ಜಿಲ್ಲಾ ಸುದ್ದಿ

ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಮುತ್ತು ವಡ್ಡರ ಆಯ್ಕೆ.

Share News

ಕವಿ ಶ್ರೀ ಮುತ್ತು ವಡ್ಡರ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ.
Oplus_131072

ಹುನಗುಂದ : ಸತ್ಯಮಿಥ್ಯ (ಮೇ -23)

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ಹಾಗೂ ಕರುನಾಡು ಕಲ್ಪವೃಕ್ಷ ಫೌಂಡೇಶನ್ ರವರ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕಲ್ಪವೃಕ್ಷೋತ್ಸವ ದ್ವಿತೀಯ ಸಮ್ಮೇಳನ 2026-27ರ ಸಮ್ಮೇಳನದಲ್ಲಿ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಗಣಿತ ಶಿಕ್ಷಕರಾಗಿರುವ ಮುತ್ತು ವಡ್ಡರ ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಆಗಿರುವ ಕನಕ ಪ್ರೀತೀಶ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಹೆಚ್ ಎಸ್ ಗೌಡರ್ ಅವರು ತಿಳಿಸಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ಮುತ್ತು ವಡ್ಡರ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅತಿ ಸರಳ ಗಣಿತ, ಎಲೆಮರೆ ಕಾಯಿಗಳು, ಸನ್ಮಾರ್ಗದ ದುಂಬಿ ಮತ್ತು ಬದಲಾಗು ನೀ ಬೆಳಕಾಗು ನೀ ಎಂಬ ಸ್ಫೂರ್ತಿದಾಯಕ ಕೃತಿಗಳನ್ನು ರಚಿಸಿದ್ದಾರೆ. ಜೊತೆ ಜೊತೆಗೆ ನಾಡಿನ ಹಲವಾರು ಪತ್ರಿಕೆಗಳಿಗೆ ಕಥೆ, ನ್ಯಾನೋ ಕಥೆಗಳು, ಲೇಖನ ಹಾಗೂ ಕವನಗಳನ್ನು ಬರೆದು ಪ್ರಕಟಿಸಿದ್ದಾರೆ, ಇವರು ಪ್ರತಿನಿತ್ಯ ವ್ಯಾಟ್ಸಪ್ ಬಳಗದಲ್ಲಿ ಸುಮಾರು 6,000 ಜನರಿರುವ ಜ್ಞಾನಜ್ಯೋತಿ ದಿನಂಪ್ರತಿ ಎಂಬ ಬಳಗದಲ್ಲಿ ನಿತ್ಯ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಿದ್ದಾರೆ.ಇವರ ಶೈಕ್ಷಣಿಕ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ 2026-27 ನೇ ಸಾಲಿನ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಇದೇ ತಿಂಗಳು ದಿನಾಂಕ 28 ರಂದು ಬಾಗಲಕೋಟ ಜಿಲ್ಲೆಯ ಚಿಕ್ಕಮ್ಯಾಗೇರಿಯ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆಯುವ ಕಲ್ಪವೃಕ್ಷೋತ್ಸವ ದ್ವಿತೀಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಪ್ರಶಸ್ತಿಗೆ ಭಾಜನರಾಗಿರುವ ಶಿಕ್ಷಕ ಶ್ರೀ ಮುತ್ತು ವಡ್ಡರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!