಣದಲ್ಲಿ ಸದಸ್ಯತ್ವ ನೊಂದಣಿ ಆಗುವ ನಿಟ್ಟಿನಲ್ಲಿ ವಿರಮಿಸದೇ ಶ್ರಮಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ಮಾರುತಿ ಗಾವರಾಳ ವಹಿಸಿದ್ದರು ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನವೀನ ಗುಳಗಣ್ಣವರ, ಮಂಡಲ ಪ್ರ.ಕಾರ್ಯದರ್ಶಿಗಳಾದ ಅಮರೇಶ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ, ಮುಖಂಡರಾದ ರತನ ದೇಸಾಯಿ, ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಶಿವಶಂಕರರ್ ರಾವ್ ದೇಸಾಯಿ, RDCC ಬ್ಯಾಂಕ್ ನಿರ್ದೇಶಕರಾದ ಗೌರಾ ಬಸವರಾಜ, ಶಂಕ್ರಪ್ಪ ಸುರಪುರ, ಶರಣಪ್ಪ ಈಳಗೇರ, ಶಿವಪ್ಪ ವಾದಿ, ಅಯ್ಯಪ್ಪ ಗುಳೆದ, ಗಾಳೆಪ್ಪ ಓಜಿನಹಳ್ಳಿ, ಸೋಮನಗೌಡ ಪಾಟೀಲ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಅಂದಾನಯ್ಯ ಕಳ್ಳಿಮಠ, ಶ್ರೀಮತಿ ಶಿವಲೀಲಾ ದಳವಾಯಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಸಂತೋಷಿಮಾ ಜೋಷಿ ಉಪಸ್ಥಿತರಿದ್ದರು.

ವರದಿ : ಚನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!